WTC 2025-27ರಲ್ಲಿ ಟೀಮ್ ಇಂಡಿಯಾ ಎಷ್ಟು ದೇಶಗಳ ವಿರುದ್ಧ ಸರಣಿ ಆಡಲಿದೆ? ಇಲ್ಲಿದೆ ಮಾಹಿತಿ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೊನೆಯಾಗಿದೆ. ನೂತನ ಚಾಂಪಿಯನ್ ಶಿಪ್ ಆರಂಭವಾಗಲಿದೆ. ಈ ಹೊಸ ಚಕ್ರದಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ಆರಂಭಿಸಲಿದೆ. ಈ ಟೆಸ್ಟ್ ಪಂದ್ತಕ್ಕಾಗಿ ಟೀಮ್ ಇಂಡಿಯಾ ಸಂಪೂರ್ಣ ಸಿದ್ಧವಾಗಿದೆ.
ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ ಎದುರಿಸಲಿದೆ. ಉಳಿದಂತೆ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡದ ವಿರುದ್ಧ ಎದುರಾಳಿಗಳ ತವರಿನಲ್ಲಿ ಟೆಸ್ಟ್ ಸರಣಿ ಆಡಲಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ವಿದೇಶಿ ಪ್ರವಾಸ ಸುಲಭವಾಗಿರಲ್ಲ. 2007ರಿಂದ ಇಂಗ್ಲೆಂಡ್ ನೆಲದಲ್ಲಿ ಸರಣಿಯನ್ನು ಗೆದ್ದಿಲ್ಲ. ಇನ್ನು 2009 ರಿಂದ ಕಿವೀಸ್ ತವರಿನಲ್ಲೂ ಸರಣಿ ಗೆದ್ದಿಲ್ಲ.

ಅಗ್ರ ಸ್ಥಾನ ಪಡೆಯುವುದು ಮುಖ್ಯ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಪ್ರತಿ ಬಾರಿ ಗೆಲುವಿನ ಶೆಕಚಡಾ ವಾರಿನ ಮೇಲೆ ಅಂಕ ಪಟ್ಟಿಯಲ್ಲಿ ಸ್ಥಾನ ಲಭಿಸುತ್ತದೆ. ಭಾರತ ಈ ಡಬ್ಲ್ಯುಟಿಸಿ ಚಕ್ರದಲ್ಲಿ ಭಾರತ ಒಟ್ಟು ಮೂರು ಸರಣಿಗಳನ್ನು ಸ್ವದೇಶದಲ್ಲಿ, ಮೂರು ಸರಣಿಗಳನ್ನು ವಿದೇಶದಲ್ಲಿ ಆಡಲಾಗುತ್ತದೆ. ಇನ್ನು ಈ ಸರಣಿಗಳಲ್ಲಿ ಭಾರತ ಗೆಲುವು ದಾಖಲಿಸುವು ಅನಿವಾರ್ಯವಾಗಿದೆ. ಏಕೆಂದರೆ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳನ್ನು ಕಾಯ್ದುಕೊಳ್ಳುವುದು ಅವಶ್ಯಕ. ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ತಲುಪುವ ತಂಡ ಫೈನಲ್ ಗೆ ಪ್ರವೇಶಿಸುತ್ತದೆ. ಇನ್ನು ಭಾರತ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಎರಡು ಬಾರಿ ಆಡಿದೆ. ಆದರೆ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ಆಸೆಗೆ ಪೆಟ್ಟು ಬಿದ್ದಿತ್ತು.
ಯುವ ಆಟಗಾರರಿಗೆ ಸುವರ್ಣ ಅವಕಾಶ
ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಯುವ ಆಟಗಾರರು ಭಾರತ ತಂಡಕ್ಕೆ ಆಧಾರವಾದರು. ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಯುವ ಆಟಗಾರ ಶುಭಮನ್ ಗಿಲ್ ತುಂಬಿದ್ದಾರೆ. ಯುವ ತಂಡವನ್ನು ರಿಷಭ್ ಪಂತ್ ಅವರಿಗೂ ಉಪನಾಯಕ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಭರವಸೆಯ ಆಟಗಾರರಾದ ಅರ್ಷದೀಪ್ ಸಿಂಗ್, ಬ್ಯಾಟರ್ ಸಾಯಿ ಸುದರ್ಶನ್, ವೇಗಿ ಪ್ರಸಿದ್ಧ್ ಕೃಷ್ಣ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡುವ ಅವಶ್ಯಕತೆ ಇದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಶುಭಮನ್ ಗಿಲ್ ಈ ಸ್ಥಾನದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications