ಟೀಮ್ ಇಂಡಿಯಾ ಆಟಗಾರರು ಬೆಳಗ್ಗೆ ಎದ್ದ ಮೇಲೆ ಆಡುವ ಸ್ಪಿನ್ ಟ್ರ್ಯಾಕ್ ಈಗ ಇವರಿಗೆ ಮುಳವಾಗಿದೆ. ತವರಿನಲ್ಲಿ ತನ್ನ ಮೊನಚಾದ ಸ್ಪಿನ್ ದಾಳಿ ನಡೆಸಿ, ಎದುರಾಳಿಗೆ ಕಾಟ ನೀಡುತ್ತಿದ್ದ ಭಾರತ, ಈಗ ತಾನೇ ತೋಡಿದ ಖೆಡ್ಡಾಗೆ ಬಲಿಯಾಗಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಬ್ಯಾಟ್ ಮಾಡಲು ಆಗದೇ ಟೀಮ್ ಇಂಡಿಯಾ ಬ್ಯಾಟರ್‌ಗಳು ಸುಸ್ತಾಗಿದ್ದಾರೆ. ಎರಡನೇ ಟೆಸ್ಟ್‌ನಲ್ಲೂ ಕಿವೀಸ್ ಮುನ್ನಡೆಯನ್ನು ಬಿಗಿ ಪಡೆಸಿಕೊಂಡಿದೆ.
ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 156 ರನ್‌ಗಳಿಗೆ ಆಲೌಟ್ ಆಗಿದ್ದು, ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಈ ಇನಿಂಗ್ಸ್‌ನಲ್ಲೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಸ್ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾಗಿದ್ದಾರೆ. ಸ್ಪಿನ್ ಹಾಗೂ ಟರ್ನ್ ಅರಿಯುವಲ್ಲಿ ಎಡವಿದ್ದಾರೆ. ತಮ್ಮ ನೈಜ ಆಟವನ್ನು ಮರೆತವರ ರೀತಿ ಬ್ಯಾಟ್ ಮಾಡಿದ್ದಾರೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೀಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ದು ಬಿಟ್ಟರೆ, ಉಳಿದ ಎಲ್ಲ ಬ್ಯಾಟರ್‌ಗಳು ಸ್ಪಿನ್ ಬೌಲರ್‌ಗಳು ತೋಡಿದ ಖೆಡ್ಡಾಗೆ ಬಲಿಯಾಗಿದ್ದಾರೆ. ಪಿಚ್ ಆಫ್ ದಿ ಬಾಲ್‌ಗೆ ಬಂದು ಆಡುವ ಯೋಚನೆ, ಸ್ಟ್ರೈಕ್ ರೋಟೆಟ್ ಮಾಡುತ್ತಾ ಆಡುವ ಯೋಚನೆಯನ್ನು ಮರೆತಂತೆ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬ್ಯಾಟರ್ಸ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ.
ನ್ಯೂಜಿಲೆಂಡ್ ತಂಡದ ಅನುಭವಿ ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೇನ್ ಫಿಲಿಪ್ಸ್ ಅವರ ಸ್ಪಿನ್ ಜಾದು ಅರಿಯುವಲ್ಲಿ ವಿಫಲರಾಗಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲೇ ಒಮ್ಮೆಯೂ ನಾಲ್ಕು ವಿಕೆಟ್ ಪಡೆಯದ ಮಿಚೆಲ್ ಸ್ಯಾಂಟ್ನರ್ ಇದೇ ಮೊದಲ ಬಾರಿಗೆ ಏಳು ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. ಇವರ ಕರಾರುವಕ್ ಲೈನ್ ಹಾಗೂ ಲೆಂಥ್ ಕಂಡು ಬ್ಯಾಟರ್‌ಗಳು ಕಕ್ಕಾಬಿಕ್ಕಿ ಆಗಿದ್ದಾರೆ.
ಟೀಮ್ ಇಂಡಿಯಾ ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಅಗ್ರೇಸಿವ್ ಅಪ್ರೋಚ್‌ನ್ನು ಮೈಗೂಡಿಸಿಕೊಂಡಂತೆ ಕಾಣುತ್ತದೆ. ಈ ತಂತ್ರಗಾರಿಕೆ ಬಾಂಗ್ಲಾದೇಶದ ವಿರುದ್ಧ ಕಾನ್ಪುರ್ ಟೆಸ್ಟ್‌ನಲ್ಲಿ ಸಫಲವಾದರೆ, ಉಳಿದ ಕಡೆ ಹಿನ್ನಡೆಯುಗುವಂತೆ ಮಾಡಿದೆ. ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾ ಅಟ್ಯಾಕಿಂಗ್ ಆಟ ಆಡಿತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕಂಡಿದ್ದ ಹೀನಾಯ ಸೋಲಿನಿಂದ ಟೀಮ್ ಇಂಡಿಯಾ ಪಾಠ ಕಲಿತಂತೆ ಬ್ಯಾಟ್ ಮಾಡಲಿಲ್ಲ.
ಟೀಮ್ ಇಂಡಿಯಾ ಆಟಗಾರರ ಬತ್ತಳಿಕೆಯಲ್ಲಿ ಸ್ಪಿನ್ ವಿರುದ್ಧ ಅಸ್ತ್ರಗಳೇ ಇಲ್ಲವೇ ಎಂಬಂತೆ ಬ್ಯಾಟ್ ಮಾಡಿದರು. ಇಡೀ ಪಂದ್ಯದಲ್ಲಿ ಕೆಲವೇ ಆಟಗಾರರು ಮಾತ್ರ ಸ್ವೀಪ್ ಶಾಟ್ ಪ್ರಯೋಗಿಸಿದರು. ಇನ್ನು ಉಳಿದ ಆಟಗಾರರು ಈ ಶಾಟ್ ಬಾರಿಸಲೇ ಇಲ್ಲ. ಉಳಿದ ಆಟಗಾರರು ತಮ್ಮ ಅಟ್ಯಾಕಿಂಗ್ ಬ್ಯಾಟಿಂಗ್ ಆಡಲು ಹೋಗಿ ವಿಕೆಟ್ ಕೈ ಚೆಲ್ಲಿದರು. ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಅಂದರೆ ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ಗೆಲುವು ಸಾಧ್ಯ.