For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧ ಬುಮ್ರಾ ಪ್ರದರ್ಶನ ಹೇಗಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್‌ ಸ್ಥಿರ ಪ್ರದರ್ಶನವನ್ನು ನೀಡಿ, ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದ ಕಿವೀಸ್‌ 8 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಮೂಲಕ ಕಿವೀಸ್ ಪಡೆ 36 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗ ಎಲ್ಲರ ಚಿತ್ತ ಅಕ್ಟೋಬರ್‌ 24 ರಂದು ನಡೆಯಲಿರುವ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಕಮ್‌ ಬ್ಯಾಕ್‌ ಮಾಡುವ ಕನಸನ್ನು ಕಾಣುತ್ತಿದೆ. ಈ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತಕ್ಕೆ, ಗೆಲುವು ಅನಿವಾರ್ಯ. ಈಗಾಗಲೇ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಎರಡು ಬಾರಿ ಪ್ರವೇಶ ಪಡೆದಿತ್ತು. ಹ್ಯಾಟ್ರಿಕ್‌ ಫೈನಲ್‌ ಪ್ರವೇಶಿಸುವ ಕನಸನ್ನು ಟೀಮ್ ಇಂಡಿಯಾ ಕಾಣುತ್ತಿದೆ.

India Look for Comeback in Pune as Bumrah Seeks Redemption Against New Zealand

ಬುಮ್ರಾ ಮೇಲೆ ಎಲ್ಲರ ಚಿತ್ತ

ಭಾರತ ಯಾವ ಕಾಂಬಿನೇಷನ್‌ನೊಂದಿಗೆ ಎರಡನೇ ಟೆಸ್ಟ್‌ನಲ್ಲಿ ಅಂಗಳಕ್ಕೆ ಇಳಿಯುತ್ತದೆ ಎಂಬುದು ಇನ್ನು ಕುತೂಹಲ ಹೆಚ್ಚಿಸಿದೆ. ಇನ್ನು ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಅವರು ಆಡುವುದು ಖಚಿತವಾಗಿದೆ. ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಬುಮ್ರಾ ಎಲ್ಲರ ಚಿತ್ತ ಕದ್ದಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲೂ ಕೇವಲ ಮೂರು ವಿಕೆಟ್‌ ಕಬಳಿಸುವಲ್ಲಿ ಸಫಲರಾಗಿದ್ದಾರೆ. ಎರಡನೇ ಪಂದ್ಯದಲ್ಲಿ ಬುಮ್ರಾ ಅಬ್ಬರದ ಪ್ರದರ್ಶನ ನೀಡಲು ತಯಾರಿ ನಡೆಸಿದ್ದಾರೆ.

ಬುಮ್ರಾ ಪ್ರದರ್ಶನ ಹೇಗಿದೆ?

ವಿಶ್ವದ ಎಲ್ಲ ಬ್ಯಾಟರ್‌ಗಳನ್ನು ಕಾಡುವ ಬುಮ್ರಾ ನ್ಯೂಜಿಲೆಂಡ್‌ ವಿರುದ್ಧ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ನ್ಯೂಜಿಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಬುಮ್ರಾ 9 ವಿಕೆಟ್‌ ಪಡೆದಿದ್ದು, ಈ ವೇಳೆ ಅವರ ಸರಾಸರಿ 39.11 ಆಗಿದೆ.

ಫೆಬ್ರವರಿ 2020 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬುಮ್ರಾ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಹೀನಾಯ ಸೋಲು ಕಾಣಬೇಕಾಯಿತು. ಇದೇ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್‌ ನಿರಾಸೆ ಕಂಡಿತ್ತು. ಇನ್ನು 2021ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲೂ ಬುಮ್ರಾ ಭಾರತದ ಪರ ಅಖಾಡಕ್ಕೆ ಇಳಿದಿದ್ದರು. ಈ ಪಂದ್ಯದಲ್ಲೂ ಭಾರತ ಸೋಲು ಕಂಡಿತ್ತು. ಇದೇ ಸಾಲಿಗೆ ಬೆಂಗಳೂರು ಟೆಸ್ಟ್‌ ಸಹ ಸೇರಿಕೊಂಡಿದೆ.

India Look for Comeback in Pune as Bumrah Seeks Redemption Against New Zealand

ಈ ಅಂಕಿ ಅಂಶಗಳು ಸುಳ್ಳು ಎಂದು ಬಿಂಬಿಸುವ ದೃಷ್ಟಿಯಿಂದ ಬುಮ್ರಾ ಅಖಾಡಕ್ಕೆ ಇಳಿಯುವ ಕನಸಿನಲ್ಲಿದ್ದಾರೆ. ಈ ಮೂಲಕ ಭಾರತಕ್ಕೆ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವಿನ ಮಾಲೆ ತೊಡಿಸುವ ಕನಸನ್ನು ಯಾರ್ಕರ್‌ ಸ್ಪೇಷಲಿಸ್ಟ್ ಕಾಣುತ್ತಿದ್ದಾರೆ.

Story first published: Tuesday, October 22, 2024, 23:22 [IST]
Other articles published on Oct 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+