ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದಿನಿಂದ ಆಂಗ್ಲರ ನಾಡಲ್ಲಿ ಚುಟುಕು ಕ್ರಿಕೆಟ್ ಕದನ ಶುರು

IND vs ENG 1st T20 : ಇವತ್ತಿನ ಪಂದ್ಯದ ಸಂಕ್ಷಿಪ್ತ ವಿವರ | Oneindia Kannada

ಮ್ಯಾಂಚೆಸ್ಟರ್, ಜುಲೈ 3: ಭಾರತದ ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯ ಮಂಗಳವಾರ (ಜುಲೈ 3) ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ಟಿ20 ಪಂದ್ಯವನ್ನು ಗೆದ್ದು ಹುಮ್ಮಸ್ಸಿನಿಮದ ಬೀಗುತ್ತಿರುವ ಇಂಗ್ಲೆಂಡ್ ತಂಡಕ್ಕೆ ಭಾರತ ತಂಡ ಸವಾಲೊಡ್ಡುವಷ್ಟು ಬಲಿಷ್ಠವಾಗಿದೆ.

ಆಸ್ಟ್ರೇಲಿಯಾಕ್ಕಿಂತ ಭಾರತ ಇಂಗ್ಲೆಂಡ್ ಗೆ ಹೆಚ್ಚು ಸವಾಲೆನಿಸಲಿದೆ: ಕೊಹ್ಲಿ ಆಸ್ಟ್ರೇಲಿಯಾಕ್ಕಿಂತ ಭಾರತ ಇಂಗ್ಲೆಂಡ್ ಗೆ ಹೆಚ್ಚು ಸವಾಲೆನಿಸಲಿದೆ: ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಸುಲಭ ಗೆಲುವು ದಾಖಲಿಸಿದ್ದ ಇಂಗ್ಲೆಂಡ್ ಎಲ್ಲ ವಿಭಾಗಗಳಲ್ಲಿಯೂ ಪ್ರಬಲವಾಗಿದೆ. ಉತ್ತಮವಾಗಿ ಆಲ್‌ರೌಂಡರ್‌ಗಳು ತಂಡದಲ್ಲಿದ್ದಾರೆ.

ಭಾರತದ ಬ್ಯಾಟಿಂಗ್ ಶಕ್ತಿಯುತವಾಗಿದ್ದರೂ, ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ನಷ್ಟು ಪ್ರಬಲವಾಗಿಲ್ಲ. ಭುವನೇಶ್ವರ್ ಕುಮಾರ್ ಅವರ ಮೇಲೆ ಬೌಲಿಂಗ್ ದಾಳಿ ಅವಲಂಬಿತವಾಗಿದೆ. ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿ ಪರಿಣಾಮ ಉಂಟುಮಾಡಬಲ್ಲದು.

ಬೌಲಿಂಗ್ ಪಡೆ ಮೇಲೆ ಒತ್ತಡ

ಸ್ಪಿನ್ನರ್‌ಗಳಾದ ಯಜುರ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಟಿ20ಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದರೆ, ಇಂಗ್ಲೆಂಡ್ ನೆಲದಲ್ಲಿ ಆಡಿದ ಅನುಭವ ಅವರಿಗಿಲ್ಲ. ಅಲ್ಲದೆ ಸ್ಪಿನ್‌ಗೆ ಪಿಚ್ ನೆರವು ನೀಡದಿದ್ದರೆ ಬ್ಯಾಟ್ಸ್‌ಮನ್‌ಗಳ ಆಕ್ರಮಣಕ್ಕೆ ತುತ್ತಾಗಬಹುದು.

ಮತ್ತೊಬ್ಬ ವೇಗದ ಬೌಲರ್‌ಗೆ ಅನುಭವಿ ಉಮೇಶ್ ಯಾದವ್, ಐರ್ಲೆಂಡ್‌ ವಿರುದ್ಧ ಮೊದಲ ಪಂದ್ಯ ಆಡಿರುವ ಸಿದ್ಧಾರ್ಥ್ ಕೌಲ್ ಹಾಗೂ ಹೊಸ ಮುಖ ದೀಪಕ್ ಚಾಹರ್ ನಡುವೆ ಪೈಪೋಟಿ ಇದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಕಾಣಿಕೆ ನೀಡಬಲ್ಲರು. ಮತ್ತೊಬ್ಬ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವಕಾಶ ಗಿಟ್ಟಿಸುವ ಸಾಧ್ಯತೆ ಕಡಿಮೆ.

ಬ್ಯಾಟಿಂಗ್ ಬಲವೇ ಹೆಚ್ಚು

ಬ್ಯಾಟಿಂಗ್‌ನಲ್ಲಿ ಭಾರತ ಯಾರ ಮೇಲೂ ಅವಲಂಬಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾದರೂ, ಆರಂಭಿಕ ಆಟಗಾರರ ಮೇಲೆ ತಂಡದ ಪ್ರದರ್ಶನ ನೆಚ್ಚಿಕೊಂಡಿದೆ.

ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನಲ್ಲಿರುವ ನಾಯಕ ವಿರಾಟ್ ಕೊಹ್ಲಿ, ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಕೆ.ಎಲ್. ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು. ಇಲ್ಲವೇ ಆರಂಭಿಕರನ್ನಾಗಿ ಕಳುಹಿಸಿದರೂ ಅಚ್ಚರಿಯಿಲ್ಲ.

ಆರಂಭಿಕ ಆಟಗಾರ ಮತ್ತು ಮಧ್ಯಮ ಕ್ರಮಾಂಕ ಮೀಸಲಾಗಿದ್ದರೆ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವುದೂ ಸಾಧ್ಯವಾಗುವುದಿಲ್ಲ.

ಸುರೇಶ್ ರೈನಾ, ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಉಳಿದ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲರು. ಸತತ ಅವಕಾಶಗಳ ನಡುವೆಯೂ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವ ಮನೀಶ್ ಪಾಂಡೆ ಬದಲು ದಿನೇಶ್ ಕಾರ್ತಿಕ್ ಸ್ಥಾನ ಪಡೆಯಬಹುದು.

ಇಂಗ್ಲೆಂಡ್ ಉಭಯ ಸಂಕಟ!

ಇಂಗ್ಲೆಂಡ್ ಉಭಯ ಸಂಕಟ!

ಇತ್ತ ಕ್ರಿಕೆಟ್, ಅತ್ತ ಫುಟ್ಬಾಲ್. ಯಾವುದನ್ನು ನೋಡುವುದು ಎಂಬ ಗೊಂದಲ ಇಂಗ್ಲೆಂಡ್‌ನ ಕ್ರೀಡಾಪ್ರೇಮಿಗಳನ್ನು ಕಾಡುತ್ತಿದೆ.

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್‌ನಲ್ಲಿ ಇಂಗ್ಲೆಂಡ್ ತಂಡವು ಕೊಲಂಬಿಯಾ ವಿರುದ್ಧ ಸೆಣಸಲಿದೆ.

ಈ ಎರಡೂ ಪಂದ್ಯಗಳು ಹೆಚ್ಚೂ ಕಡಿಮೆ ಏಕಕಾಲಕ್ಕೆ ನಡೆಯಲಿವೆ. ಆದರೆ , ಫುಟ್ಬಾಲ್ ಪಂದ್ಯದಿಂದ ಟಿ20 ಪಂದ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿಯೂ ಪ್ರಯೋಗ

ಇಂಗ್ಲೆಂಡ್‌ನಲ್ಲಿಯೂ ಪ್ರಯೋಗ

ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಗಳು ಒಂದೇ ದಿನ ನಡೆಯುತ್ತಿರುವುದು ಇಂಗ್ಲೆಂಡ್‌ಗೆ ಇದು ಮೊದಲಲ್ಲ. ಪನಾಮ ವಿರುದ್ಧದ ಮೊದಲ ಸುತ್ತಿನ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ 6-1 ಅಂತರದ ಭರ್ಜರಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧ ಓಲ್ಡ್‌ ಟ್ರಾಫೊರ್ಡ್‌ನಲ್ಲಿ ನಡೆದ ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಭಾರಿ ಗೆಲುವು ಸಾಧಿಸಿತ್ತು.

ಇದೇ ರೀತಿಯ ಫಲಿತಾಂಶ ಭಾರತದ ವಿರುದ್ಧವೂ ದಕ್ಕಲಿದೆ ಎಂದು ಇಂಗ್ಲೆಂಡ್ ವಿಶ್ವಾಸ ವ್ಯಕ್ತಪಡಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದ ವೇಳೆಯೂ ಇದೇ ರೀತಿಯ ಸನ್ನಿವೇಶವಿತ್ತು. ಆಗ ಕ್ರೀಡಾಂಗಣದ ಹೊರಭಾಗದ ಕಾರ್ ಪಾರ್ಕ್ ಬಳಿ ಬೃಹತ್ ಪರದೆ ಅಳವಡಿಸಲಾಗಿತ್ತು.

ಜನರು ಹೊರಗೆ ಹೋಗಿ ಪರದೆ ಮೇಲೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಪನಾಮ ಪಂದ್ಯದ ನಡುವೆಯೂ ನಮಗೆ ಪ್ರೇಕ್ಷಕರ ಪ್ರೋತ್ಸಾಹ ಕಡಿಮೆಯಾಗಿರಲಿಲ್ಲ. ಆದರೆ, ಇಂದಿನ ಪಂದ್ಯ ಹೇಗಿರುತ್ತದೆಯೋ ಎನ್ನುವುದು ಆಸಕ್ತಿಕರವಾಗಿದೆ ಎಂದು ಮಾರ್ಗನ್ ಹೇಳಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ ಅವರಂತೆಯೇ ಮಾರ್ಗನ್ ಕೂಡ ಬ್ಯಾಟ್ಸ್‌ಮನ್‌ಗಳ ಕ್ರಮಾಂಕದಲ್ಲಿ ಬದಲಾವಣೆಯ ಪ್ರಯೋಗ ನಡೆಸುವುದಾಗಿ ಹೇಳಿದ್ದಾರೆ.

ಪಂದ್ಯದ ವಿವರ
ಭಾರತ- ಇಂಗ್ಲೆಂಡ್ ಮೊದಲ ಟಿ20
ಪಂದ್ಯದ ಸಮಯ: ರಾತ್ರಿ 10 (ಭಾರತೀಯ ಕಾಲಮಾನ)
ಸ್ಥಳ: ಮ್ಯಾಂಚೆಸ್ಟರ್.

Story first published: Tuesday, July 3, 2018, 12:07 [IST]
Other articles published on Jul 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X