Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಶಾನ್ ಕಿಶನ್ ತರದ ಆಟಗಾರ ಅಗ್ರ ಕ್ರಮಾಂಕದಲ್ಲಿರಬೇಕು: ದಿನೇಶ್ ಕಾರ್ತಿಕ್

India need somebody like Ishan Kishan at the top to put pressure on the bowlers

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಶಾನ್ ಕಿಶನ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. ಇಶಾನ್ ಕಿಶನ್ ಆಡಿದ ನಿರ್ಭೀತ ಆಟಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಹಿತ ದಿಗ್ಗಜ ಆಟಗಾರರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇಶಾನ್ ಕಿಶನ್ ಆಟಕ್ಕೆ ತಲೆದೂಗಿದ್ದಾರೆ.

"ಕೆಲ ಅದ್ಭುತ ಹೊಡೆತಗಳು, ಆತ ಆರಂಭಿಸಿದ ರೀತಿ, ಆತನ ಆತ್ಮವಿಶ್ವಾಸ, ಸಮತೋಲನ, ತನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಬಗೆ ಹಾಗೂ ಎಸೆತಗಳನ್ನು ಲೆಕ್ಕಿಸದೆ ಆತ ಆಡುವ ರೀತಿ ಆತನನ್ನು ವಿಶೇಷನನ್ನಾಗಿ ಮಾಡುತ್ತದೆ. ಅದೇ ಕಾರಣಕ್ಕೆ ಆತ ಓರ್ವ ಪವರ್ ಪ್ಲೇಯರ್" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

"ನೀವು ಅಗ್ರ ಕ್ರಮಾಂಕದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರಬಲ್ಲ ಇಶಾನ್ ಕಿಶನ್ ಅವರಂತಾ ಆಟಗಾರರನ್ನು ಹೊಂದಲು ಬಯಸುತ್ತೀರಿ. ಮೊದಲ ಎಸೆತದಿಂದಲೇ ಆತ ಜೋಫ್ರಾ ಮೇಲೆ ಒತ್ತಡವನ್ನು ಹೇರಿದರು" ಎಂದು ದಿನೇಶ್ ಕಾರ್ತಿಕ್ ಯುವ ಬ್ಯಾಟ್ಸ್‌ಮನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಸ್ಪೋಟಕವಾಗಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ ಇಶಾನ್ ಕಿಶನ್ ಕೊಹ್ಲಿಯ ಆಟಕ್ಕೆ ಹೆಚ್ಚು ಸೂಕ್ತನಾಗಬಲ್ಲ ಕ್ರಿಕೆಟಿಗ ಎಂದು ಹೇಳಿದ್ದಾರೆ.

3ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸರಣಿ 1-1 ಅಂತರದಿಂದ ಸರಣಿಯನ್ನು ಸಮಬಲಗೊಳಿಸಿದೆ. ಮೂರನೇ ಪಂದ್ಯ ಈಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

Story first published: Tuesday, March 16, 2021, 18:41 [IST]
Other articles published on Mar 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+