ವಿಶ್ವ ಒಳಾಂಗಣ ಅಥ್ಲೆಟಿಕ್ಸ್ 2028: ಭುವನೇಶ್ವರದ ಕಳಿಂಗ ಕ್ರೀಡಾಂಗಣ ಪರಿಶೀಲಿಸಿದ ಅಂತರಾಷ್ಟ್ರೀಯ ನಿಯೋಗ
ವಿಶ್ವ ಅಥ್ಲೆಟಿಕ್ಸ್‌ನ ಪ್ರಮುಖ ನಿಯೋಗ ಹಾಗೂ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಅಧಿಕಾರಿಗಳ ಜೊತೆಗೆ ಬುಧವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣವನ್ನು ಪರಿಶೀಲಿಸಿತು. ಈ ಭೇಟಿಯು ಭಾರತ 2028 ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್‌ಶಿಪ್ ಆಯೋಜಿಸುವ ಮಹತ್ವಾಕಾಂಕ್ಷೆಯನ್ನು ಒತ್ತಿ ಹೇಳುವಂತಿದೆ. ಅಲ್ಲದೆ ಕಳಿಂಗ ಕ್ರೀಡಾಂಗಣ ಸಂಕೀರ್ಣದಲ್ಲಿನ ಅತ್ಯಾಧುನಿಕ ಸೌಲಭ್ಯಗಳ ಪರಿಚಯ ಮಾಡಿಸುವಂತೆ ಇದೆ.
ಬುಧವಾರ ಓಡಿಶಾದ ಕ್ರೀಡಾ ಯುವಜನ ಸೇವೆಗಳ ಸಚಿವ ಸೂರ್ಯಬಂಶಿ ಸೂರಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆಯ ಆಯುಕ್ತ ಹಾಗೂ ಕಾರ್ಯದರ್ಶಿ ಸಚಿನ್ ಆರ್. ಜಾಧವ್, ವಿಶ್ವ ಅಥ್ಲೆಟಿಕ್ಸ್‌ನ ಉಪಾಧ್ಯಕ್ಷ ಆದಿಲ್ಲೆ ಜೆ. ಸುಮರಿವಾಲಾ, ವಿಶ್ವ ಅಥ್ಲೆಟಿಕ್ಸ್‌ನ ಅಧಿಕಾರಿಗಳಾದ ಮಾರ್ಟನ್ ಗ್ಯುಲೈ, ಮಾರ್ಕ್ ಹರ್ಸ್ಟ್, ಎಎಫ್‌ಐ ಯ ತಾಂತ್ರಿಕ ಸಮಿತಿಯ ಅಧ್ಯಕ್ಷ, ರವೀಂದರ್ ಚೌಧರಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಓಡಿಶಾ ಎಲ್ಲ ಕ್ರೀಡಾ ಕೂಟಗಳಿಗೆ ಅಗತ್ಯವಾದ ಸೌಲಭ್ಯ ನೀಡಲಿದೆ. ಕ್ರೀಡೆಗೆ ಈ ರಾಜ್ಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವಿದೆ. ಇದೇ ನಗರದಲ್ಲಿ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಪಂದ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ವರ್ಷವೂ ನಾವು ಈ ಕ್ರೀಡಾಕೂಟವನ್ನು ಆಯೋಜಿಸಲಿದ್ದೇವೆ. ನಮ್ಮ ಪರಿಶ್ರಮಕ್ಕೆ ಇಲ್ಲಿ ನೆರೆದ ಎಲ್ಲರೂ ಸಹಾಯ ಮಾಡುವ ವಿಶ್ವಾಸ ನಮ್ಮದಾಗಿದೆ ಎಂದು ಸಚಿವ ಸೂರ್ಯಬಂಶಿ ಸೂರಜ್ ತಿಳಿಸಿದ್ದಾರೆ.
ಭಾರತವು 2028 ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ತಯಾರಿ ನಡೆಸುತ್ತಿದೆ. ಇದು ನಮ್ಮ ಪ್ರಧಾನಿ ಮೋದಿ ಅವರ ಕನಸಾಗಿದೆ. ಇಲ್ಲಿಯ ಮೂಲ ಸೌಕರ್ಯ ಹಾಗೂ ಆತಿಥ್ಯ ಜಾಗತಿಕ ಮಾನದಂಡಗಳಿಗೆ ಸಮನಾಗಿರುತ್ತದೆ ಎಂದು ಕ್ರೀಡಾ ಕಾರ್ಯದರ್ಶಿ ಸುಮರಿವಾಲಾ ಹೇಳಿದ್ದಾರೆ.
ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಒಡಿಶಾ ಸಹ ಒಂದಾಗಿದೆ. ಈ ನಗರ ದೊಡ್ಡ ಕ್ರೀಡಾ ಕೂಟಗಳ ಆಯೋಜನೆಯ ಅನುಭವ ಹೊಂದಿದೆ. ಇದೇ ರಾಜ್ಯದಿಂದ ಭಾರತವನ್ನು ಹಲವು ಓಟಗಾರರು ಪ್ರತಿನಿಧಿಸಿದ್ದಾರೆ. ಅಥ್ಲೆಟಿಕ್ಸ್ ಬೆಳವಣಿಗೆಗೆ ನಮ್ಮ ರಾಜ್ಯ ಬದ್ಧವಾಗಿದೆ. ಇದೇ ರೀತಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ವಿಶ್ವಾಸ ನಮ್ಮದಾಗಿದೆ. 2028 ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಿ ವಿಶ್ವ ಅಥ್ಲೆಟಿಕ್ಸ್ ಮತ್ತು ಎಎಫ್‌ಐ ಜೊತೆ ಸಹಯೋಗ ಬಯಸುತ್ತಿದ್ದೆ ಎಂದು ಕ್ರೀಡಾ ಕಾರ್ಯದರ್ಶಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications