Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡಿಯಾ vs ನ್ಯೂಜಿಲ್ಯಾಂಡ್: ಅತಿಥಿಗಳಿಗೆ ಮತ್ತೆ ಅದೃಷ್ಟವಾಗುತ್ತಾ ಆಕ್ಲೆಂಡ್ ಅಂಗಳ

India Look To Extend Advantage Over New Zealand At High-Scoring Eden Park

ನ್ಯೂಜಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇವತ್ತು ಮತ್ತೆ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದೆ. ಇದಕ್ಕೆ ಮತ್ತೆ ಆಕ್ಲೆಂಡ್ ಅಂಗಳವೇ ಸಾಕ್ಷಿಯಾಗುತ್ತಿದೆ.

ಆಕ್ಲೆಂಡ್ ಅಂಗಳದಲ್ಲಿ ನಡೆದ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ಕೊಟ್ಟ ಬೃಹತ್ ಟಾರ್ಗೆಟನ್ನು ಬೆನ್ನಟ್ಟಿ ಗೆದ್ದುಕೊಂಡಿತ್ತು, ಇವತ್ತಿನ ಎರಡನೇ ಪಂದ್ಯ ಭಾರತದ ಪಾಲಿಗೆ ಅದೃಷ್ಟವನ್ನು ನೀಡುತ್ತಾ ಎಂಬುದು ಕುತೂಹಲಕಾರಿಯಾಗಿದೆ.

ಟಾಸ್ ಇಲ್ಲಿ ನಿರ್ಣಾಯಕ ಪಾತ್ರವಾಗುವುದರಲ್ಲಿ ಅನುಮಾನವಿಲ್ಲ. ಟೀಮ್ ಇಂಡಿಯಾ ರನ್ ಬೆನ್ನಟ್ಟುವುದರಲ್ಲಿ ಎತ್ತಿದ ಕೈ ಹೀಗಾಗಿ ಯಾವುದೇ ತಂಡ ಇಲ್ಲಿ ಟಾಸ್‌ ಗೆದ್ದರೂ ಮೊದಲಿಗೆ ಫೀಲ್ಡಿಂಗ್ ಆಯ್ದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಮೊದಲ ಪಂದ್ಯದಲ್ಲೂ ಟೀಮ್ ಇಂಡಿಯಾ ಇದೇ ನಿರ್ಧಾರವನ್ನು ಮಾಡಿತ್ತು.

ಈಡನ್ ಪಾರ್ಕ್ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗುವ ಪಿಚ್ ಇಲ್ಲಿ ಬೌಲರ್‌ಗಳು ಸಾಕಷ್ಟು ಬೆವರು ಹರಿಸಬೇಕಾದ ಪರಿಸ್ಥಿತಿಯಿದೆ. ಕಳೆದ ಪಂದ್ಯದಲ್ಲೂ ರನ್ ನಿಯಂತ್ರಣದ ವಿಚಾರವಾಗಿ ಗಮನಿಸಿದರೆ ಜಸ್ಪ್ರೀತ್ ಬೂಮ್ರಾ ಮಾತ್ರವೇ 8ರ ಸರಾಸರಿಗಿಂತ ಕಡಿಮೆ ರನ್ ನೀಡಿದ ಬೌಲರ್ ಆಗಿದ್ದರು.

ನ್ಯೂಜಿಲ್ಯಾಂಡ್‌ಗೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಎರಡನೇ ಪಂದ್ಯವನ್ನು ಗೆದ್ದು ಸಮಬಲ ಮಾಡದೆ ಹೋದಲ್ಲಿ ಮುಂದಿನ ಪಂದ್ಯಗಳಲ್ಲು ಮತ್ತಷ್ಟು ಒತ್ತಡಕ್ಕೆ ಒಳಗಾಗಲಿದೆ. ಆದರೆ ಟೀಮ್ ಇಂಡಿಯಾ ಮೊದಲ ಪಂದ್ಯ ಗೆದ್ದ ಕಾರಣ ಮತ್ತಷ್ಟು ಹುರುಪಿನಲ್ಲಿದೆ.

Story first published: Sunday, January 26, 2020, 11:26 [IST]
Other articles published on Jan 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+