ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬೆಂಬಲಿಸಿದ ಸಂಗತಿ ಹೇಳಿದ ಸ್ಟುವರ್ಟ್ ಬ್ರಾಡ್

ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ತಂಡಗಳು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ದಿನಗಣನೆ ಆರಂಭವಾಗಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾಗೆ ಇಂಗ್ಲೆಂಡ್ ತಂಡದ ಸದಸ್ಯರು ಕೂಡ ಬೆಂಬಲ ನೀಡಿದ್ದ ವಿಚಾರವನ್ನು ಬ್ರಾಡ್ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಅದ್ಭುತವಾಗಿ ಪ್ರದರ್ಶನ ನೀಡಿ ಗೆದ್ದುಕೊಂಡಿತ್ತು. ಅದರಲ್ಲೂ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮೂರು ದಶಕಗಳ ಅಜೇಯ ಸಾಧನೆಯನ್ನು ಟೀಮ್ ಇಂಡಿಯಾ ಮುರಿದು ಹಾಕಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಸದಸ್ಯರು ಕೂಡ ಟೀಮ್ ಇಂಡಿಯಾಗೆ ಬೆಂಬಲವನ್ನು ನೀಡಿದ್ದರು ಎಂಬ ಸಂಗತಿಯನ್ನು ಸ್ಟುವರ್ಟ್ ಬ್ರಾಡ್ ಹಂಚಿಕೊಂಡಿದ್ದಾರೆ.

ಆಸಿಸ್ ಪ್ರವಾಸ ಸುಲಭವಲ್ಲ
"ಆಸ್ಟ್ರೇಲಿಯಾ ಪ್ರವಾಸವೆಂದರೆ ಅದು ನಿಜಕ್ಕೂ ಸುಲಭದ್ದಲ್ಲ. ಅದರಲ್ಲೂ ಗಾಬಾದಲ್ಲಿ ಪಂದ್ಯವನ್ನು ಗೆದ್ದುಕೊಂಡು ಸರಣಿಯನ್ನು ಜಯಿಸಿರುವುದು ಟೀಮ್ ಇಂಡಿಯಾದ ಆತ್ಮ ವಿಶ್ವಾಸವನ್ನು ಮುಗಿಲೆತ್ತರಕ್ಕೇರಿಸಿರುವುದರಲ್ಲಿ ಅನುಮಾನವೇ ಇಲ್ಲ" ಎಂದು ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಆಟಗಾರರು ಬೆಂಬಲಿಸಿದ್ದರು
"ನಾನು ಒಂದು ಸಂಗತಿಯನ್ನು ಹಂಚಿಕೊಳ್ಳಬೇಕು. ಬ್ರಿಸ್ಬೇನ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಉದ್ದಕ್ಕೂ ಇಂಗ್ಲೆಂಡ್ ತಂಡದ ಸದಸ್ಯರು ಕೂಡ ಟೀಮ್ ಇಂಡಿಯಾವನ್ನು ಬೆಂಬಲಿಸಿದ್ದರು" ಎಂದು ಸ್ಟುವರ್ಟ್ ಬ್ರಾಡ್ ಡೈಲಿ ಮೇಲ್‌ಗೆ ಬರೆದ ಅಂಕಣದಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ತಂಡವಾದರೂ ಹೆಮ್ಮೆ ಪಡುತ್ತದೆ
"ಟೀಮ್ ಇಂಡಿಯಾ ಒಗ್ಗಟ್ಟಾಗಿ ತೋರಿದ ಪ್ರದರ್ಶನ ಅವರಲ್ಲಿದ್ದ ಉತ್ಸಾಹ ಮತ್ತು ಛಲ ಅದ್ಭುತ ಮಟ್ಟದಲ್ಲಿತ್ತು. ಸಾಕಷ್ಟು ಪ್ರಮಾಣದಲ್ಲಿ ಗಾಯಗಳಿಂದ ಕಂಗೆಟ್ಟ ನಂತರವೂ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನೀಡಿದ ಪ್ರದರ್ಶನ ವಿಶ್ವದ ಯಾವುದೇ ತಂಡವಾದರೂ ಹೆಮ್ಮೆಪಟ್ಟುಕೊಳ್ಳುವಂತಿದೆ" ಎಂದು ಬ್ರಾಡ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications