ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದೋರ್ ಕ್ರೀಡಾಂಗಣದಲ್ಲಿ ಸೋಲಿಲ್ಲದ ಸಾಧನೆಯೇ ಟೀಮ್ ಇಂಡಿಯಾಗೆ ಸ್ಪೂರ್ತಿ

India Has Upper Hand Against Sri Lanka At Holkar Stadium

ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದ ಬಳಿಕ ಟೀಮ್ ಇಂಡಿಯಾ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಇಂದೋರ್ ನ ಹೋಲ್ಕರ್ ಕ್ರೀಡಾಂಗಣ ಸರಣಿಯ ಎರಡನೇ ಪಂದ್ಯದ ಆತಿಥ್ಯ ವಹಿಸಲು ಸಿದ್ಧವಾಗಿದ್ದು ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯದ ಆರಂಭಕ್ಕೂ ಮುನ್ನ ಈ ಕ್ರೀಡಾಂಗಣದ ದಾಖಲೆಯೇ ಟೀಮ್ ಇಂಡಿಯಾದ ಗೆಲುವಿಗೆ ಸ್ಪೂರ್ತಿಯಾಗಿದೆ.

ಇಂದೋರ್ ಕ್ರೀಡಾಂಗಣ ಟೀಮ್ ಇಂಡಿಯಾಗೆ ಅದೃಷ್ಟದ ಅಂಗಳ ಅಂದರೆ ತಪ್ಪಾಗಲಾರದು. ಯಾಕೆಂದರೆ ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಈವರೆಗೂ ಸೋತೆ ಇಲ್ಲ. ಈ ದಾಖಲೆ ಕೇವಲ ಟಿ20ಗೆ ಮಾತ್ರ ಸೀಮಿತವಾಗಿಲ್ಲ. ಮೂರೂ ಫಾರ್ಮೆಟ್‌ಗಳಲ್ಲಿ ಆಡಿರುವ ಯಾವ ಪಂದ್ಯವೂ ಟೀಮ್ ಇಂಡಿಯಾದ ವಿರುದ್ಧವಾಗಿ ಬಂದಿಲ್ಲ ಅನ್ನುವುದು ವಿಶೇಷ.

ಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳುಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳು

ಮಧ್ಯ ಪ್ರದೇಶದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ 2006 ರಿಂದ ಅಂತರಾಷ್ಟ್ರೀಯ ಪಂದ್ಯಗಳು ನಡೆಯಲು ಆರಂಭವಾಗಿದೆ. ಆ ಬಳಿಕ ಆಡಿರುವ ಎಲ್ಲಾ ಪಂದ್ಯ ಪಂದ್ಯಗಳು ಟೀಮ್ ಇಂಡಿಯಾವನ್ನು ಗೆಲ್ಲಿಸಿದೆ ಎನ್ನುವುದು ವಿಶೇಷ. ಎಲ್ಲಾ ಮಾದರಿಯಲ್ಲಿ ಒಟ್ಟು 8 ಅಂತರಾಷ್ಟ್ರೀಯ ಪಂದ್ಯಗಳಿಗೆ ಹೋಲ್ಕರ್ ಸ್ಟೇಡಿಯಮ್ ಆತಿಥ್ಯವನ್ನು ವಹಿಸಿದೆ. ಐದು ಏಕದಿನ, ಎರಡು ಟೆಸ್ಟ್ ಮತ್ತು ಒಂದು ಟಿ20 ಪಂದ್ಯಗಳಲ್ಲಿ ಈವರೆಗೆ ಆಯೋಜನೆ ಮಾಡಲಾಗಿದೆ.

India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!

ವಿಶೇಷೆಂದರೆ ಈ ಮೈದಾನದಲ್ಲಿ ಆಡಿರುವ ಏಕೈಕ ಟಿ20 ಪಂದ್ಯ ಶ್ರೀಲಂಕಾ ವಿರುದ್ಧವೇ ಆಗಿದೆ. ಈ ಪಂದ್ಯವನ್ನು ಭಾರತ 88 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಹೋಲ್ಕರ್ ಮೈದಾನ 27000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಹೋಲ್ಕರ್ ಮೈದಾನ ನಿರ್ಮಾಣಕ್ಕೂ ಮುನ್ನ ಇಂದೋರ್‌ನ ಮತ್ತೊಂದು ಕ್ರೀಡಾಂಗಣವಾದ ನೆಹರು ಸ್ಟೇಡಿಯಮ್‌ನಲ್ಲಿ ಪಂದ್ಯವನ್ನು ಆಯೋಜನೆ ಮಾಡಲಾಗುತ್ತಿತ್ತು.

Story first published: Tuesday, January 7, 2020, 12:11 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X