Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG Test: ಬರ್ಮಿಂಗ್‌ಹ್ಯಾಮ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತ, ಆಕಾಶ್‌ಗೆ 6 ವಿಕೆಟ್‌ಗೆ: ಪುಟಿದೆದ್ದ ಗಿಲ್ ಪಡೆ

ಬರ್ಮಿಂಗ್‌ ಹ್ಯಾಮ್‌ ಅಂಗಳದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದೆ. 608 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲವಾದ ಇಂಗ್ಲೆಂಡ್‌ ನಿರಾಸೆ ಅನುಭವಿಸಿದೆ. ಈ ಮೂಲಕ ಭಾರತ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಈ ಮೊದಲು ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಭಾನುವಾರ ಐದನೇ ದಿನದಾಟವನ್ನು ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 72 ರನ್‌ಗಳಿಂದ ಮುಂದುವರೆಸಿತು. ಈ ವೇಳೆ ಟೀಮ್ ಇಂಡಿಯಾದ ಅನುಭವಿ ಸ್ಟಾರ್ ಬೌಲರ್‌ಗಳ ಕರಾರುವಾಕ್ ದಾಳಿಯನ್ನು ಎದುರಿಸುವಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ವಿಫರಾದರು. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಒಲಿ ಪೋಪ್‌ 3 ಬೌಂಡರಿ ಸಹಾಯದಿಂದ 24 ರನ್ ಬಾರಿಸಿದ್ದಾಗ ಆಕಾಶ್ ದೀಪ್ ಎಸೆತ ಅಮೋಘ ಎಸೆತಕ್ಕೆ ಔಟ್ ಆದರು.

India Levels Series Against England With Historic Win in Birmingham

ಮಧ್ಯಮ ಕ್ರಮಾಂಕದಲ್ಲಿ ಇಂಗ್ಲೆಂಡ್ ತಂಡಕ್ಕೆ ಹಲವು ಪಂದ್ಯಗಳಲ್ಲಿ ನೆರವಾಗಿದ್ದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್‌ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಇವರು 31 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 23 ರನ್‌ ಬಾರಿಸಿದ್ದಾಗ ಆಕಾಶ್ ದೀಪ್‌ ತೋಡಿದ ಖೆಡ್ಡಾಗೆ ಬಲಿಯಾದರು.

6ನೇ ವಿಕೆಟ್‌ಗೆ ಉತ್ತಮ ಜೊತೆಯಾಟ

ಆರನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್‌ ಹಾಗೂ ಜೇಮಿ ಸ್ಮಿತ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಗಿಲ್ ಪಡೆ ಮಾಡಿಕೊಂಡ ಯೋಜನೆಯಲ್ಲ ಕೈ ಕೊಟ್ಟಿತು. ಈ ಜೋಡಿ ತಂಡಕ್ಕೆ 70 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಬೆನ್‌ ಸ್ಟೋಕ್ಸ್‌ 33 ರನ್‌ ಬಾರಿಸಿ ಮುನ್ನಗುತ್ತಿದ್ದಾಗ ಔಟ್ ಆದರು. ಇವರಿಗೆ ವಾಷಿಂಗ್ಟನ್‌ ಸುಂದರ್‌ ತಮ್ಮ ಕ್ಲಾಸಿಕ್ ಸ್ಪಿನ್ ಮೂಲಕ ಇಂಗ್ಲೆಡ್ ನಾಯಕನಿಗೆ ಕಾಟ ನೀಡಿದರು.

ಬರ್ಮಿಂಗ್‌ ಹ್ಯಾಮ್‌ನಲ್ಲಿ ಇತಿಹಾಸ

ಟೀಮ್ ಇಂಡಿಯಾ ಬರ್ಮಿಂಗ್‌ ಹ್ಯಾಮ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ನಿರಾಸೆಯನ್ನು ಅನುಭವಿಸಿತ್ತು. ಇದೇ ಮೊದಲ ಬಾರಿಗೆ ಭಾರತ ಬರ್ಮಿಂಗ್‌ ಹ್ಯಾಮ್‌ ಅಂಗಳದಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಇದಕ್ಕೂ ಮೊದಲು ಈ ಮೈದಾನದಲ್ಲಿ ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಈಗ ಗಿಲ್ ಪಡೆ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ.

India Levels Series Against England With Historic Win in Birmingham

ಬುಮ್ರಾ ಇಲ್ಲದಿದ್ದರೂ ಅಬ್ಬರ

ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ಎರಡನೇ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ಹೆಚ್ಚಾಗಿ ಕಾಡಲೇ ಇಲ್ಲ. ತಂಡದ ಸ್ಟಾರ್ ಬೌಲರ್‌ಗಳು ಸಮಯಕ್ಕೆ ತಕ್ಕಂತೆ ಚೆಂಡನ್ನು ಎಸೆದು ವಿಕೆಟ್‌ ಪಡೆದರು. ಈ ಮೂಲಕ ಭಾರತದ ಗೆಲುವಿನಲ್ಲಿ ಮಿಂಚಿದರು.

ಜೇಮಿ ಸ್ಮಿತ್‌ 88

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಗರಿಷ್ಠ ರನ್ ದಾಖಲಿಸಿದ ಕೀರ್ತಿ ವಿಕೆಟ್‌ ಕೀಪರ್ ಬ್ಯಾಟರ್‌ ಜೇಮಿ ಸ್ಮಿತ್ ಅವರಿಗೆ ಸಲ್ಲುತ್ತದೆ. ಇವರು 99 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 88 ರನ್‌ ಸಿಡಿಸಿ ಔಟ್ ಆದರು. ಬ್ರೈಡನ್ ಕಾರ್ಸೆ 38 ರನ್‌ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಆಕಾಶ್ ದೀಪ್‌ 6 ವಿಕೆಟ್‌

ಟೀಮ್ ಇಂಡಿಯಾದ ಭರವಸೆಯ ಆಟಗಾರ ಆಕಾಶ್ ದೀಪ್‌ ಅಮೋಘ ಪ್ರದರ್ಶನ ನೀಡಿದರು. ಇವರು ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದಕ್ಕೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಇವರು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಉಳಿದಂತೆ ಮೊಹಮ್ಮದ್‌ ಸಿರಾಜ್‌, ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣಾ, ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್‌ ಪಡೆದರು.

Story first published: Sunday, July 6, 2025, 21:44 [IST]
Other articles published on Jul 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+