For Quick Alerts
ALLOW NOTIFICATIONS  
For Daily Alerts
 

IND vs ENG Test: ಮೊದಲ ಇನಿಂಗ್ಸ್‌ನಲ್ಲಿ ಉಭಯ ತಂಡಗಳ ರನ್‌ ಸಮ: ರೋಚಕ ಘಟ್ಟದತ್ತ ಲಾರ್ಡ್ಸ್‌ ಟೆಸ್ಟ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಪರ ಕೆಎಲ್ ರಾಹುಲ್ ಬಾರಿಸಿದ ಶತಕ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ, ರಿಷಭ್‌ ಪಂತ್ ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನಿಂಗ್ಸ್‌ನಲ್ಲಿ ಅಷ್ಟೇ ರನ್‌ಗಳನ್ನು ಕಲೆ ಹಾಕಿದವು. ದಶತಕದ ಬಳಿಕ ಎರಡೂ ತಂಡಗಳು ಒಂದು ಇನಿಂಗ್ಸ್‌ನಲ್ಲಿ ಸಮಾನದ ರನ್‌ ಕಲೆ ಹಾಕಿ ದಾಖಲೆಯ ಪುಟಕ್ಕೆ ಈ ಪಂದ್ಯ ಎಂಟ್ರಿ ನೀಡಿತು.

ಶನಿವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 145 ರನ್‌ಗಳಿಂದ ಆಟ ಮುಂದುವರೆಸಿತು. ನಾಲ್ಕನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಜೊಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲಾವಧಿಯ ಕೊನೆಯ ವರೆಗೂ ಎಚ್ಚರಿಕೆಯ ಬ್ಯಾಟ್ ಮಾಡಿತು. ಈ ವೇಳೆ ಈ ಜೊಡಿ 198 ಎಸೆತಗಳನ್ನು ಎದುರಿಸಿ 141 ರನ್‌ಗಳ ಕಾಣಿಕೆ ನೀಡಿತು. ಆದರೆ ರಿಷಭ್‌ ಪಂತ್‌ ಭೋಜನ ವಿರಾಮದ ಕೊನೆಯ ಓವರ್‌ನಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

India England level scores in 3rd Test Rahul s century Pant amp amp Jadeja s fifties shine

ರಿಷಭ್ ಪಂತ್‌ 112 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 72 ರನ್‌ ಬಾರಿಸಿ ಮಿಂಚಿದರು. ಕನ್ನಡಿಗ ಕೆಎಲ್ ರಾಹುಲ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಇವರು 177 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 100 ರನ್‌ ಬಾರಿಸಿ ಔಟ್ ಆದರು.

ಭರ್ಜರಿ ಜೊತೆಯಾಟ

ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ ಬಹು ಸಮಯ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿತು. ಈ ಜೋಡಿ 165 ಎಸೆತಗಳಲ್ಲಿ 72 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. 30 ರನ್‌ ಬಾರಿಸಿ ಭರವಸೆಯ ಮೂಡಿಸಿದ್ದ ನಿತೀಶ್‌ ಕುಮಾರ್ ರೆಡ್ಡಿ ಇಲ್ಲದ ಹೊಡೆತಕ್ಕೆ ಮುಂದಾಗಿ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.

India England level scores in 3rd Test Rahul s century Pant amp amp Jadeja s fifties shine

ಏಳನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್‌ ಹಾಗೂ ರವೀಂದ್ರ ಜಡೇಜಾ ಜೋಡಿ ಸಹ ತಂಡಕ್ಕೆ ಆಧಾರವಾಯಿತು. ಈ ಜೊಡಿ 113 ಎಸೆತಗಳಲ್ಲಿ 50 ರನ್‌ ಸೇರಿಸಿತು. ಈ ವೇಳೆ ಜಡೇಜಾ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 72 ರನ್‌ ಬಾರಿಸಿ ಅಬ್ಬರಿಸಿತು. ವಾಷಿಂಗ್ಟನ್‌ ಸುಂದರ್‌ 23 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 387 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಕ್ರಿಸ್‌ ವೋಕ್ಸ್‌ 3, ಜೋಫ್ರಾ ಆರ್ಚರ್‌, ಬೆನ್‌ ಸ್ಟೋಕ್ಸ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

Story first published: Saturday, July 12, 2025, 23:00 [IST]
Other articles published on Jul 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+