ICC Test Ranking: ದಶಕಗಳ ಬಳಿಕ ಆಸೀಸ್ ವಿರುದ್ಧ ಸೋತ ಭಾರತ ಶ್ರೇಯಾಂಕದಲ್ಲಿ ಕುಸಿತ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನಿರಾಸೆ ಅನುಭವಿಸಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಕೋನದಿಂದ ಮಹತ್ವ ಪಡೆದಿತ್ತು. ಈ ಸರಣಿಯನ್ನು ಟೀಮ್ ಇಂಡಿಯಾ 4-1ರಿಂದ ಗೆಲುವು ದಾಖಲಿಸಿದ್ದರೆ, ಸುಲಭವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಪಡೆಯಬಹುದಿತ್ತು. ಆದರೆ ಟೀಮ್ ಇಂಡಿಯಾ ನಿರಾಸೆ ಅನುಭವಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಪ್ರವೇಶಿಸುವ ಕನಸು ನುಚ್ಚುನೂರಾಗಿದೆ.
ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರ್ತ್ ಟೆಸ್ಟ್ ಗೆಲುವು ಹಾಗೂ ಬ್ರಿಸ್ಬೇನ್ ಟೆಸ್ಟ್ ಡ್ರಾ ಸಾಧಿಸಿದ್ದು ಬಿಟ್ಟರೆ ಉಳಿದೆಲ್ಲ ಕಡೆ ನಿರಾಸೆ ಬಹುವಾಗಿ ಕಾಡಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಸರಣಿಯ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಸತತ ಎರಡು ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಸರಣಿ ಗೆದ್ದಿದ್ದ ಭಾರತ ಮೂರನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸು ವಿಫಲವಾಗಿದೆ. ಈ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲೂ ಕುಸಿತ ಕಂಡಿದೆ.

ಭಾರತಕ್ಕೆ ಎಷ್ಟನೇ ಸ್ಥಾನ
ಆಸ್ಟ್ರೇಲಿಯಾ ವಿರುದ್ಧ 3-1 ಅಂತರದ ಸೋಲು ಟೀಮ್ ಇಂಡಿಯಾದ ಸ್ಥಾವನ್ನು ಕುಸಿತ ಮಾಡಿದೆ. ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ಸರಣಿ ಸಹ ನಡೆಯುತ್ತಿದೆ. ಹೀಗಾಗಿ ಪ್ರತಿ ಸರಣಿಯ ಬಳಿಕವೂ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರೀ ಬದಲಾವಣೆಗಳು ಆಗುತ್ತವೆ. ಟೀಮ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ತನ್ನ ಬಿಗಿ ಹಿಡಿತವನ್ನು ಹೊಂದಿತ್ತು. ಸತತ ಸೋಲುಗಳಿಂದ ಟೀಮ್ ಇಂಡಿಯಾದ ರೇಟಿಂಗ್ ಕಡಿಮೆ ಆಗಿದೆ. ಭಾರತ ಸದ್ಯ 109 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗುವುದಕ್ಕೂ ಮುನ್ನ ಟೀಮ್ ಇಂಡಿಯಾ ಎರಡನೇ ಶ್ರೇಯಾಂಕದಲ್ಲಿತ್ತು.
ಅಗ್ರ ಸ್ಥಾನದಲ್ಲಿರುವ ತಂಡ ಯಾವುದು?
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಬಳಿಕವೂ ಎರಡನೇ ಸ್ಥಾನದಲ್ಲೇ ಇತ್ತು. ಆದರೆ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ತಂಡವನ್ನು ಮಣಿಸುತ್ತಿದ್ದಂತೆ ಎಲ್ಲವೂ ತಲೆ ಕೆಳಗಾಯಿತು. ದಕ್ಷಿಣ ಆಫ್ರಿಕಾ 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆಸೀಸ್ 126 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಹೊಂದಿದೆ.

ಡಬಬ್ಲ್ಯುಟಿಸಿ ಫೈನಲ್‌ನಿಂದ ಭಾರತ ಹೊರಕ್ಕೆ
ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದ ಭಾರತ, ಮೂರನೇ ಬಾರಿ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಪ್ರವೇಶಿಸುವ ಕನಸು ವಿಫಲವಾಗಿದೆ. ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಜೂನ 11 ರಂದು ನಡೆಯಲಿದೆ. ಭಾರತ ಈ ಟೂರ್ನಿಯಲ್ಲಿ 2021, 2023ರ ಫೈನಲ್ ಆಡಿ ಸೈ ಎನಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications