Adelaide Test: ವಿಶೇಷ ದಾಖಲೆಯ ಮೇಲೆ ರೋಹಿತ್ ಪಡೆಯ ಕಣ್ಣು
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರತ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಹೊಂದಿದೆ. ಇನ್ನು ಡೇ-ಆಂಡ್ ನೈಟ್ ಟೆಸ್ಟ್‌ನಲ್ಲಿ ರೋಹಿತ್ ಪಡೆ ಜಯ ಸಾಧಿಸಿದ್ದೇ ಆದಲ್ಲಿ, ಇತಿಹಾಸದ ಪುಟಕ್ಕೆ ಎಂಟ್ರಿ ಪಡೆಯುವ ಸಾಧ್ಯತೆ ಇದೆ. ಹಾಗಿದ್ದರೆ, ಟೀಮ್ ಇಂಡಿಯಾ ಬರೆಯಲು ಹೋರಟಿರುವ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಈ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾ, ಟೀಕೆಗೆ ಗುರಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಗೆಲುವು ಟೀಮ್ ಇಂಡಿಯಾದ ಆತ್ಮವಿಶ್ವಾಸವನ್ನು ಇಮ್ಮಡಿ ಮಾಡಿರುತ್ತದೆ.

ಯಾವ ದಾಖಲೆಯ ಮೇಲೆ ಟೀಮ್ ಇಂಡಿಯಾ ಕಣ್ಣು?
ಟೀಂ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಅದು ಡಬ್ಲ್ಯುಟಿಸಿ ಫೈನಲ್‌ಗೆ ಹತ್ತಿರವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಯನ್ನು ಸಹ ಭಾರತ ತನ್ನದಾಗಿಸಿಕೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಇನ್ನು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ವೇಳೆ ಇತಿಹಾಸ ನಿರ್ಮಿಸುವ ಕನಸು ರೋಹಿತ್ ಪಡೆಯದ್ದಾಗಿದೆ.
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಒಟ್ಟು 12 ಪಂದ್ಯಗಳನ್ನು ವಿದೇಶಿ ನೆಲದಲ್ಲಿ ಗೆದ್ದಿದೆ. ಭಾರತ 2019ರಿಂದ ವಿದೇಶಿ ನೆಲದಲ್ಲಿ ಒಟ್ಟು 25 ಟೆಸ್ಟ್ ಪಂದ್ಯ ಆಡಿದ್ದು, ಅವುಗಳಲ್ಲಿ 12ರಲ್ಲಿ ಜಯ ಸಾಧಿಸಿದೆ. ಇಷ್ಟೇ ಪಂದ್ಯವನ್ನು ಇಂಗ್ಲೆಂಡ್ ಸಹ ಗೆದ್ದಿದ್ದು, ಉಭಯ ತಂಡಗಳು ವಿದೇಶಿ ನೆಲದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನವನ್ನು ಪಡೆದಿವೆ. ಆಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಈ ಸಂಖ್ಯೆ ಹೆಚ್ಚಾಗುತ್ತದೆ.

ಆಸೀಸ್ ಎಷ್ಟು ಪಂದ್ಯ ಗೆದ್ದಿದೆ?
ಆಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ನಂಬರ್ 1 ಸ್ಥಾನವನ್ನು ಪಡೆಯುವ ಕನಸು ಕಾಣುತ್ತಿದೆ. ಇನ್ನು ಇದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸಾಲಿನಲ್ಲಿ ಇಂಗ್ಲೆಂಡ್ ಸಹ ಇನ್ನು ಹಲವು ಪಂದ್ಯಗಳನ್ನು ಆಡಲಿದ್ದು, ಈ ಸ್ಥಾನ ಏರಿಳಿತವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯ ವಿರುದ್ಧ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಭಾರತಕ್ಕೆ ಮುಖ್ಯ. ಒಂದು ವೇಳೆ ಹೀಗೆ ಆದಲ್ಲಿ ಟೀಮ್ ಇಂಡಿಯಾ ವಿದೇಶದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ. ಅಲ್ಲದೆ ನಂಬರ್ 1 ಸ್ಥಾನ ಉಳಿಸಿಕೊಳ್ಳಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ಇದುವರೆಗೆ 22 ಪಂದ್ಯಗಳನ್ನು ಆಡಿದ್ದು, 10 ಪಂದ್ಯಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications