IML: ಇಂಗ್ಲೆಂಡ್ ವಿರುದ್ಧ ಭಾರತ ಮಾಸ್ಟರ್ಸ್ ಅಮೋಘ ಜಯ: ಕನ್ನಡಿಗನ ಮಿಂಚು
ಮುಂಬೈನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಇಂಡಿಯಾ ಮಾಸ್ಟರ್ 9 ವಿಕೆಟ್ ಗಳಿಂದ ಇಂಗ್ಲೆಂಡ್ ಮಾಸ್ಟರ್‌ನ್ನು ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಇಂಡಿಯಾ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಡಿಯಾ ಮಾಸ್ಟರ್ಸ್ 11.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸಿ ಜಯ ಸಾಧಿಸಿತು.

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಭಾರತದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಗುರ್ಕೀರತ್ ಸಿಂಗ್ ಮಾನ್ ಹಾಗೂ ಸಚಿನ್ ತೆಂಡೂಲ್ಕರ್ ತಂಡಕ್ಕೆ ಅಮೋಘ ಬ್ಯಾಟಿಂಗ್ ಜೊತೆಯಾಟವನ್ನು ನೀಡಿದರು. ಈ ಜೋಡಿ ತಂಡಕ್ಕೆ 71 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 7.1 ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 34 ರನ್ ಸಿಡಿಸಿದರು.
ಆರಂಭಿಕರ ಅರ್ಧಶತಕ
ಆರಂಭಿಕರಾದ ಗುರ್ಕೀರತ್ ಸಿಂಗ್ ಮಾನ್ ಅಮೋಘ ಬ್ಯಾಟಿಂಗ್ ನೀಡಿದರು. ಇವರು 35 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸಿಡಿಸಿದರು. ಸ್ಟಾರ್ ಆಟಗಾರ ಯುವರಾಜ್ ಸಿಂಗ್ 14 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಇಂಗ್ಲೆಂಡ್ ತಂಡದ ಯಾವಬ್ಬ ಅನುಭವಿ ಆಟಗಾರ ಅರ್ಧಶತಕವನ್ನು ಬಾರಿಸಲಿಲ್ಲ. ಅಲ್ಲದೆ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆಯನ್ನು ಸಹ ನೀಡಲಿಲ್ಲ. ಟೀಮ್ ಇಂಡಿಯಾದ ಶಿಸ್ತು ಬದ್ಧ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಇಯಾನ್ ಮಾರ್ಗನ್ 14 ರನ್ ಸಿಡಿಸಿ ಧವಳ್ ಕುಲಕರ್ಣಿಗೆ ವಿಕೆಟ್ ಒಪ್ಪಿಸಿದರು.

ಕನ್ನಡಿಗನ ಅಬ್ಬರ
ಉಳಿದಂತೆ ಇಂಗ್ಲೆಂಡ್ ಪರ ಟಿಮ್ ಆಂಬ್ರೋಸ್ 1 ಸಿಕ್ಸರ್ ಸಹಾಯದಿಂದ 23, ಡ್ಯಾರೆನ್ ಮ್ಯಾಡಿ ತಲಾ ಒಂದು ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 25, ಟಿಮ್ ಬ್ರೆಸ್ನನ್ 2 ಬೌಂಡರಿ ಒಳಗೊಂಡಂತೆ 16, ಕ್ರಿಸ್ ಸ್ಕೋಫೀಲ್ಡ್ 18 ರನ್, ಕ್ರಿಸ್ ಟ್ರೆಮ್ಲೆಟ್ 16 ರನ್ ಸಿಡಿಸಿ ಔಟ್ ಆದರು.
ಭಾರತದ ಪರ ಧವಳ್ ಕುಲಕರ್ಣಿ 21 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಕನ್ನಡಿಗ ಅಭಿಮನ್ಯು ಮಿಥನ್ ಹಾಗೂ ಪವನ್ ನೇಗಿ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications