ಭಾರತ vs ಐರ್ಲೆಂಡ್ ಟಿ20 ಸರಣಿ: ತಂಡಗಳು, ವೇಳಾಪಟ್ಟಿ, ಸ್ಕ್ವಾಡ್ ಹಾಗೂ ನೇರಪ್ರಸಾರದ ಮಾಹಿತಿ

ದಕ್ಷಿಣ ಆಫ್ರಿಕಾ ವಿರುದ್ಧಧ ಟಿ20 ಸರಣಿಯ ಬಳಿಕ ಇದೀಗ ಭಾರತ ತಂಡ ಐರ್ಲೆಂಡ್‌ಗೆ ಪ್ರವಾಸ ಬೆಳೆಸಲಿದೆ. ಒಂದೆಡೆ ಭಾರತದ ಪ್ರಮುಖ ಆಟಗಾರರ ಪಡೆ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದರೆ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆ ಐರ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯ ದೃಷ್ಟಿಯಿಂದ ಈ ಪ್ರವಾಸ ಬಹಳ ಮುಖ್ಯವಾಗಿದೆ. ಅಲ್ಲದೆ ಯುವ ಆಟಗಾರರ ಪ್ರದರ್ಶನ ಈ ಸರಣಿಯಲ್ಲಿ ಹೇಗಿರಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.
2018ರ ಬಳಿಕ ಭಾರತ ಮೊದಲ ಬಾರಿಗೆ ಐರಿಷ್ ಪಡೆಯನ್ನು ಎದುರಿಸುತ್ತಿದೆ. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಐರ್ಲೆಂಡ್ ತಂಡವನ್ನು ಈವರೆಗೆ ಮೂರು ಬಾರಿ ಮಾತ್ರವೇ ಎದುರಿಸಿದ್ದು ಮೂರು ಪಂದ್ಯದಲ್ಲಿಯೂ ಭಾರತ ಗೆದ್ದುಕೊಂಡಿದೆ. 2009ರ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿತ್ತು.

ವೇಳಾಪಟ್ಟಿ ಹಾಗೂ ಪಂದ್ಯದ ಸಮಯ
ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ಹಾಗೂ ಜೂನ್ 28ರಂದು ನಡೆಯಲಿದೆ. ಎರಡು ಪಂದ್ಯಗಳು ಕೂಡ ಡಬ್ಲಿನ್‌ನ 'ದಿ ವಿಲೇಜ್' ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಈ ಎರಡು ಪಂದ್ಯಗಳು ಕೂಡ ಆರಂಭವಾಗಲಿದೆ.

ಸರಣಿಯ ನೇರಪ್ರಸಾರ
ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ನೇರಪ್ರಸಾರವನ್ನು ನೇರಪ್ರಸಾರವನ್ನು ಸೋನಿ ನೆಟ್‌ವರ್ಕ್ ಪ್ರಸಾರ ಮಾಡಲಿದೆ. ಸೋನಿ ಸಿಕ್ಸ್ ಹಾಗೂ ಸೋನಿ ಸಿಕ್ಸ್ ಹೆಚ್‌ಡಿ ಚಾನೆಲ್‌ನಲ್ಲಿ ಈ ಪಂದ್ಯಗಳು ಪ್ರಸಾರವಾಗಲಿದೆ. ಇನ್ನು ಸೋನಿ ಲಿವ್‌ನಲ್ಲಿ ಈ ಪಂದ್ಯಗಳು ಲೈವ್ ಸ್ಟ್ರೀಮ್ ಆಗಲಿದೆ.

ಭಾರತ ಸ್ಕ್ವಾಡ್ ಹೀಗಿದೆ
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

ಐರ್ಲೆಂಡ್ ಸ್ಕ್ವಾಡ್ ಹೀಗಿದೆ:
ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications