BCCI Revised Schedule: ಬಾಂಗ್ಲಾದೇಶ-ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ವೇಳಾಪಟ್ಟಿ ಬದಲಾವಣೆ; ಯಾಕೆ ಗೊತ್ತಾ?
ಆಗಸ್ಟ್ 14 ಬುಧವಾರ, 2024-25ರ ಅಂತರಾಷ್ಟ್ರೀಯ ತವರು ಋತುವಿನಲ್ಲಿ ಭಾರತವು ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತವರು ಋತುವಿನ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯ ಕೆಲ ಪಂದ್ಯಗಳ ದಿನಾಂಕ ಮತ್ತು ಸ್ಥಳಗಳನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರ ಬಿಸಿಸಿಐ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.

ಟೀಮ್ ಇಂಡಿಯಾ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಮತ್ತು ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧವೂ ಸರಣಿ ಆರಂಭಿಸಲಿದೆ.
ಭಾರತ vs ಬಾಂಗ್ಲಾದೇಶ 1ನೇ ಟಿ20
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವು 6 ಅಕ್ಟೋಬರ್ 2024 ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಡ್ರೆಸ್ಸಿಂಗ್ ಕೊಠಡಿಗಳ ನವೀಕರಣ ಕಾಮಗಾತಿ ನಡೆಯುತ್ತಿರುವ ಕಾರಣ ಈಗ ಗ್ವಾಲಿಯರ್‌ನಲ್ಲಿ ಪಂದ್ಯ ನಡೆಯಲಿದೆ.
ಈ ಪಂದ್ಯವು ಗ್ವಾಲಿಯರ್ ನಗರದ ಹೊಸ ಕ್ರೀಡಾಂಗಣವಾದ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 2010ರ ನಂತರ ಈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. 2010ರಲ್ಲಿ ಇದೇ ಮೈದಾನದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಐತಿಹಾಸಿಕ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಚೊಚ್ಚಲ ದ್ವಿಶತಕ ಸಿಡಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟಿ20 ಪಂದ್ಯಗಳನ್ನು ಸ್ಥಳಾಂತರಿಸುತ್ತಿರುವುದಾಗಿ ಬಿಸಿಸಿಐ ಘೋಷಣೆ ಮಾಡಿದೆ. ಮೊದಲ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಬೇಕಿದ್ದ ಚೆನ್ನೈ ಇದೀಗ ಎರಡನೇ ಟಿ20ಗೆ ಆತಿಥ್ಯ ವಹಿಸಲಿದ್ದು, ಈ ಹಿಂದೆ ಘೋಷಿಸಿದಂತೆ ಎರಡನೇ ಟಿ20 ಪಂದ್ಯದ ಬದಲಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯವನ್ನು ಆಯೋಜಿಸಲಿದೆ.
2025 ಜನವರಿ 22 ರಂದು ಮೊದಲ ಟಿ20 ಮತ್ತು ಜನವರಿ 25 ರಂದು ಎರಡನೇ ಟಿ20 ಪಂದ್ಯಗಳು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿತ್ತು. ಆದರೆ ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ಇರುವುದರಿಂದ ಬದ್ಧತೆಗಳು ಮತ್ತು ಬಾಧ್ಯತೆಗಳ ಬಗ್ಗೆ ಕೋಲ್ಕತ್ತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆ ಮನವಿ ಮಾಡಿದ ಬಳಿಕ ಸ್ಥಳ ಬದಲಾವಣೆ ಅನಿವಾರ್ಯವಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ vs ಬಾಂಗ್ಲಾದೇಶ ಪರಿಷ್ಕೃತ ವೇಳಾಪಟ್ಟಿ
ಮೊದಲನೇ ಟೆಸ್ಟ್: ಸೆಪ್ಟೆಂಬರ್ 19 ರಿಂದ 23 ರವರೆಗೆ- ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ- ಬೆಳಗ್ಗೆ 9.30 ಗಂಟೆಗೆ
ಎರಡನೇ ಟೆಸ್ಟ್: ಸೆಪ್ಟೆಂಬರ್ 27- ಅಕ್ಟೋಬರ್ 1 ರವರೆಗೆ- ಗ್ರೀನ್ ಪಾರ್ಕ್, ಕಾನ್ಪುರ್- ಬೆಳಗ್ಗೆ 9.30 ಗಂಟೆಗೆ
ಟಿ20 ಸರಣಿ
ಮೊದಲನೇ ಟಿ20: ಅಕ್ಟೋಬರ್ 6- ಧರ್ಮಶಾಲೆ- ಸಂಜೆ 7.30 ಗಂಟೆಗೆ
ಎರಡನೇ ಟಿ20: ಅಕ್ಟೋಬರ್ 9- ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ- ಸಂಜೆ 7.30 ಗಂಟೆಗೆ
ಮೂರನೇ ಟಿ20: 12 ಅಕ್ಟೋಬರ್- ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್- ಸಂಜೆ 7.30 ಗಂಟೆಗೆ
ಭಾರತ vs ಇಂಗ್ಲೆಂಡ್ ಪರಿಷ್ಕೃತ ವೇಳಾಪಟ್ಟಿ
- ಮೊದಲನೇ ಟಿ20: ಜನವರಿ 22- ಕೋಲ್ಕತ್ತಾ
- ಎರಡನೇ ಟಿ20: ಜನವರಿ 25- ಚೆನ್ನೈ
- ಮೂರನೇ ಟಿ20: ಜನವರಿ 28- ರಾಜ್‌ಕೋಟ್
- ನಾಲ್ಕನೇ ಟಿ20: ಜನವರಿ 31- ಪುಣೆ
- ಐದನೇ ಟಿ20: ಫೆಬ್ರವರಿ 2- ಮುಂಬೈ
ಏಕದಿನ ಸರಣಿ
- ಮೊದಲನೇ ಏಕದಿನ: ಫೆಬ್ರವರಿ 6- ನಾಗ್ಪುರ
- ಎರಡನೇ ಏಕದಿನ: ಫೆಬ್ರವರಿ 9- ಕಟಕ್
- ಮೂರನೇ ಏಕದಿನ: ಫೆಬ್ರವರಿ 12- ಅಹಮದಾಬಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications