Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಮುಖ್ಯ ಆಯ್ಕೆದಾರರಾಗಿ ಭಾರತದ ಮಾಜಿ ವೇಗಿ ಸಲಿಲ್ ಆಯ್ಕೆ

India Former pacer Salil Ankola named as Mumbai chief selector

ನವದೆಹಲಿ: ಟೀಮ್ ಇಂಡಿಯಾದ ಮಾಜಿ ವೇಗಿ ಸಲಿಲ್ ಅಂಕೋಲ ಅವರು ಬುಧವಾರ (ಡಿಸೆಂಬರ್ 16) ಮುಂಬೈ ಕ್ರಿಕೆಟ್‌ನ ಮುಖ್ಯ ಆಯ್ಕೆದಾರರಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ದೇಸಿ ಕ್ರಿಕೆಟ್ ಸೀಸನ್ ಆರಂಭಗೊಳ್ಳಲಿದೆ. ಈ ಟೂರ್ನಿಯಿಂದಲೇ ಸಲಿಲ್, ಆಯ್ಕೆದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

52ರ ಹರೆಯದ ಸಲಿಲ್ ಅಂಕೋಲಾ ಭಾರತ ಪರ ಆಡಿದ್ದ ಏಕಮಾತ್ರ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದರು. ಇನ್ನು ಭಾರತ ಪರ ಅಂಕೋಲ ಅವರು 20 ಏಕದಿನ ಪಂದ್ಯಗಳನ್ನಾಡಿ 13 ವಿಕೆಟ್ ಮುರಿದಿದ್ದರು. 54 ದೇಸಿ ಕ್ರಿಕೆಟ್ ಪಂದ್ಯಗಳಲ್ಲಿ 181 ವಿಕೆಟ್‌ ದಾಖಲೆ ಸಲಿಲ್ ಹೆಸರಿನಲ್ಲಿದೆ.

ದೇಸಿ ಕ್ರಿಕೆಟ್‌ನಲ್ಲಿ ಸಲಿಲ್ ಅವರ ಬೆಸ್ಟ್ ಬೌಲಿಂಗ್ ಫಿಗರ್ ಅಂದರೆ 6/47. ಸದ್ಯ ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿಯಲ್ಲಿರುವ ಇನ್ನಿತರ ಸದಸ್ಯರೆಂದರೆ ಸಂಜಯ್ ಪಾಟಿಲ್, ರವೀಂದ್ರ ಠಾಕರ್, ಝುಲ್ಫಿಕರ್ ಪಾರ್ಕರ್ ಮತ್ತು ರವಿ ಕುಲಕರ್ಣಿ.

'ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ (ಎಂಸಿಎ)ನ ಕ್ರಿಕೆಟ್ ಸುಧಾರಣಾ ಸಮಿತಿ 2020-21ರ ಸೀಸನ್‌ಗೆ ಇವರನ್ನು ಆರಿಸಿದೆ. ಹಿರಿಯ ಆಯ್ಕೆದಾರರ ಸಮಿತಿ: ಸಲಿಲ್ ಅಂಕೋಲ-ಅಧ್ಯಕ್ಷ, ಸಂಜಯ್ ಪಾಟಿಲ್, ರವೀಂದ್ರ ಠಾಕರ್, ಝುಲ್ಫಿಕರ್ ಪಾರ್ಕರ್ ಮತ್ತು ರವಿ ಕುಲಕರ್ಣಿ,' ಎಂದು ಎಂಸಿಎ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Story first published: Thursday, December 17, 2020, 10:08 [IST]
Other articles published on Dec 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+