ಭಾರತಕ್ಕೆ ವಿರೋಚಿತ ಸೋಲು: ಯುಎಇಗೆ 1 ರನ್ ಜಯ
ಕೊನೆಯ ಓವರ್‌ವರೆಗೂ ರೋಚಕತೆ ಹುಟ್ಟಿಸಿದ್ದ ಹಾಂಕಾಂಗ್ ಇಂಟರ್‌ನ್ಯಾಷನಲ್ ಸಿಕ್ಸಸ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎರಡನೇ ಸೋಲು ಕಂಡಿದೆ. ಈ ಮೂಲಕ ಆಡಿದ ಎರಡೂ ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಪಡೆ ಹಿನ್ನಡೆ ಅನುಭವಿಸಿದೆ. ಯುಎಇ ರೋಚಕ ಗೆಲುವು ಸಾಧಿಸಿದೆ.
ಕೊನೆಯ ಓವರ್‌ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ 32 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್ ಮಾಡುತ್ತಿದ್ದರು. ಯುಎಇ ಪರ ಆಸೀಫ್ ಖಾನ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಭಾರತ ಐದು ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 99 ರನ್ ಸಿಡಿಸಿ ಗೆಲುವಿನ ಕನಸು ಕಾಣುತ್ತಿತ್ತು. ಲಾಸ್ಟ್ ಓವರ್‌ಲ್ಲಿ ಬಿನ್ನಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು.

ಈ ಓವರ್ ಮೊದಲ ಎಸೆತದಲ್ಲಿ ಬಿನ್ನ 4 ಬಾರಿಸಿದರು. ಎರಡನೇ ಎಸೆತ ವೈಡ್ ಆಯಿತು. ಕನ್ನಡಿಗ ಬಿನ್ನಿ ಸತತ ನಾಲ್ಕು ಎಸೆತದಲ್ಲಿ ಸಿಕ್ಸರ್ ಬಾರಿಸಿ ಭರವಸೆಯನ್ನು ಮೂಡಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ಆಸೀಫ್ ಖಾನ್ ತೋಡಿದ ಖೆಡ್ಡಾಗೆ ಬಲಿಯಾದರು. ಪರಿಣಾಮ ಭಾರತ 1 ರನ್ ಸೋಲು ಕಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಎಇ ನಿಗದಿತ ಆರು ಓವರ್‌ಗಳಲ್ಲಿ 5 ವಿಕೆಟ್‌ಗೆ 130 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಭಾರತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 129 ರನ್ ಸೇರಿಸಿ ಸೋಲು ಕಂಡಿತು. ಇದಕ್ಕೂ ಮೊದಲು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲು ಕಂಡಿತ್ತು.
ಖಲೀದ್ ಶಾ 45
ಮೊದಲು ಬ್ಯಾಟ್ ಮಾಡಿದ ಯುಎಇ ತಂಡದ ಪರ ಆಸೀಫ್ ಖಾನ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ಖಲೀದ್ ಶಾ ಹಾಗೂ ಮೊಹಮ್ಮದ್ ಜುಹೇಬ್ (17) ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 58 ರನ್ ಗಳ ಕಾಣಿಕೆ ನೀಡಿದರು. ಸುಚಿತ್ ಶರ್ಮಾ (12) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇನ್ನು ಆರಂಭಿಕ ಖಲೀದ್ ಶಾ 1 ಬೌಂಡರಿ, 6 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿದರು. ಜಹೂರ್ ಖಾನ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 37 ರನ್ ಸಿಡಿಸಿ ಮಿಂಚಿದರು. ಭಾರತದ ಪರ ಸ್ಟುವರ್ಟ್ ಬಿನ್ನಿ 3 ವಿಕೆಟ್ ಕಬಳಿಸಿದರು.
ನಾಯಕನ ಆಟವಾಡಿದ ರಾಬಿನ್
ಗುರಿಯನ್ನು ಬೆನ್ನಟ್ಟಿದ ರಾಬಿನ್ ಉತ್ತಪ್ಪ ಪಡೆ ಸಾಧಾರಣ ಆರಂಭ ಮಾಡಿತು. ಆರಂಭಿಕರಾದ ಭರತ್ ಚಿಪ್ಲೆ (20), ಮನೋಜ್ ತಿವಾರಿ (10), ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಯಕ ರಾಬಿನ್ ಉತ್ತಪ್ಪ ಕೇವಲ 10 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಬ್ಬರಿಸಿದರು. ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಿಡಿಸಿ 44 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications