For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಲಯನ್ಸ್ ಎದುರು ಸಂಕಷ್ಟದಲ್ಲಿ ಭಾರತ 'ಎ' ತಂಡ

india a england lions unofficial test 2nd day report

ವರ್ಸೆಸ್ಟರ್, ಜುಲೈ 18: ಇಂಗ್ಲೆಂಡ್ ಲಯನ್ಸ್ ತಂಡದ ಎದುರು ನಡೆಯುತ್ತಿರುವ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಸಂಕಷ್ಟದ ಸ್ಥಿತಿಯಲ್ಲಿದೆ.

ಎರಡನೆಯ ದಿನದ ಅಂತ್ಯಕ್ಕೆ ಭಾರತ ಎ ತಂಡ 4 ವಿಕೆಟ್ ಕಳೆದುಕೊಂಡು 144 ರನ್ ಮಾಡಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳಲು ಇನ್ನೂ 279 ರನ್‌ ಗಳಿಸಬೇಕಾಗಿದೆ.

ಆರಂಭದಲ್ಲಿಯೇ ನಿರಂತರವಾಗಿ ವಿಕೆಟ್‌ ಕಳೆದುಕೊಂಡ ಭಾರತ, ಇಂಗ್ಲೆಂಡ್ ಬೌಲರ್‌ಗಳ ಎದುರು ಪರದಾಡಿತು. ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್‌, ಮಯಂಕ್ ಅಗರ್‌ವಾಲ್ ಮತ್ತು ನಾಯಕ ಕರುಣ್ ನಾಯರ್ ಬೇಗನೆ ವಿಕೆಟ್ ಒಪ್ಪಿಸಿದರು.

ಅದರ ನಡುವೆಯೇ ಆರಂಭಿಕ ಆಟಗಾರ ಪೃಥ್ವಿ ಶಾ ತಮ್ಮ ಎಂದಿನ ಆಕ್ರಮಣಕಾರಿ ಶೈಲಿನ ಆಟ ಮುಂದುವರಿಸಿ ಅರ್ಧಶತಕ ದಾಖಲಿಸಿದರು.

93 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಅನುಭವಿ ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಆಸರೆಯಾದರು.

ನಿಧಾನಗತಿಯ ಆಟಕ್ಕೆ ಮೊರೆ ಹೋದ ರಹಾನೆ 85 ಎಸೆತದಲ್ಲಿ 26 ರನ್ ಗಳಿಸಿದ್ದರೆ, ರಿಷಬ್ ಪಂತ್ 57 ಎಸೆತಗಳಲ್ಲಿ 37 ರನ್ ಬಾರಿಸಿ, ಮುರಿಯದ ಐದನೇ ವಿಕೆಟ್‌ಗೆ 51 ರನ್ ಜೋಡಿಸಿದ್ದಾರೆ.

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್ ಆಟ ಮುಂದುವರಿಸಿದ ಇಂಗ್ಲೆಂಡ್ ಲಯನ್ಸ್ ಎರಡನೆಯ ದಿನ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು.

ಅಲೆಸ್ಟರ್ ಕುಕ್ 180 ರನ್ ಗಳಿಸಿ ಔಟಾದರು. ಭಾರತದ ಪರ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಹಬಾಜ್ ನದೀಮ್ ಮಿಂಚಿದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: ಮೊದಲ ಇನ್ನಿಂಗ್ಸ್ 423/10 (128.5) ಅಲೆಸ್ಟರ್ ಕುಕ್ 180, ನಿಕ್ ಗುಬ್ಬಿನ್ಸ್ 73, ಡೇವಿಡ್ ಮಲನ್ 74, ಮೊಹಮ್ಮದ್ ಸಿರಾಜ್ 79/4, ಶಹಬಾಜ್ ನದೀಮ್ 46/3, ಅಂಕಿತ್ ರಜಪೂತ್ 64/2

ಭಾರತ: ಮೊದಲ ಇನ್ನಿಂಗ್ಸ್ 144/4 (44) ಪೃಥ್ವಿ ಶಾ 62, ಅಜಿಂಕ್ಯ ರಹಾನೆ 26*, ರಿಷಬ್ ಪಂತ್ 37*, ಜೇಮ್ಸ್ ಪೋರ್ಟರ್ 25/1, ಮ್ಯಾಥ್ಯೂ ಫಿಶರ್ 24/2

Story first published: Wednesday, July 18, 2018, 12:09 [IST]
Other articles published on Jul 18, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+