Hockey Asia Cup: ಭಾರತಕ್ಕೆ ಭಾರೀ ಅಂತರದ ಗೆಲುವು: ಮೂವರು ಆಟಗಾರರ ಹ್ಯಾಟ್ರಿಕ್
ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 15-0 ಗೋಲುಗಳಿಂದ ಕಜಕಿಸ್ತಾನ ತಂಡವನ್ನು ಮಣಿಸಿದೆ. ಈ ಮೂಲಕ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 9 ಅಂಕಗಳೊಂದಿಗೆ ಎ ಗುಂಪಿನಲ್ಲಿ ಮೊದಲ ಸ್ಥಾನವನ್ನು ಪಡೆದು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಏಕಪಕ್ಷೀಯ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಕಜಕಿಸ್ತಾನದ ಆಟಗಾರರು ಗೋಲು ಬಾರಿಸಲು ಭಾರತೀಯ ಆಟಗಾರರು ಬಿಡಲೇ ಇಲ್ಲ. ಈ ಪಂದ್ಯದಲ್ಲಿ ಭಾರತೀಯ ರಕ್ಷಣಾ ಆಟ, ಆಕ್ರಮಣಕಾರಿ ಆಟ ಅಮೋಘವಾಗಿತ್ತು. ಭಾರತ ಆರಂಭದ ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಮೊದಲ ಪಂದ್ಯದಲ್ಲಿ ಭಾರತ 4-3 ಗೋಲುಗಳ ಅಂತರದಿಂದ ಚೀನಾವನ್ನು, ಎರಡನೇ ಪಂದ್ಯದಲ್ಲಿ 3-2 ಅಂತರದಿಂದ ಜಪಾನ್ ತಂಡವನ್ನು ಸೋಲಿಸಿತ್ತು. ಸೋಮವಾರ ಮೂರನೇ ಗೆಲುವಿನ ನಗೆ ಬೀರಿದೆ.

ಭಾರತ ಮೊದಲಾರ್ಧದಲ್ಲೇ 7-0 ಮುನ್ನಡೆ ಸಾಧಿಸಿತ್ತು. ಎರಡನೇ ಅರ್ಧದಲ್ಲೂ ಭಾರತ ಈ ಗೋಲಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಈ ವೇಳೆ ಭಾರತದ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಟೀಮ್ ಇಂಡಿಯಾ ಮೊದಲಾವಧಿಯಲ್ಲಿ 3, ಎರಡನೇ ಅವಧಿಯಲ್ಲಿ 4, ಮೂರನೇ ಅವಧಿಯಲ್ಲಿ 4, ಕೊನೆಯ ಅವಧಿಯಲ್ಲಿ 3 ಗೋಲು ಬಾರಿಸಿದ ಭಾರತೀಯ ಆಟಗಾರರು ಅಬ್ಬರಿಸಿದರು.
ಮೂವರು ಭಾರತೀಯ ಆಟಗಾರರ ಹ್ಯಾಟ್ರಿಕ್
ಪಂದ್ಯದಲ್ಲಿ ಮೂವರು ಭಾರತೀಯ ಆಟಗಾರರು ಹ್ಯಾಟ್ರಿಕ್ ಬಾರಿಸಿದರು. ಅಭಿಷೇಕ್ ಮೊದಲು 5 ನೇ ನಿಮಿಷ, 8 ನೇ ನಿಮಿಷ, 20 ನೇ ನಿಮಿಷ, 59 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸುಖ್ಜೀತ್ ಸಿಂಗ್ 15 ನೇ ನಿಮಿಷ, 32 ನೇ ನಿಮಿಷ, 38 ನೇ ನಿಮಿಷ ಗೋಲು ಗಳಿಸಿದರು. ಜುಗ್ರಾಜ್ ಸಿಂಗ್ ಕೂಡ ಮೂರು ಗೋಲುಗಳನ್ನು ಗಳಿಸಿದರು. ಅವರು 24,31, 47 ನೇ ನಿಮಿಷದಲ್ಲಿ ಮೂರನೇ ಗೋಲು ಗಳಿಸಿ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಅಮಿತ್ ರೋಹಿದಾಸ್ , ರಾಜಿಂದರ್ ಸಿಂಗ್, ಸಂಜಯ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್ ಮತ್ತು ದಿಲ್ಪ್ರೀತ್ ಸಿಂಗ್ ತಲಾ ಒಂದು ಗೋಲು ಗಳಿಸಿದರು.
ಸೂಪರ್ 4 ಹಂತಕ್ಕೆ 4 ತಂಡ
ಎ ಗುಂಪಿನಿಂದ ಭಾರತ ಸೇರಿದಂತೆ ಚೀನಾ ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ. ಭಾರತ ಮೂರು ಗೆಲುವುಗಳೊಂದಿಗೆ ಒಟ್ಟು 9 ಅಂಕಗಳನ್ನು ಹೊಂದಿದ್ದರೆ, ಚೀನಾ ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ. ಇನ್ನೊಂದು ಗುಂಪಿನಿಂದ ಮಲೇಷ್ಯಾ ಮತ್ತು ಕೊರಿಯಾ ಸೂಪರ್ 4 ಗೆ ಪ್ರವೇಶಿಸಿವೆ. ಮಲೇಷ್ಯಾ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು 9 ಅಂಕ ಸೇರಿಸಿದರೆ, ಕೊರಿಯಾ 6 ಅಂಕಗಳನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications