IND vs ENG 2nd ODI: ಸರಣಿ ಗೆಲುವೋ, ಸಮಬಲವೋ: ರೋಚಕತೆ ಹೆಚ್ಚಿಸಿದ ಫೈಟ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ ಭಾನುವಾರ ಕಟಕ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದು ಆತ್ಮ ವಿಶ್ವಾಸದಲ್ಲಿರುವ ರೋಹಿತ್ ಪಡೆ, ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಪ್ಲ್ಯಾನ್ ಮಾಡಿಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕಂ ಬ್ಯಾಕ್ ಮಾಡುವ ಕನಸನ್ನು ಇಂಗ್ಲೆಂಡ್ ಹಾಕಿಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಏನೆಲ್ಲಾ ಬದಲಾವಣೆ ಕಾಣಬಹುದು ಎಂಬ ಬಗ್ಗೆ ವಿವರ ಇಲ್ಲಿದೆ.
ಭಾನುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಯಕ್ಕೆ ಮರಳಲು ಸ್ಟಾರ್ ಆಟಗಾರರ ಇದು ಕೊನೆಯ ಚಾನ್ಸ್ ಆಗಿರಲಿದೆ. ಈ ಪಂದ್ಯದಲ್ಲಿ ತಮ್ಮ ಸ್ಥಿರ ಪ್ರದರ್ಶನನ್ನು ನೀಡಿ ಎದುರಾಳಿ ಬೌಲರ್‌ಗಳನ್ನು ಕಾಡಬೇಕಿದೆ?

ವಿರಾಟ್ ಇನ್
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಕಾರಣದಿಂದ ಮೈದಾನದಿಂದ ಹೊರ ನಡೆದಿದ್ದರು. ಈ ವೇಳೆ ಯಶಸ್ವಿ ಜೈಸ್ವಾಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಲಭಿಸಿತು. ಆದರೆ ಸಿಕ್ಕ ಅವಕಾಶದಲ್ಲಿ ಅಬ್ಬರಿಸುವಲ್ಲಿ ಯುವ ಬ್ಯಾಟರ್ ವಿಫಲರಾಗಿದ್ದರು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಮತ್ತೆ ತಂಡವನ್ನು ಸೇರಿದರೆ, ಯಶಸ್ವಿ ಜೈಸ್ವಾಲ್ ಬೆಂಚ್ ಕಾಯಬಹುದು.
ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಬಹುದಾಗಿದೆ. ಇನ್ನು ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ನೋಡಬಹುದಾಗಿದೆ. ಶ್ರೇಯಸ್ ಅಯ್ಯರ್ ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಕೆಎಲ್ ರಾಹುಲ್ ಅವರಿಗೆ ಈ ಮೈದಾನದಲ್ಲಿ ಆಡಿದ ಅನುಭವ ಇದ್ದು ಜವಾಬ್ದಾರಿ ಹೆಚ್ಚಿದೆ.
ಆಲ್‌ರೌಂಡರ್ ಮೇಲೆ ಕಣ್ಣು
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶವನ್ನು ನೀಡಬೇಕಿದೆ. ಇನ್ನು ಈ ಕಟಕ್ ಅಂಗಳದಲ್ಲಿ ಜಡ್ಡು ಸ್ಥಿರ ಪ್ರದರ್ಶನ ನೀಡಿರುವ ಪ್ಲೇಯರ್. ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರೆಸಲು ಸ್ಟಾರ್ ಆಲ್‌ರೌಂಡರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಶಮಿ ಆಕರ್ಷಣೆ
ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿದ್ದು, ಇದಕ್ಕೂ ಮುನ್ನ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿಗುವ ಇನ್ನೇರಡು ಅವಕಾಶದಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಇದು ಶಮಿ ಅವರಿಗೆ ಒಳ್ಳೆಯ ಅವಕಾಶ. ಇನ್ನು ಮೊದಲ ಪಂದ್ಯದಲ್ಲಿ ಪದಾರ್ಪಣೆಯ ಅವಕಾಶವನ್ನು ಪಡೆದಿದ್ದ ಹರ್ಷಿತ್ ರಾಣಾ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ಎರಡನೇ ಪಂದ್ಯದಲ್ಲೂ ಬಿಗುವಿನ ದಾಳಿ ನಡೆಸಬೇಕಿದೆ.
ಒತ್ತಡದಲ್ಲಿ ಪ್ರವಾಸಿ ತಂಡ
ಇನ್ನು ಪ್ರವಾಸಿ ಇಂಗ್ಲೆಂಡ್ ತಂಡ ಒತ್ತಡದಲ್ಲಿದೆ. ಈಗಾಗಲೇ ಭಾರತ ನೆಲದಲಿ ಟಿ20 ಸರಣಿ ಹಾಗೂ ಮೊದಲ ಏಕದಿನ ಪಂದ್ಯವನ್ನು ಕೈ ಚೆಲ್ಲಿರುವ ಪ್ರವಾಸಿ ತಂಡ, ಭರ್ಜರಿ ಕಂ ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications