Guwahati Test: ಪಂತ್ ಪಡೆ 201 ರನ್‌ಗೆ ಆಲೌಟ್: ದ.ಆಫ್ರಿಕಾಕ್ಕೆ 288 ರನ್ ಮುನ್ನಡೆ
ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡದ ಟಾಪ್ ಆರ್ಡರ್ ಬ್ಯಟರ್ಸ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ ಭಾರತ 288 ರನ್ ಹಿನ್ನಡೆ ಅನುಭವಿಸಿದೆ.
ಭಾರತ ಸೋಮವಾರ 9 ರನ್‌ಗಳಿಂದ ವಿಕೆಟ್ ನಷ್ಟವಿಲ್ಲದೆ ಇನಿಂಗ್ಸ್ ಮುಂದುವರೆಸಿದ ಭಾರತ, ಯಾವುದೇ ಹಂತದಲ್ಲೂ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲು ಎಸೆಯಲೇ ಇಲ್ಲ. ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸಿಮೋನ್ ಹರ್ಮರ್ ಹಾಗೂ ಮಾರ್ಕೊ ಜಾನ್ಸನ್ ಅವರ ಶಿಸ್ತು ಬದ್ಧ ದಾಳಿಗೆ ಭಾರತೀಯ ಬ್ಯಾಟರ್‌ಗಳು ಮಕಾಡೆ ಮಲಗಿದರು. ಭಾರತದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಜೋಡಿ ಮಾತ್ರ ಕೊಂಚ ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳನ್ನು ಕಾಡಿತು. ಈ ಜೋಡಿ 21.3 ಓವರ್‌ಗಳಲ್ಲಿ 65 ರನ್ ಸೇರಿಸಿತು. ರಾಹುಲ್ 22 ರನ್ ಬಾರಿಸಿದ್ದಾಗ ಕೇಶವ್ ಮಹಾರಾಜ್ ತೋಡಿದ ಖೆಡ್ಡಾಗೆ ಬಲಿಯಾದರು.

58 ರನ್‌ಗಳವರೆಗೆ ತಾಳ್ಮೆಯಿಂದ ಆಡುತ್ತಿದ್ದ ಯಶಸ್ವಿ ಜೈಸ್ವಾಲ್, ಹಾರ್ಮರ್ ಎಸೆತವನ್ನು ಕಟ್ ಮಾಡಲು ಹೋಗಿ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿದರು. ಮೂರನೇ ಕ್ರಮಾಂಕದಲ್ಲಿ ಮತ್ತೆ ಆಡುವ ಅವಕಾಶವನ್ನು ಪಡೆದ ಸಾಯಿ ಸುದರ್ಶನ್ 15 ರನ್‌ಗಳಿಗೆ ಬ್ಯಾಟಿಂಗ್ ಮುಗಿಸಿದರು.
ವೈಫಲ್ಯ
ನಾಲ್ಕನೇ ಕ್ರಮಾಂಕದಲ್ಲಿ ಧ್ರುವ್ ಜುರೇಲ್ ಅವರ ಆಟ 11 ಎಸೆತವನ್ನು ಎದುರಿಸಲು ಅಷ್ಟೇ ಸೀಮಿತವಾಯಿತು. ರಿಷಭ್ ಪಂತ್ ಒಂದು ಸಿಕ್ಸರ್ ಬಾರಿಸಿ ಔಟ್ ಆದರೆ, ರವೀಂದ್ರ ಜಡೇಜಾ 6 ರನ್‌ಗಳಿಗೆ ಆಟ ಮುಗಿಸಿದರು. ಅಕ್ಷರ್ ಪಟೇಲ್ ಬದಲಿಗೆ ಸ್ಥಾನ ಪಡೆದಿರುವ ನಿತೀಶ್ ಕುಮಾರ್ ರೆಡ್ಡಿ 10 ರನ್ ಬಾರಿಸುವಷ್ಟರಲ್ಲಿ ಸುಸ್ತಾದರು.
ಟಾಪ್ ಆರ್ಡರ್ ಬ್ಯಾಟರ್‌ಗಳು ಮಾಡಬೇಕಿದ್ದ ಕಾರ್ಯವನ್ನು ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಕುಲ್‌ದೀಪ್ ಯಾದವ್ ಮಾಡಿದರು. ಆದರೆ ಈ ಜೊತೆಯಾಟವೂ ಸಹ ದಕ್ಷಿಣ ಆಫ್ರಿಕಾ ನೀಡಿದ್ದ ಮೊತ್ತವನ್ನು ಮೀರಿ ನಿಲ್ಲಲು ಸಾಲಲಿಲ್ಲ. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ 208 ಎಸೆತಗಳಲ್ಲಿ 72 ರನ್ ಸೇರಿಸಿತು. ಈ ವೇಳೆ ಅರ್ಧಶತಕದ ಅಂಚಿನಲ್ಲಿದ್ದ ವಾಷಿಂಗ್ಟನ್ ಸುಂದರ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 48 ರನ್ ಬಾರಿಸಿ ಔಟ್ ಆದರು.
134 ಎಸೆತ ಎದುರಿಸಿದ ಕುಲ್‌ದೀಪ್
ಕೆಳ ಕ್ರಮಾಂಕದಲ್ಲಿ ಕುಲ್‌ದೀಪ್ ಯಾದವ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಇವರು 134 ಎಸೆತಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡರು. ಕೊನೆಯಲ್ಲಿ 19 ರನ್ ಬಾರಿಸಿ ಔಟ್ ಆದರು. ಅಂತಿಮಾಗಿ ಭಾರತ 83.5 ಓವರ್‌ಗಳಲ್ಲಿ 201 ರನ್ ಸೇರಿಸಿ ಆಲೌಟ್ ಆಯಿತು.
ಮಾರ್ಕೊ ಅಬ್ಬರ
ದಕ್ಷಿಣ ಆಫ್ರಿಕಾ ತಂಡದ ಪರ ಮಾರ್ಕೊ ಜಾನ್ಸನ್ 19.5 ಓವರ್ ಬೌಲಿಂಗ್ ಮಾಡಿ 48 ರನ್ ನೀಡಿ 6 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications