ಮಹಿಳಾ ಟಿ20 ವಿಶ್ವಕಪ್: ಭಾರತ, ಆಸ್ಟ್ರೇಲಿಯಾ ನಡುವೆ ಮಹತ್ವದ ಫೈಟ್: ಗೆಲುವಿನ ಒತ್ತಡದಲ್ಲಿ ಹರ್ಮನ್ ಪ್ರೀತ್ ಪಡೆ
ದುಬೈ: ಮಹಿಳಾ ಟಿ20 ವಿಶ್ವಕಪ್ ಎಲ್ಲರ ಚಿತ್ತ ಕದ್ದಿದೆ. ಟೀಮ್ ಇಂಡಿಯಾ ಸಹ ಸ್ಥಿರ ಪ್ರದರ್ಶನವನ್ನು ನೀಡಿ ಎಲ್ಲರ ಗಮನ ಸೆಳೆದಿದೆ. ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ವನಿಯತೆಯರು, ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಅಮೋಘ ಜಯ ದಾಖಲಿಸಿದೆ. ಈಗ ನಾಲ್ಕನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಭಾನುವಾರ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಇದು ಟೀಮ್ ಇಂಡಿಯಾ ಪಾಲಿಗೆ ಕೊನೆಯ ಲೀಗ್ ಪಂದ್ಯವಾಗಿರಲಿದೆ. ಹರ್ಮನ್ ಪ್ರೀತ್ ಪಡೆ ಸೆಮಿಫೈನಲ್ ಹಂತ ತಲುಪಲು ಆಸೀಸ್ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾದ ಚಿಂತೆ ಹೆಚ್ಚಾಗಲಿದೆ. ಅಲ್ಲದೆ ಉಪಾಂತ್ಯ ಸೇರುವ ಕನಸು ಕಷ್ಟವಾಗಲಿದೆ.

ಆಸ್ಟ್ರೇಲಿಯಾಗೆ ಅಗ್ರ ಸ್ಥಾನ
ಗ್ರುಪ್ ಎ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ, 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಆಸೀಸ್ ಭಾರತವನ್ನು ಸೋಲಿಸಿದಲ್ಲಿ ಸೆಮಿಫೈನಲ್ ಕನಸು ನನಸಾಗಲಿದೆ. ಇನ್ನು ಭಾರತ ಈ ಪಂದ್ಯವನ್ನು ಗೆದ್ದಲ್ಲಿ ಉಪಾಂತ್ಯ ಪ್ರವೇಶಿಸುವ ಕನಸು ಹತ್ತಿರವಾಗುತ್ತದೆ. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಅಂತರದ ಗೆಲುವು ಅನಿವಾರ್ಯ.
ಆಸ್ಟ್ರೇಲಿಯಾ ಭಾರತವನ್ನು ಮಣಿಸಿದರೆ ಏನಾಗುತ್ತದೆ?
ಆಸ್ಟ್ರೇಲಿಯಾ, ಭಾರತ ತಂಡವನ್ನು ಮಣಿಸಿದ್ದೇ ಆದಲ್ಲಿ, ಹರ್ಮನ್ ಪ್ರೀತ್ ಪಡೆಯ ಸೆಮಿಫೈನಲ್ ಆಸೆ ಕ್ಷೀಣಿಸುತ್ತದೆ. ಹೀಗೆ ಆದಲ್ಲಿ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಮೇಲೆ ತಾನು ಮುನ್ನಡೆಯುವುದನ್ನು ತೀರ್ಮಾನಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕ್ ತಂಡವನ್ನು ಸೋಲಿಸಬೇಕಿದೆ.
ನ್ಯೂಜಿಲೆಂಡ್ ಬಳಿ ಇನ್ನು ಎರಡು ಪಂದ್ಯಗಳು ಉಳಿದಿವೆ. ಕಿವೀಸ್ ನೆಟ್ ರೆಟ್ ಮೈನಸ್‌ನಲ್ಲಿದೆ. ಇನ್ನು ಪಾಕ್ ಇನ್ನೊಂದೇ ಪಂದ್ಯವನ್ನು ಆಡಬೇಕಿದೆ. ಪಾಕ್ ಬಳಿ ಎರಡು ಅಂಕಗಳಿವೆ.

ರನ್ ರೇಟ್ ಮೇಲೆ ಗಮನ ಅನಿವಾರ್ಯ
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಹಾಗೂ ನೆಟ್ ರನ್‌ರೇಟ್ ಮೇಲೆ ದೃಷ್ಟಿ ನೆಡಬೇಕಾಗುತ್ತದೆ. ಅಲ್ಲದೆ ಭಾರತ ಈ ಪಂದ್ಯವನ್ನು ಗೆದ್ದು ಆಸೀಸ್ ರನ್ ರೇಟ್‌ಗಿಂತಲೂ ಹೆಚ್ಚು ರನ್ ರೇಟ್ ಸಾಧಿಸುವ ಅನಿವಾರ್ಯತೆ ಇದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಗೆಲುವಿನ ಕನಸು ಕಾಣುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಈ ವರೆಗೆ ಭರ್ಜರಿ ಪ್ರದರ್ಶನ ನೀಡಿದೆ. ಭಾನುವಾರ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ನೋಡಬಹುದಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿಯರು ಉತ್ತಮ ಲಯದಲ್ಲಿದ್ದು, ಗೆಲುವಿನ ಆಸೆ ಚಿಗುರಿಸಿದ್ದಾರೆ. ಶ್ರೀಲಂಕಾ ವಿರುದ್ಧ ನೀಡಿರುವ ಆಲ್‌ರೌಂಡರ್ ಪ್ರದರ್ಶನವನ್ನು ನೀಡಿದರೆ, ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications