ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾದ ಕಾರಣ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ದೊಡ್ಡ ಹೊಡೆತ ಬಿದ್ದಿದೆ. ಜೂನ್‌ನಲ್ಲಿ ನಡೆಯಲಿರುವ 5 ದಿನಗಳ ಡಬ್ಲ್ಯುಟಿಸಿ ಫೈನಲ್ ಪಂದ್ಯದ ವೇಳೆ, ಕ್ರಿಕೆಟ್‌ನ ಮೆಕ್ಕಾ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನವು ಟೀಮ್ ಇಂಡಿಯಾ ಅನುಪಸ್ಥಿತಿಯಿಂದ ಸುಮಾರು 4 ಮಿಲಿಯನ್ ಪೌಂಡ್‌ಗಳ (ಭಾರತದ ರೂಪಾತಿಗಳಲ್ಲಿ 45 ಕೋಟಿ 13 ಲಕ್ಷ ರೂ.) ಆದಾಯ ನಷ್ಟವನ್ನು ಅನುಭವಿಸಲಿದೆ ಎಂದು ವರದಿಗಳಾಗಿವೆ.
ಕಳೆದ ಎರಡು ಡಬ್ಲ್ಯುಟಿಸಿ ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿದ್ದ ಭಾರತ, ಈ ಬಾರಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಮತ್ತು ಟೆಂಬಾ ಬವುಮಾ ಮುನ್ನಡೆಸುತ್ತಿರುವ ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನಕ್ಕಾಗಿ ಈಗ ಮುಖಾಮುಖಿಯಾಗಲಿವೆ.

ಡಬ್ಲ್ಯುಪಿಎಲ್ 2025ರ ಫೈನಲ್‌ಗೆ ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾದ ಕಾರಣ ಲಾರ್ಡ್ಸ್ ಸುಮಾರು 4 ಮಿಲಿಯನ್ ಪೌಂಡ್‌ಗಳನ್ನು (ಸುಮಾರು 45 ಕೋಟಿ 13 ಲಕ್ಷ ರೂ.) ಕಳೆದುಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಭಾರತದ ಅನುಪಸ್ಥಿತಿಯು ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿರೀಕ್ಷಿಸುವ ಆರ್ಥಿಕ ಪ್ರಯೋಜನಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಜಾಗತಿಕ ಆಟದಲ್ಲಿ ಭಾರತೀಯ ಕ್ರಿಕೆಟ್‌ನ ಆರ್ಥಿಕ ಪ್ರಭಾವವನ್ನು ತೋರಿಸುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯಲ್ಲಿ 0-3 ಅಂತರದ ಹೀನಾಯ ಸೋಲು ಅನುಭವಿಸುವವರೆಗೂ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಇದಾದ ನಂತರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-3 ಅಂತರದಿಂದ ಭಾರತ ಸೋಲು ಕಂಡಿತ್ತು. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಡಬ್ಲ್ಯುಪಿಎಲ್ 2025ರ ಫೈನಲ್ ರೇಸ್‌ನಿಂದ ಹೊರಗುಳಿದಿತ್ತು.
ಭಾರತ ತಂಡ ಡಬ್ಲ್ಯುಪಿಎಲ್ 2025ರ ಫೈನಲ್ ತಲುಪುವ ನಿರೀಕ್ಷೆಯಿಂದಾಗಿ ಎಂಸಿಸಿ ಪ್ರೀಮಿಯಂ ಟಿಕೆಟ್ ಬೆಲೆಗಳನ್ನು ಹೆಚ್ಚಿಸಿತ್ತು. ಆದಾಗ್ಯೂ, ಭಾರತ ಫೈನಲ್ ತಲುಪುವುದಿಲ್ಲ ಎಂದು ಸ್ಪಷ್ಟವಾದಾಗ, ಎಂಸಿಸಿ ತನ್ನ ತಂತ್ರವನ್ನು ಬದಲಾಯಿಸಿ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿದೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ನ ಟೆಸ್ಟ್ ಸರಣಿಯ ಸಮಯದಲ್ಲಿ ಪಂದ್ಯದ ನಾಲ್ಕನೇ ದಿನದಂದು ಕೇವಲ 9000 ಪ್ರೇಕ್ಷಕರು ಮಾತ್ರ ಹಾಜರಿದ್ದರು. ಇದರಿಂದಾಗಿ ಎಂಸಿಸಿ ಪಂದ್ಯದ ಟಿಕೆಟ್ ಬೆಲೆಗಳನ್ನು ಮರುಪರಿಶೀಲಿಸಬೇಕಾಯಿತು.
ಈಗ ಡಬ್ಲ್ಯುಪಿಎಲ್ 2025ರ ಫೈನಲ್ ಟಿಕೆಟ್ ದರಗಳನ್ನೂ ಈಗ 40 ಪೌಂಡ್ (4500 ರೂ.) ಮತ್ತು 90 ಪೌಂಡ್ (10100 ರೂ.) ನಡುವೆ ಇರಿಸಲಾಗಿದೆ. ಇದು ಮೂಲ ಟಿಕೆಟ್ ದರಕ್ಕಿಂತ ಸುಮಾರು 50 ಪೌಂಡ್ (ಸುಮಾರು 5600 ರೂ.) ಕಡಿಮೆಯಾಗಿದೆ. ಡಬ್ಲ್ಯುಟಿಸಿ ಫೈನಲ್ ಪಂದ್ಯ ಜೂನ್ 11ರಿಂದ 15ರವರೆಗೆ ನಡೆಯಲಿದೆ.