ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡ

ಸಿಡ್ನಿ: ಟೀಮ್ ಇಂಡಿಯಾಕ್ಕೆ ಮತ್ತೆ ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯದ ವೇಳೆ ಸ್ಲೋ ಓವರ್ ರೇಟ್‌ಗಾಗಿ ಕೊಹ್ಲಿ ಪಡೆಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ ಈ ಪಂದ್ಯ ನಡೆದಿತ್ತು.
ಭಾರತ-ಆಸ್ಟ್ರೇಲಿಯಾ ಮೂರನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 12 ರನ್‌ಗಳ ರೋಚಕ ಗೆಲುವನ್ನಾಚರಿಸಿತ್ತು. ಆದರೆ ಸರಣಿ 2-1ರಿಂದ ಭಾರತದ ವಶವಾಗಿದೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಕೊಹ್ಲಿ ತಂಡಕ್ಕೆ ದಂಡ ಬೀಳುತ್ತಿರುವುದು ಇದು ಎರಡನೇ ಸಾರಿ. ಏಕದಿನ ಸರಣಿಯಲ್ಲೂ ಸ್ಲೋ ಓವರ್ ರೇಟ್‌ಗಾಗಿ ದಂಡ ವಿಧಿಸಲಾಗಿತ್ತು.
ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಫೀಲ್ಡಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್ ಮುಗಿಸಿರಬೇಕು. ಏಕದಿನ ಕ್ರಿಕೆಟ್‌ನಲ್ಲಾದರೆ 3.5 ಗಂಟೆಗಳಲ್ಲಿ 50 ಓವರ್ ಮುಗಿಸಿರಬೇಕು. ಗಂಟೆಗೆ ಕನಿಷ್ಠ 14.28 ಓವರ್ ಮುಗಿಸಬೇಕಿರುತ್ತದೆ. ಇನ್ನು ಟಿ20ನಲ್ಲೂ ಗಂಟೆಗೆ 14.28 ಓವರ್‌ನಂತೆ ಡ್ರಿಂಕ್ಸ್ ಬ್ರೇಕ್ ಸೇರಿ ಒಟ್ಟು 75 ನಿಮಿಷಗಳಲ್ಲಿ ಓವರ್ ಮುಗಿಸಲು ನಿಯಮವಿರುತ್ತದೆ.
ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಏಕದಿನ ಸರಣಿ 2-1ರಿಂದ ಆಸ್ಟ್ರೇಲಿಯಾ ಪಾಲಾದರೆ, ಟಿ20ಐ ಸರಣಿ 2-1ರಿಂದ ಭಾರತದ ಪಾಲಾಗಿದೆ. ಇನ್ನು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಡಿಸೆಂಬರ್ 17ರಿಂದ ಸರಣಿ ಶುರುವಾಗಲಿದೆ. ಡಿಸೆಂಬರ್ 11ರಂದು ಅಭ್ಯಾಸ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications