ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇನ್ನು ಸರಣಿಯಲ್ಲಿ ಪುಟಿದೇಳುವ ಕನಸಿನಲ್ಲಿ ಇಂಗ್ಲೆಂಡ್ ತಂಡವಿದೆ. ಈ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಇನ್ನು ಎರಡೂ ಪಂದ್ಯಗಳು ಬಾಕಿ ಇರುವಂತೆ, ಸರಣಿ ವಶಕ್ಕೆ ಮಾಡಿಕೊಳ್ಳುವ ಮಹದಾಸೆ ಸೂರ್ಯಕುಮಾರ್ ಯಾದವ್ ಬಳಗಾದ್ದಾಗಿದೆ.
ಟೀಮ್ ಇಂಡಿಯಾ ಪರ ಎರಡೂ ಪಂದ್ಯಗಳಲ್ಲಿ ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿದರೆ, ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಅಮೋಘ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಇನ್ನು ಮೂರನೇ ಟಿ20 ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಯಾರು ಆರ್ಭಟಿಸಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನು ರಾಜ್‌ಕೋಟ್ ಪಿಚ್ ಹೇಗೆ ವರ್ತಿಸಲಿದೆ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.

ರಾಜ್‌ಕೋಟ್‌ನಲ್ಲಿ ಈ ವರೆಗೆ ಐದು ಟಿ20 ಪಂದ್ಯಗಳಿಗೆ ನಿರಂಜನ್ ಶಾ ಸಾಕ್ಷಿಯಾಗಿದೆ. ಈ ಪಿಚ್ ಬ್ಯಾಟರ್‌ಗಳಿಗೆ ಸಾಹಯಾವಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ಬ್ಯಾಟಗೆ ಸುಲಭವಾಗಿ ಬರುತ್ತದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಸ್ಕೋರ್ ಕಲೆ ಹಾಕುತ್ತದೆ. ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಎರಡು ಪಂದ್ಯ ಎರಡನೇ ಬಾರಿ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಈ ಪಂದ್ಯದಲ್ಲಿ ಪಿಚ್‌ನ ಪಾತ್ರ ಬಹಳ ಮುಖ್ಯವಾಗಲಿದೆ. ಟಾಸ್ ಈ ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಈ ಮೈದಾನದಲ್ಲಿ ಐದು ಪಂದ್ಯಗಳು ನಡೆದಿದ್ದು, ಭಾರತ ನಾಲ್ಕು ಪಂದ್ಯಗಳನ್ನು ಗೆದ್ದು ಕೊಂಡಿದೆ. ಈ ಮೈದನಾದಲ್ಲಿ ಕಳೆದ ಬಾರಿ ಪಂದ್ಯ ನಡೆದಿದ್ದಾಗ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದರು. ಇವರು 2023ರಲ್ಲಿ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 112 ರನ್ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಇವರು ಈ ಪಂದ್ಯದಲ್ಲಿ ಅಬ್ಬರಿಸಿ ದಾಖಲೆ ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಈ ಮೈದಾನದಲ್ಲಿ ಪಂದ್ಯ ಮುಗಿಯುತ್ತಾ ಸಾಗಿದಂತೆ ಪರಿಸ್ಥಿತಿಗಳು ಕಠಿಣವಾಗುತ್ತವೆ. ಹೀಗಾಗಿ ಈ ಮೈದಾನದಲ್ಲಿ ಗುರಿಯನ್ನು ಬೆನ್ನಟ್ಟುವುದು ಸುಲಭವಲ್ಲ. ಹೀಗಾಗಿ ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸುತ್ತದೆ.

ಅತಿ ಹೆಚ್ಚು ರನ್: ಭಾರತ vs ಶ್ರೀಲಂಕಾ 2023 ರಲ್ಲಿ, 228/5
ಕಡಿಮೆ ಸ್ಕೋರ್: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 2022 ರಲ್ಲಿ, 87 ರನ್‌ಗೆ ಆಲೌಟ್
ಬೆಸ್ಟ್ ಚೇಸ್: ಭಾರತ ವಿರುದ್ಧ ಆಸ್ಟ್ರೇಲಿಯಾ 2013ರಲ್ಲಿ, 19.4 ಓವರ್‌ಗಳಲ್ಲಿ
ಬೆನ್ನಟ್ಟಿದ ಗರಿಷ್ಠ ಗುರಿ: 2013 ರಲ್ಲಿ ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ 19.4 ಓವರ್‌ಗಳಲ್ಲಿ 202/4