Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಸೋಲಿಸಲು ಭಾರತಕ್ಕೆ ಒಳ್ಳೆಯ ಅವಕಾಶವಿದೆ: ರಾಜಾ

India have good chance of beating Australia, says Rameez Raja

ಕರಾಚಿ: ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾದಲ್ಲಿ ಅಂಥ ಸವಾಲಿನ ಪಿಚ್‌ಗಳು ಇಲ್ಲದಿರುವುದರಿಂದ ಈ ಸಾರಿಯೂ ಆಸ್ಟ್ರೇಲಿಯಾವನ್ನು ಸೋಲಿಸಲು ಭಾರತಕ್ಕೆ ಒಳ್ಳೆಯ ಅವಕಾಶವಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಝ್ ರಾಜಾ ಹೇಳಿದ್ದಾರೆ.

ಕುತೂಹಲ ಮೂಡಿಸಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಡೇ ನೈಟ್ ಟೆಸ್ಟ್‌ನೊಂದಿಗೆ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಕಳೆದ ಬಾರಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ ಅಲ್ಲಿ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿತ್ತು. ಆದರೆ ಆ ವೇಳೆ ಆಸೀಸ್ ತಂಡದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇರಲಿಲ್ಲ.

'ಕಳೆದ ಕೆಲವಾರು ವರ್ಷಗಳಿಂದ ಆಸ್ಟ್ರೇಲಿಯಾ ಆಟಗಾರರು ಯಾವ ಪಿಚ್‌ಗಳಲ್ಲಿ ಆಡಿದ್ದರೋ ಅಂಥ ಪಿಚ್‌ಗಳು ಈಗ ಆಸ್ಟ್ರೇಲಿಯಾದಲ್ಲಿಲ್ಲ. ಅವು ಬದಲಾಗಿವೆ. ಅಂದರೆ ಈಗಿನ ಪಿಚ್‌ಗಳಲ್ಲಿ ಹೆಚ್ಚಿನ ಬೌನ್ಸ್‌ಗಳಿಲ್ಲ, ಸೈಡ್ ವೇ ಮೂವ್‌ಮೆಂಟ್‌ಗಳಿಲ್ಲ ಮತ್ತು ಹೆಚ್ಚು ಸವಾಲಿನದ್ದಾಗಿಲ್ಲ. ಹೀಗಾಗಿ ಭಾರತಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ,' ಎಂದು ರಮೀಝ್ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗುವ ಟೀಮ್ ಇಂಡಿಯಾ ಅಲ್ಲಿ 3 ಪಂದ್ಯಗಳ ಏಕದಿನ ಸರಣಿ, 3 ಪಂದ್ಯಗಳ ಟಿ20ಐ ಸರಣಿ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನವೆಂಬರ್ 27ರಿಂದ ಈ ಪ್ರವಾಸ ಸರಣಿ ಶುರುವಾಗಲಿದೆ. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಮಾತ್ರ ನಾಯಕ ಕೊಹ್ಲಿ ಆಡಿ ಆ ಬಳಿಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ತಂದೆಯಾಗುವ ನಿರೀಕ್ಷೆಯಿದೆ.

Story first published: Friday, November 20, 2020, 13:12 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+