World Test Championship: ಫೈನಲ್‌ನಲ್ಲಿ ಕಾದಾಡುವ ತಂಡಗಳು ಯಾವವು? ಏನು ಹೇಳುತ್ತೆ ಅಂಕಿ ಅಂಶ?
ಟಿ20 ವಿಶ್ವಕಪ್ ಮುಗಿದಿದೆ. ಈಗ ಎಲ್ಲ ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಕಣ್ಣು ನೆಟ್ಟಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸಂಭ್ರಮ ಎಲ್ಲ ತಂಡಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಎಲ್ಲ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೇಲೆ ಹೋಗಲು ಪ್ಲ್ಯಾನ್ ಮಾಡಿಕೊಂಡಿವೆ. ಸದ್ಯ ಭಾರತ ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತೊಮ್ಮೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸುತ್ತವೆಯಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಆದರೆ ಟೆಸ್ಟ್ ಸರಣಿಗಳು ನಡೆಯುತ್ತಿರುವುದರಿಂದ ಹಾವು ಏಣಿ ಆಟ ಶುರುವಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಫೈನಲ್‌ನಲ್ಲಿ ಯಾರೆಲ್ಲಾ ಕಾದಾಡ ಬಹುದು ಎಂಬ ಲೆಕ್ಕಾಚಾರವನ್ನು ಮಾಡಿದೆ.

ಏನು ಹೇಳುತ್ತೇ ಸಮಿಕರಣ?
ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಸೆಪ್ಟೆಂಬರ್ 19 ರಿಂದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಸರಣಿ ಗೆದ್ದು ಅಗ್ರ ಸ್ಥಾನವನ್ನು ಮತ್ತಷ್ಟು ಟೀಮ್ ಇಂಡಿಯಾ ಭದ್ರ ಪಡಿಸಿಕೊಳ್ಳಲಿದೆ. ಭಾರತದ ಬಳಿಕ WTC ಫೈನಲ್ ತಲುಪುವ ಅವಕಾಶ ಇದೆ. ಬಾಂಗ್ಲಾದೇಶದ ನಂತರ ಭಾರತ ಕೂಡ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ.
ಭಾರತಕ್ಕೆ ಫೈನಲ್ ತಲುಪುವ ಅವಕಾಶ ಇದೆಯಾ?
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಈ ಬಾರಿ 5 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಇದರಲ್ಲಿ ಕನಿಷ್ಠ 3 ರಲ್ಲಿ ಗೆದ್ದರೆ, ಫೈನಲ್‌ಗೆ ಸ್ಥಾನವನ್ನು ಖಚಿತ ಆಗುತ್ತದೆ. ಟೀಂ ಇಂಡಿಯಾ ಎಲ್ಲಾ 10 ಟೆಸ್ಟ್‌ಗಳನ್ನು ಗೆದ್ದರೆ ತಂಡದ ಶೇಕಡಾವಾರು ಅಂಕಗಳು 85.09 ಆಗುತ್ತದೆ. ಆಸ್ಟ್ರೇಲಿಯಾ ಪ್ರವಾಸದ ಹೊರತಾಗಿ ತವರು ನೆಲದಲ್ಲಿ ನಡೆಯಲಿರುವ 5 ಟೆಸ್ಟ್‌ಗಳಲ್ಲೂ ಭಾರತ ಗೆದ್ದರೆ ಶೇ.79.76 ಅಂಕಕ್ಕೆ ತಲುಪಲಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ಭಾರತದ ಫೈನಲ್ ಹಾದಿ ಸುಗಮವಾಗಿಲ್ಲ.
ಭಾರತ ದಶಕದಿಂದ ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಸಾಧನೆ ಮಾಡಿದೆ. ಅಲ್ಲದೆ ಆಡಿರುವ ಎರಡೂ ಬಾರ್ಡರ್ ಗವಾಸ್ಕರ್ ಸರಣಿಯನ್ನು ವಶಕ್ಕೆ ಪಡೆದಿದೆ. ಅಲ್ಲದೆ ಈ ವರ್ಷ ನಡೆಯಲಿರುವ ಸರಣಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯ ತಂಡವು ಭಾರತದ ವಿರುದ್ಧ 5 ಟೆಸ್ಟ್‌ಗಳು ಮತ್ತು ಶ್ರೀಲಂಕಾ ವಿರುದ್ಧ ತವರಿನಲ್ಲಿ 2 ಟೆಸ್ಟ್‌ಗಳನ್ನು ಗೆದ್ದರೆ, ಅದು ಗರಿಷ್ಠ 76.32 ಶೇಕಡಾ ಅಂಕಗಳನ್ನು ಗಳಿಸುತ್ತದೆ, ಇದು ಫೈನಲ್‌ಗೆ ಏರುವ ಕನಸು ಕಾಣಬಹುದು. ಆದರೆ ಆಸೀಸ್‌ಗೆ ನೆರೆಯ ನ್ಯೂಜಿಲೆಂಡ್ ಫೈನಲ್‌ಗೆ ಏರಲು ತೊಡಕು ಉಂಟು ಮಾಡಬಹುದು.

ಈಗಾಗಲೇ ಆಡಿರುವ ಎರಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸಿವೆ. ಈ ಬಾರಿಯೂ ಆಸೀಸ್‌ಗೆ ಫೈನಲ್ ತಲುಪುವ ಅವಕಾಶ ಹೆಚ್ಚಿದೆ. ಕಿವೀಸ್ ತಂಡ ಭಾರತದ ವಿರುದ್ಧ 3 ಹಾಗೂ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ನ್ಯೂಜಿಲೆಂಡ್ ತಂಡಕ್ಕೆ ಇನ್ನು 8 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಕಿವೀಸ್ 50 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಎಲ್ಲ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ನ್ಯೂಜಿಲೆಂಡ್ ತಂಡವು 78.57 ಅಂಕಗಳನ್ನು ಪಡೆಯುವ ಅವಕಾಶವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications