ಭಾರತ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್: ದಿಗ್ಗಜರ ಫೈನಲ್ ಹೋರಾಟಕ್ಕೆ ಕ್ಷಣಗಣನೆ

ಶನಿವಾರ ಇಂಗ್ಲೆಂಡ್ ಹಾಗೂ ಭಾರತ ನಡುವಿನ ರೋಹಿಕ ಟಿ20 ಕದನದ ಬಳಿಕ ಭಾನುವಾರ ಮತ್ತೊಂದು ರೋಚಕ ಹಣಾಹಣಿಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಅಂತಿಮ ಹಣಾಹಣಿ ಭಾನುವಾರ ನಡೆಯಲಿದ್ದು ಭಾರತ ಲೆಜೆಂಡ್ಸ್ ತಂಡ ಹಾಗೂ ಶ್ರಿಲಂಕಾ ಲೆಜೆಂಡ್ಸ್ ತಂಡ ಪ್ರಶಸ್ತಿಗಾಗಿ ಸೆಣೆಸಾಟವನ್ನು ನಡೆಸಲಿದೆ.
ಭಾರತ ಲೆಜೆಂಡ್ಸ್ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದು ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಅವರಂತಾ ಸ್ಟಾರ್ ಆಟಗಾರರು ಭಾರತ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಿಲಕರತ್ನೆ ದಿಲ್ಶನ್ ಶ್ರೀಲಂಕಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಸೆಮಿಫೈನಲ್‌ನಲ್ಲಿ ಭಾರತ ಲೆಜೆಂಡ್ಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿಯೂ ಸಾಕಷ್ಟು ಪೈಪೋಟಿಯನ್ನು ಎದುರಿಸಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಆದರೆ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಮೂಲಕ ತಮ್ಮ ತಂಡದ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಇಂಡಿಯಾ ಲೆಜೆಂಡ್ಸ್ ಸಂಭಾವ್ಯ ಆಡುವ ಬಳಗ:
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ನಮನ್ ಓಜಾ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಮುನಾಫ್ ಪಟೇಲ್
ಶ್ರೀಲಂಕಾ ಲೆಜೆಂಡ್ಸ್ ಸಂಭಾವ್ಯ ಆಡುವ ಬಳಗ:
ಸನತ್ ಜಯಸೂರ್ಯ, ತಿಲಕರತ್ನ ದಿಲ್ಶನ್ (ನಾಯಕ), ಉಪುಲ್ ತರಂಗ (ವಿಕೆಟ್), ಚಮರ ಸಿಲ್ವಾ, ಕೌಶಲ್ಯ ವೀರರತ್ನ, ಚಿಂತಕ ಜಯಸಿಂಗ್, ರಸ್ಸೆಲ್ ಅರ್ನಾಲ್ಡ್, ಫರ್ವೀಜ್ ಮಹರೂಫ್, ನುವಾನ್ ಕುಲಶೇಖರ, ಧಮ್ಮಿಕಾ ಪ್ರಸಾದ್, ರಂಗನಾ ಹೆರಾತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications