ಶ್ರೀಲಂಕಾ ಪ್ರವಾಸದಲ್ಲಿ ಫ್ಲಾಫ್ ಆದ ಸ್ಟಾರ್ ಬ್ಯಾಟರ್ಸ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ
ಶ್ರೀಲಂಕಾ ಪ್ರವಾಸದಲ್ಲಿ ಭಾರತ ಏಕದಿನ ತಂಡ ನಿರಾಸೆಯನ್ನು ಅನುಭವಿಸಿದೆ. ಈ ಸರಣಿಯಲ್ಲಿ ಭರವಸೆಯನ್ನು ಮೂಡಿಸಿದ್ದ ಸ್ಟಾರ್ ಟೀಮ್ ಇಂಡಿಯಾದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ರನ್ ಕಲೆ ಹಾಕುವಲ್ಲಿ ವಿಫಲರಾದ ಆಟಗಾರರಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ.
ಶ್ರೀಲಂಕಾ ಪ್ರವಾಸದಲ್ಲಿ ಟಿ20 ಸರಣಿಯನ್ನು ವಶ ಪಡಿಸಿಕೊಂಡಿದ್ದ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ಕೈ ಚೆಲ್ಲಿದೆ. ಈ ಸರಣಿಯಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಸ್ಟಾರ್ ಆಟಗಾರರು ಹಾಗೂ ಯುವ ಬ್ಯಾಟರ್‌ಗಳು ನಿರಾಸೆ ಅನುಭವಿಸಿದ್ದಾರೆ. ಅಲ್ಲದೆ ಈ ಆಟಗಾರರಿಗೆ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರ ಬೀಳುವ ಆತಂಕ ಕಾಡುತ್ತಿದೆ.
ಶ್ರೀಲಂಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರನ್ನು ಹೊರತು ಪಡಿಸಿದರೆ, ಬೇರೆಲ್ಲಾ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯೋಚಿಸುತ್ತಿರುವ ಟೀಮ್ ಇಂಡಿಯಾ, ತನ್ನ ಮೂವರು ಆಟಗಾರರ ಫಾರ್ಮ್ ಹೀಗೆ ಮುಂದುವರೆದರೆ ತಂಡದಿಂದ ಕೈ ಬಿಡುವ ಸಾಧ್ಯತೆ ಇದೆ. ಈ ಭಯ ತಂಡದ ಆಟಗಾರರಿಗೂ ಕಾಡುತ್ತಿದೆ.

ಶುಭಮನ್‌ಗಿಲ್
ದ್ವೀಪರಾಷ್ಟ್ರದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಈ ಸರಣಿಯಲ್ಲಿ ಅವರು ವಿಶೇಷ ಸಾಧನೆ ಮಾಡಲು ಆಗಲಿಲ್ಲ. ಸತತ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ಇವರ ಫಾರ್ಮ್ ನಿಜಕ್ಕೂ ಚಿಂತೆ ಹುಟ್ಟಿಸಿದೆ. ಒಂದು ವೇಳೆ ಇದೇ ರೀತಿ ಫಾರ್ಮ್ ಮುಂದುವರೆಸಿದರೆ ತಂಡದಿಂದ ಇವರು ಹೊರ ನಡೆಯುವ ಸಾಧ್ಯತೆ ಹೆಚ್ಚಿದೆ. ಗಿಲ್ ಬಹು ದಿನಗಳಿಂದ ರನ್ ಕಲೆ ಹಾಕಲು ವಿಫಲರಾಗುತ್ತಿದ್ದಾರೆ.
| ಕ್ರಮ ಸಂಖ್ಯೆ | ಹೆಸರು | ಪಂದ್ಯ | ರನ್ | ಸರಾಸರಿ |
| 1 | ಶುಭಮನ್ ಗಿಲ್ | 3 | 57 | 19.33 |
| 2 | ಕೆ.ಎಲ್ ರಾಹುಲ್ | 2 | 31 | 15,50 |
| 3 | ಶ್ರೇಯಸ್ ಅಯ್ಯರ್ | 3 | 38 | 12.66 |

ಶ್ರೇಯಸ್ ಅಯ್ಯರ್
ಬಹಳ ದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಬ್ಯಾಟರ್ ಶ್ರೇಯಸ್ ಅಯ್ಯರ್, ಪ್ರವಾಸದಲ್ಲಿ ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಶ್ರೇಯಸ್ 12.66ರ ಸರಾಸರಿಯಲ್ಲಿ 38 ರನ್ ಕಲೆ ಹಾಕಿದ್ದಾರೆ. ಈ ಫಾರ್ಮ್ ನಿಜಕ್ಕೂ ಶ್ರೇಯಸ್ ಅವರ ಚಿಂತೆಯನ್ನು ಹೆಚ್ಚಿಸಿದೆ.

ಕನ್ನಡಿಗ ರಾಹುಲ್
ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಕೆ.ಎಲ್ ರಾಹುಲ್, ಶ್ರೀಲಂಕಾ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರಿಗೆ ಕೇವಲ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇವರು ಸಂಪೂರ್ಣ ವಿಫಲರಾದರು. ಎರಡು ಪಂದ್ಯಗಳಲ್ಲಿ ರಾಹುಲ್ ಕೇವಲ 31 ರನ್ ಸಿಡಿಸಿದ್ದಾರೆ.
ಒಂದು ವೇಳೆ ಈ ಮೂವುರು ಬ್ಯಾಟರ್‌ಗಳ ಫಾರ್ಮ್ ಹೀಗೆ ಮುಂದೆವರೆದರೆ ಭವಿಷ್ಯದಲ್ಲಿ ಇವರ ಸ್ಥಾನಕ್ಕೆ ಕುತ್ತು ಬರಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications