ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ ಇಂದು

india england 1st match preview on thursday

ನಾಟಿಂಗ್‌ಹಾಮ್, ಜುಲೈ 12: ಮುಂಬರುವ ವಿಶ್ವಕಪ್ ಟೂರ್ನಿಯ ದೃಷ್ಟಿಯಿಮದ ಭಾರತಕ್ಕೆ ಹೆಚ್ಚು ಮಹತ್ವದ್ದಾಗಿರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ.

ಇತ್ತೀಚಿನ ಅಂಕಿಅಂಶಗಳನ್ನು ನೋಡಿದಾಗ ಉಭಯ ತಂಡಗಳು ಸಮ ಬಲಾಬಲ ಹೊಂದಿದೆ ಎನ್ನುವುದು ಕಾಣಿಸುತ್ತದೆ.

ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್, ತನ್ನ ಕೊನೆಯ 12 ದ್ವಿಪಕ್ಷೀಯ ಸರಣಿಗಳಲ್ಲಿ 10ರಲ್ಲಿ ಗೆದ್ದುಕೊಂಡಿದೆ.

ಭಾರತದ ಬೌಲರ್‌ಗಳನ್ನು ಕಾಡಿದ ವಿಂಡೀಸ್ ಬಾಲಂಗೋಚಿಗಳುಭಾರತದ ಬೌಲರ್‌ಗಳನ್ನು ಕಾಡಿದ ವಿಂಡೀಸ್ ಬಾಲಂಗೋಚಿಗಳು

ಭಾರತ ಅಷ್ಟೇ ಸರಣಿಗಳಲ್ಲಿ 9 ಸರಣಿಗಳನ್ನು ಗೆದ್ದುಕೊಂಡಿದೆ.ಐಸಿಸಿ Rankingನ ಮೊದಲ 20 ಸ್ಥಾನಗಳಲ್ಲಿ ಎರಡೂ ದೇಶಗಳ ಎಂಟು ಆಟಗಾರರು ಇದ್ದಾರೆ.

ಇಂಗ್ಲೆಂಡ್‌ ತನ್ನ ಮುಂಚೂಣಿ ಬೌಲರ್ ಕ್ರಿಸ್ ವೋಕ್ಸ್ ಹಾಗೂ ಭಾರತ ಜಸ್‌ಪ್ರೀತ್ ಬೂಮ್ರಾ ಅವರ ಅಲಭ್ಯತೆಯ ಹೊರತಾಗಿಯೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ.

ಈ ಎರಡೂ ದೇಶಗಳು 2017ರಲ್ಲಿ ಭಾರತದಲ್ಲಿ ಮುಖಾಮುಖಿಯಾಗಿದ್ದವು. ತವರಿನ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿತ್ತು.

ಭಾರತದ ಫ್ಲಾಟ್ ಪಿಚ್‌ಗಳಲ್ಲಿ ಇಂಗ್ಲೆಂಡ್ ಬೌಲರ್‌ಗಳ ಸಾಮರ್ಥ್ಯಕ್ಕೆ ಅಗ್ನಿ ಪರೀಕ್ಷೆ ಎದುರಾಗಿತ್ತು. ಇಂಗ್ಲೆಂಡ್ ನೆಲದಲ್ಲಿ ಪರಿಸ್ಥಿತಿ ವಿಭಿನ್ನವಾಗಿರಲಿದೆ. ಆದರೆ, ಹೊಸ ಚೆಂಡಿನಲ್ಲಿ ಮತ್ತು ಕೊನೆಯ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಬಲ್ಲ ಕ್ರಿಸ್ ವೋಕ್ಸ್ ಅನುಪಸ್ಥಿತಿ ಇಂಗ್ಲೆಂಡ್ ತಂಡಕ್ಕೆ ಹೊಡೆತ ನೀಡಲಿದೆ.

ಭಾರತಕ್ಕೆ ಜಸ್‌ಪ್ರೀತ್ ಬೂಮ್ರಾ ಅಲಭ್ಯತೆಯನ್ನು ತುಂಬಿಕೊಡುವ ಬೌಲರ್ ಇಲ್ಲ. ಭಾರತ ಬ್ಯಾಟಿಂಗ್‌ ಶಕ್ತಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

2014ರಲ್ಲಿ ಉಭಯ ತಂಡಗಳು ಇಂಗ್ಲೆಂಡ್‌ನಲ್ಲಿ ಮುಖಾಮುಖಿಯಾದಾಗ ಭಾರತ 3-1ರಿಂದ ಸರಣಿ ಗೆದ್ದಿತ್ತು.

ಗಾಯಗೊಂಡಿರುವ ಅಲೆಕ್ಸ್ ಹೇಲ್ಸ್ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನಕ್ಕೆ ಡೇವಿಡ್ ಮಲನ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ತಂಡದಲ್ಲಿ ಆಡುವ ಅವಕಾಶ ಸಿಗುವುದು ಖಚಿತವಿಲ್ಲ.

ಭುವನೇಶ್ವರ್ ಕುಮಾರ್ ಫಿಟ್ನೆಸ್ ಭಾರತಕ್ಕೆ ತಲೆನೋವಾಗಿದೆ. ಒಂದು ವೇಳೆ ಭುವಿ ಆಡದೆ ಇದ್ದರೆ ಉಮೇಶ್ ಯಾದವ್ ಜತೆ ಶಾರ್ದೂಲ್ ಠಾಕೂರ್ ಅಥವಾ ಸಿದ್ಧಾರ್ಥ್ ಕೌಲ್ ಹೊಸ ಚೆಂಡು ಹಂಚಿಕೊಳ್ಳುವ ಸಾಧ್ಯತೆ ಇದೆ. '

ಪಂದ್ಯದ ಸಮಯ
ಸಂಜೆ 5.00 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ನೆಟ್‌ವರ್ಕ್ಸ್

Story first published: Thursday, July 12, 2018, 16:20 [IST]
Other articles published on Jul 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X