
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ತಂಡದ ಆಯ್ಕೆಯ ಸಂದರ್ಭದಲ್ಲಿ ಭಾರತೀಯ ತಂಡದ ಆಯ್ಕೆಗಾರರು ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದರು. ಟೀಮ್ ಇಂಡಿಯಾ ಏಕದಿನ ನಾಯಕತ್ವವನ್ನು ರೋಹಿತ್ ಶರ್ಮಾಗೆ ವಹಿಸಿಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಈ ವಿಚಾರವಾಗಿ ನಂತರ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಏಕದಿನ ನಾಯಕತ್ವ ತ್ಯಜಿಸಲು ವಿರಾಟ್ ಕೊಹ್ಲಿಗೆ ಇಷ್ಟವಿರಲಿಲ್ಲ. ಆದರೆ ಬಲವಂತವಾಗಿ ಬಿಸಿಸಿಐ ನಿರ್ಧಾರವನ್ನು ತೆಗೆದುಕೊಂಡಿತ್ತು ಎಂಬ ವರದಿಗಳು ಕೂಡ ಬಂದಿದೆ. ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು ಸೀಮಿತ ಓವರ್‌ಗಳ ಮಾದರಿಗೆ ಇಬ್ಬರು ಪ್ರತ್ಯೇಕ ನಾಯಕನನ್ನು ಹೊಂದುವುದು ನಾವು ಬಯಸಿರಲಿಲ್ಲ ಎಂದು ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ನಾಯಕತ್ವ ವಿಚಾರವಾಗಿ ಬಿಸಿಸಿಐ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುವುದು ಸ್ಪಷ್ಟವಾಗಿದೆ. ಈ ಮಧ್ಯೆ ಈ ಬೆಳವಣಿಗೆ ತಂಡದ ಒಟ್ಟಾರೆ ವಾತಾವರಣದ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ. ಇದೇ ವಿಚಾರವಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಪ್ರತಿಕ್ರಿಯೆ ನಿಡಿದ್ದು ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಟೀಮ್ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆಯ ಬಳಿಕವೂ ನಾನು ಒಗ್ಗಾಟ್ಟಾದ ತಂಡವನ್ನು ಕಾಣಬಹುದು ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇಬ್ಬರು ನಿರ್ದಿಷ್ಟ ಆಟಗಾರರ ಕಾರಣದಿಂದಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಗುಂಪುಗಳು ಉಂಟಾಗುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಅನುಮಾನದಿಂದಲೇ ಪ್ರತಿಕ್ರಿಯಿಸಿದ್ದಾರೆ. ಬ್ರಾಡ್ ಹಾಗ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಕೂಡ ತಮ್ಮ ಪಾತ್ರವನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. "ಇಬ್ಬರು ಆಟಗಾರರು ಕೂಡ ತಮ್ಮ ಪಾತ್ರವನ್ನು ಅಳವಡಿಸಿಕೊಂಡು ಡ್ರೆಸ್ಸಿಂಗ್ ರೂಮ್‌ಗೆ ತೆರಳಬೇಕು. ಈ ಮೂಲಕ ಭಾರತೀಯ ಕ್ರಿಕೆಟ್‌ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ" ಎಂದಿದ್ದಾರೆ.
ಮುಂದಿನ ಐದು ವರ್ಷಗಳ ಕಾಲ ಭಾರತಕ್ಕೆ ಪಾರುಪತ್ಯ: ಇನ್ನು ಇದೇ ಸಂದರ್ಭದಲ್ಲಿ ಬ್ರಾಡ್ ಹಾಗ್ ಟೀಮ್ ಇಂಡಿಯಾದಲ್ಲಿರುವ ಯುವ ಪ್ರತಿಭಾವಂತ ಆಟಗಾರರ ಬಗ್ಗೆಯೂ ಮಾತನಾಡಿದ್ದಾರೆ. ಈ ಸಂದರ್ಭಣದಲ್ಲಿ ಅವರು ಭಾರತೀಯ ತಂಡದಲ್ಲಿರುವ ಪ್ರತಿಭಾನ್ವಿತ ಆಟಗಾರರನ್ನು ನೋಡಿದಾಗ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಾಡುತ್ತಿರುವ ಸಾಧನೆ ಗಮನಿಸಿದಾಗ ಮುಂದಿನ ಕನಿಷ್ಠ ಐದು ವರ್ಷಗಳ ಕಾಲ ಭಾರತ ಕ್ರಿಕೆಟ್‌ನಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಲಿದೆ ಎಂದಿದ್ದಾರೆ.
ಇನ್ನು ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆಯನ್ನು ಬ್ರಾಡ್ ಹಾಗ್ ಉತ್ತಮ ನಿರ್ಧಾರ ಎಂದಿದ್ದಾರೆ. "ನನ್ನ ಪ್ರಕಾರ ಇದು ವಿರಾಟ್ ಕೊಹ್ಲಿ ಪಾಲಿಗೆ ಉತ್ತಮವಾಗಲಿದೆ ಎನಿಸುತ್ತದೆ. ನಾಯಕತ್ವದ ಒತ್ತಡಗಳಿಂದ ಮುಕ್ತವಾಗುವ ಮೂಲಕ ವಿರಾಟ್ ಕೊಹ್ಲಿ ತನ್ನ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಿದೆ. ರೋಹಿತ್ ಶರ್ಮಾ ಸೀಮಿತ ಓವರ್‌ಗಳ ನಾಯಕನಾಗಿರುವ ಕಾರಣದಿಂದಾಗಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವದ ಬಗ್ಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಒತ್ತಡಗಳು ಇಬ್ಬರು ನಾಯಕರ ಮೇಲೆ ಹಂಚಿಕೆಯಾಗುತ್ತದೆ. ಇನ್ನು ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಹಿಂದಿನ ಮೊನಚನ್ನು ಕಳೆದುಕೊಂಡಿದ್ದು ಇದರಿಂದಾಗಿ ಮತ್ತೊಮ್ಮೆ ಅದನ್ನುಗಳಿಸಲು ಸಾಧ್ಯವಿದೆ" ಎಂದಿದ್ದಾರೆ ಬ್ರಾಡ್ ಹಾಗ್.