ಸಂಕಷ್ಟದಲ್ಲಿ ಟೀಮ್ ಇಂಡಿಯಾ: ಇಂಗ್ಲೆಂಡ್ ಮಾರಕ ಬೌಲಿಂಗ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ ಟೀಮ್ ಅಮೋಘ ಪ್ರದರ್ಶನ ನೀಡಿದೆ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ರನ್ ಕಲೆ ಹಾಕಲು ಟೀಮ್ ಇಂಡಿಯಾ ಹರಸಾಹಸ ನಡೆಸಿದೆ. ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 112 ರನ್ ಕಲೆ ಹಾಕಿದೆ. ಗೆಲುವಿಗೆ ಇನ್ನು 81 ರನ್ ಗಳ ಅವಶ್ಯಕತೆ ಇದೆ.
ಸೋಮವಾರ ಟೀಮ್ ಇಂಡಿಯಾ 4 ವಿಕೆಟ್‌ಗೆ 58 ರನ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಜವಾಬ್ದಾರಿಯುತ ಆಟವನ್ನು ಆಡುವಲ್ಲಿ ವಿಫಲರಾದರು. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದ ಪರಿಣಾಮ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಪರಿಣಾಮ ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿ ಭಾರೀ ಮೊತ್ತದಂತೆ ಕಾಣಲು ಆರಂಭಿಸಿತು. ಈ ವೇಳೆ ಇಂಗ್ಲೆಂಡ್ ತಂಡದ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಪೆವೆಲಿಯನ್ ಪರೆಡ್ ನಡೆಸಿದರು.

ಟೀಮ್ ಇಂಡಿಯಾ ಮೊದಲಾವಧಿಯ ಆಟದಲ್ಲಿ ಎಚ್ಚರಿಕೆಯ ಆಟವನ್ನು ಆಡಬೇಕಿತ್ತು. ಆದರೆ ಈ ಆಟವನ್ನು ಆಡಲು ಬೌಲರ್‌ಗಳು ಬ್ಯಾಟರ್‌ಗಳಿಗೆ ಬಿಡಲೇ ಇಲ್ಲ. ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೆಂಕಿಯಂತಹ ಚೆಂಡುಗಳಿಗೆ ಉತ್ತರಿಸಲು ಟೀಮ್ ಇಂಡಿಯಾ ಬ್ಯಾಟರ್‌ಗಳು ವಿಫಲರಾದರು. ಪರ್ಫೆಕ್ಟ್ ಲೈನ್ ಹಾಗೂ ಲೆಂತ್ ಮೂಲಕ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ ಇಂಗ್ಲೆಂಡ್ ಬೌಲರ್ಸ್ ಆರಂಭಿಕ ಸೆಷನ್‌ನಲ್ಲಿ ಅಬ್ಬರಿಸಿದರು. ಅದ್ರಲ್ಲೂ ಜೋಫ್ರಾ ಆರ್ಚರ್ ರಿಷಭ್ ಪಂತ್ ಅವರಿಗೆ ಎಸೆದ ಎಸೆತ ಎಲ್ಲರನ್ನು ಚಕಿತ ಗೊಳಿಸಿತು. ಪಂತ್ ಅವರು ಡಿಫೆನ್ಸ್ ಮಾಡಲು ಮುಂದಾದಾಗ ಚೆಂಡು ಇವರನ್ನು ವಂಚಿಸಿ ಸ್ಟಂಪ್ಸ್‌ಗೆ ಮುತ್ತಿಟ್ಟಿತು.
ರಾಹುಲ್ ಆಟಕ್ಕೆ ಸ್ಟೋಕ್ಸ್ ಬ್ರೇಕ್
ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರ ಸ್ಥಂಬ ಕೆಎಲ್ ರಾಹುಲ್ ಅವರ ಪರ್ಫೆಕ್ಟ್ ಟೆಸ್ಟ್ ಬೌಲಿಂಗ್‌ಗೆ ಕಡಿವಾಣ ಹಾಕುವಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೊಕ್ಸ್ ಸಫಲರಾದರು. ಐದನೇ ಸ್ಟಂಪ್ ಮೇಲೆ ಬಿದ್ದ ಚೆಂಡನ್ನು ಡಿಫೆನ್ಸ್ ಮಾಡಲು ರಾಹುಲ್ ಮುಂದಾದರು. ಆದರೆ ಚೆಂಡು ಅದಾಗಲೆ ತಿರುವು ಪಡೆದು ಮಿಡ್ಲ್ ಸ್ಟಂಪ್‌ನತ್ತ ಸಾಗಿತು. ರಾಹುಲ್‌ಗೆ ಈ ಎಸೆತವನ್ನು ಎದುರಿಸಲು ಲಕ್ ಸಾಥ್ ನೀಡಲಿಲ್ಲ. ಸ್ಟೋಕ್ಸ್ ಎಲ್‌ಬಿಡಬ್ಲ್ಯು ಮನವಿಯನ್ನು ಮಾಡಿದರು. ಆದರೆ ಅಂಪೈರ್ ನಟೌಟ್ ನೀಡಿದರು. ಸ್ಟೋಕ್ಸ್ ಮೆಲ್ನವಿ ಸಲ್ಲಿಸಿದರು. ಆಗ ಟಿವಿ ಅಂಪೈರ್ ಔಟ್ ಎಂದು ನೀಡಿದರು.

ಭರವಸೆಯನ್ನು ಮೂಡಿಸಿದ್ದ ಯುವ ಆಟಗಾರ ವಾಶಿಂಗ್ಟನ್ ಸುಂದರ್ (0) ಜೋಫ್ರಾ ಆರ್ಚರ್ ಎಸೆದ ಎಸೆತವನ್ನು ಪ್ಲೆಡ್ ಮಾಡಲು ಹೋಗಿ ಅವರು ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಬಳಿಕ ರವೀಂದ್ರ ಜಡೇಜಾ ಅವರನ್ನು ಸೇರಿಕೊಂಡ ನಿತೀಶ್ ಕುಮಾರ್ ರೆಡ್ಡಿ ತಾಳ್ಮೆಯ ಇನಿಂಗ್ಸ್ ಆಡುವ ಸೂಚನೆ ನೀಡಿದರು. ಆದರೆ ಇವರ ತಾಳ್ಮೆಗೆ ಕ್ರಿಸ್ ವೋಕ್ಸ್ ಬ್ರೇಕ್ ಹಾಕಿದರು.
ಭಾರತ ಭೋಜನ ವಿರಾಮದ ವೇಳೆಗೆ 8 ವಿಕೆಟ್‌ಗೆ 112 ರನ್ ಕಲೆ ಹಾಕಿ ಸಂಕಷ್ಟದಲ್ಲಿದೆ. ಭಾರತಕ್ಕೆ ಗೆಲುವಿಗೆ ಇನ್ನು 81 ರನ್‌ಗಳ ಅವಶ್ಯಕತೆ ಇದೆ. ರವೀಂದ್ರ ಜಡೇಜಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications