
ನವದೆಹಲಿ, ಮೇ 27: ಭಾರತ ಕ್ರಿಕೆಟ್ ತಂಡವನ್ನು 3 ಸಾರಿ ವಿಶ್ವಕಪ್‌ನಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಹೊಂದಿರುವ ಮೊಹಮ್ಮದ್ ಅಝರುದ್ದೀನ್ ಅವರು 2019ರ ವಿಶ್ವಕಪ್‌ಗಾಗಿ ಪ್ರಕಟಿಸಲಾಗಿರುವ ಭಾರತ ತಂಡದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಂಡದಲ್ಲಿ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಇರಬೇಕಿತ್ತು ಎಂದು ಅಝರ್ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಮಾತನಾಡಿದ ಅಝರುದ್ದೀನ್, '2019ರ ಭಾರತ ವಿಶ್ವಕಪ್ ತಂಡ ನಿಜಕ್ಕೂ ಅದ್ಭುತವಾಗಿದೆ. ಸಮತೋಲನವಾಗಿದೆ. ಆದರೆ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ತಂಡ ಮಿಸ್ ಮಾಡಿಕೊಂಡಿತು ಅನ್ನೋದು ನನ್ನನಿಸಿಕೆ' ಎಂದರು.
ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅಝರ್, ಒಂದೇ ತಂಡವನ್ನು ಆರಿಸುವ ಬದಲು ಭಾರತ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ತಂಡಗಳನ್ನು ಹೆಸರಿಸಿದರು. ಈ ತಂಡಗಳು ಬಲಿಷ್ಠವಾಗಿವೆ. ನಾಲ್ಕೂ ತಂಡಗಳಿಗೂ ಟ್ರೋಫಿ ಗೆಲ್ಲುವ ಅವಕಾಶವಿದೆ' ಎಂದು ಅಭಿಪ್ರಾಯಿಸಿದರು.
ಭಾರತ ಮತ್ತು ಪಾಕಿಸ್ಥಾನ ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಜಯಿಸಲಿದೆ ಎಂಬ ಪ್ರಶ್ನೆಗೆ, ಭಾರತ ತಂಡ ಗೆಲ್ಲಲಿದೆ ಎಂದು ಅಝರ್ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ.