IND vs ENG Test: ಭಾರತಕ್ಕೆ ಅಲ್ಪ ಮುನ್ನಡೆ: 5 ವಿಕೆಟ್ ಪಡೆದ ಜಸ್ಪ್ರಿತ್ ಬುಮ್ರಾ
ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ (5 ವಿಕೆಟ್) ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಹಾಗೂ ಮೊಹಮ್ಮದ್ ಸಿರಾಜ್ ಅವರ ಅಮೋಘ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆ ಸಾಧಿಸಿದೆ.
ಭಾನುವಾರ 3 ವಿಕೆಟ್‌ಗೆ 209 ರನ್‌ಗಳಿಂದ ಆಟ ಮುಂದುವರೆಸಿದ ಇಂಗ್ಲೆಂಡ್ 465 ರನ್‌ಗಳಿಗೆ ಆಲೌಟ್ ಅಯಿತು. ಶನಿವಾರ ಶತಕ ಬಾರಿಸಿ ಅಬ್ಬರಿಸಿದ್ದ ಓಲಿ ಪೋಪ್ ಭಾನುವಾರ ತಮ್ಮ ಮೊತ್ತಕ್ಕೆ ಆರು ರನ್ ಸೇರಿಸಿ ಕನ್ನಡಿಗ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು. ಐದನೇ ವಿಕೆಟ್‌ಗೆ ಬೆನ್ ಸ್ಟೋಕ್ಸ್ ಹಾಗೂ ಹ್ಯಾರಿ ಬ್ರೂಕ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 82 ಎಸೆತಗಳಲ್ಲಿ 51 ರನ್ ಸೇರಿಸಿ ಔಟ್ ಆಯಿತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 20 ರನ್ ಬಾರಿಸಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಕ್ಯಾಚ್ ನೀಡಿದರು.

ಆರನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಅವರನ್ನು ಸೇರಿಕೊಂಡ ಜೇಮಿ ಸ್ಮಿತ್ ಜೋಡಿ ಸಹ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿತು. ಈ ಜೋಡಿ ಸಹ ಇಂಗ್ಲೆಂಡ್ ರನ್ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು. ಈ ಜೋಡಿ 88 ಎಸೆತಗಳಲ್ಲಿ 73 ರನ್ ಸೇರಿಸಿ ತಂಡಕ್ಕೆ ನೆರವಾಯಿತು. ಈ ವೇಳೆ ಜೇಮಿ ಸ್ಮಿತ್ 40 ರನ್ ಬಾರಿಸಿದ್ದಾಗ ಪ್ರಸಿದ್ಧ್ ತೋಡಿದ ಖೆಡ್ಡಾಗೆ ಬಲಿಯಾದರು. ಏಳನೇ ವಿಕೆಟ್‌ಗೂ ಬ್ರೂಕ್ , ಕ್ರಿಸ್ ವೋಕ್ಸ್ ಜೋತಿಗೂಡಿ ಟೀಮ್ ಇಂಡಿಯಾ ಬೌಲರ್‌ಗಳಿಗೆ ಕಾಟ ನೀಡಿದರು. ಈ ಜೋಡಿ ಏಕದಿನ ಮಾದರಿಯಲ್ಲಿ ಬ್ಯಾಟ್ ಮಾಡಿ 49 ರನ್ ಸಿಡಿಸಿತು.
ಬ್ರೂಕ್ ಶತಕ ವಂಚಿತ
ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಹ್ಯಾರಿ ಬ್ರೂಕ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕವನ್ನು ಜಸ್ಟ್ ಒಂದು ರನ್‌ಗಳಿಂದ ಮಿಸ್ ಮಾಡಿಕೊಂಡರು. ಇವರು 112 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 99 ರನ್ ಬಾರಿಸಿ, ಪ್ರಸಿದ್ಧ್‌ಗೆ ವಿಕೆಟ್ ಒಪ್ಪಿಸಿದರು.

8ನೇ ವಿಕೆಟ್‌ಗೆ ಕ್ರಿಸ್ ವೋಕ್ಸ್ (38) ಹಾಗೂ ಬ್ರೈಡನ್ ಕಾರ್ಸೆ (22) ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸಹ ಅರ್ಧಶತಕದ ಜೊತೆಯಾದ ಕಾಣಿಕೆ ನೀಡಿತು. ಅಂತಿಮವಾಗಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸಲು ಜಸ್ಪ್ರಿತ್ ಬುಮ್ರಾ ನೆರವಾದರು.
ಬುಮ್ರಾ ಪಂತ್
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ 83 ರನ್ ನೀಡಿ 5 ವಿಕೆಟ್ ಕಬಳಿಸಿದರು. ಕರ್ನಾಟಕದ ಸ್ಟಾರ್ ಬೌಲರ್ ಪ್ರಸಿದ್ಧ್ ಕೃಷ್ಣಾ 3, ಸಿರಾಜ್ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ವಿಕೆಟ್ ಪಡೆಯುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications