ಬಹಳಷ್ಟು ಆಟಗಾರರ ಗಾಯಕ್ಕೆ ಭಾರತ ಕಾರಣ ಹುಡುಕಬೇಕು: ಗಿಲ್‌ಕ್ರಿಸ್ಟ್

ಬ್ರಿಸ್ಬೇನ್: ಟೀಮ್ ಇಂಡಿಯಾದಲ್ಲಿ ಪ್ರತೀ ಪಂದ್ಯಕ್ಕೂ ಆಗುತ್ತಿರುವ ಬದಲಾವಣೆಗಳು, ತಂಡದ ಪ್ರದರ್ಶನವನ್ನು ಪ್ರಶ್ನಿಸುವಂತೆಯೇ ಇಲ್ಲ. ಆದರೆ ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಭಾರತದ ಅಷ್ಟೊಂದು ಆಟಗಾರರು ಯಾಕೆ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದಾರೆ ಅನ್ನೋದನ್ನು ಭಾರತ ಕಂಡುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಟೀಮ್ ಇಂಡಿಯಾದ ಪ್ರಮುಖ ಆಟಗಾರರೆಲ್ಲಾ ಗಾಯಕ್ಕೀಡಾಗಿ ಸರಣಿಯಿಂದ ಹೊರ ಬಿದ್ದಿದ್ದಾರೆ. ಪಂದ್ಯವೊಂದರಲ್ಲಿ 11 ಜನ ಆಡುವವರಾದರೆ ಈಗಾಗಲೇ ತಂಡದಿಂದ 11ಕ್ಕೂ ಹೆಚ್ಚು ಮಂದಿ ಗಾಯಕ್ಕೀಡಾಗಿ ಹೊರ ಬಿದ್ದಿದ್ದಾರೆ. ವಿಶೇಷವೆಂದರೆ ಟೆಸ್ಟ್ ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರರೆಂದರೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಮಾತ್ರ!
'ಈ ಪ್ರವಾಸದಲ್ಲಿ ಅವರು (ಭಾರತೀಯರು) ಎದುರಿಸಿದ ಪ್ರತಿಕೂಲತೆಯು ಅಸಾಧಾರಣವಾಗಿದೆ. ತಂಡದಲ್ಲಿ ಅಷ್ಟೆಲ್ಲ ಆಟಗಾರರು ಯಾಕೆ ಗಾಯದ ಸಮಸ್ಯೆ ಎದುರಿಸಿದರು ಅನ್ನೋದನ್ನು ಟೀಮ್ ಇಂಡಿಯಾ ಆಟಗಾರರು ತಿಳಿದುಕೊಳ್ಳಬೇಕಾಗುತ್ತದೆ,' ಎಂದು foxsports.com.au ಜೊತೆ ಮಾತನಾಡಿದ ಗಿಲ್ಲಿ ಹೇಳಿದ್ದಾರೆ.
ಗಾಯಕ್ಕೀಡಾಗಿರುವ ಭಾರತದ ಆಟಗಾರರು
* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ಹನುಮ ವಿಹಾರಿ, ಹ್ಯಾಮ್‌ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್‌ಪ್ರೀತ್ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ತಂಡದಿಂದ ಹೊರಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications