ಐಸಿಸಿ ಮಹಿಳಾ ಟಿ20ಐ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದ ಭಾರತ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚೆಗೆ ಪ್ರಕಟಿಸಿರುವ ಟಿ20ಐ ರ್‍ಯಾಂಕಿಂಗ್ ಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೆ ಜಿಗಿದಿದೆ. ಭಾರತದ ವನಿತಾ ತಂಡ ನ್ಯೂಜಿಲೆಂಡ್ ಮಹಿಳಾ ತಂಡವನ್ನು 4ನೇ ಸ್ಥಾನಕ್ಕೆ ತಳ್ಳಿದ್ದಾರೆ.
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ದ್ವಿತೀಯ ಸ್ಥಾನದಲ್ಲೇ ಉಳಿದಿದೆ. ಏಕದಿನ ಕ್ರಿಕೆಟ್ ಮತ್ತು ಟಿ20ಐ ಎರಡರಲ್ಲೂ ಆಸ್ಟ್ರೇಲಿಯಾ ವನಿತಾ ತಂಡ ಅಗ್ರ ಸ್ಥಾನದಲ್ಲಿದೆ. ಏಕದಿನದಲ್ಲಿ 160 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿರುವ ಆಸೀಸ್, ಟಿ20ಐನಲ್ಲಿ 291 ಪಾಯಿಂಟ್ಸ್ ಗಳಿಸಿದೆ.
ಟಿ20ಐನಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ (291 ರೇಟಿಂಗ್ ಪಾಯಿಂಟ್ಸ್), ದ್ವಿತೀಯ ಸ್ಥಾನದಲ್ಲಿ ಇಂಗ್ಲೆಂಡ್ (280), ತೃತೀಯ ಸ್ಥಾನದಲ್ಲಿ ಭಾರತ (270), 4ನೇ ಸ್ಥಾನದಲ್ಲಿ ನ್ಯೂಜಿಲೆಂಡ್ (269), 5ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (249) ತಂಡಗಳಿವೆ. ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ಶಫಾಲಿ ವರ್ಮಾ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್ ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ (160 ರೇಟಿಂಗ್ ಪಾಯಿಂಟ್ಸ್), ದ್ವಿತೀಯ ಸ್ಥಾನದಲ್ಲಿ ಭಾರತ (121), ತೃತೀಯ ಸ್ಥಾನದಲ್ಲಿ ಇಂಗ್ಲೆಂಡ್ (119), 4ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (107), 5ನೇ ಸ್ಥಾನದಲ್ಲಿ ನ್ಯೂಜಿಲೆಂಡ್ (94) ತಂಡಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications