ಟೀಮ್ ಇಂಡಿಯಾ ಗೆಲುವಿಗೆ 3 ಅಲ್ಲ 4 ವಿಕೆಟ್ ಬೇಕು
ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್ ಹಾಗೂ ತೆಂಡುಲ್ಕರ್ ಸರಣಿಯ ಕೊನೆಯ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯ ಈಗ ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಪಂದ್ಯ ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಆಸೆ ಇಂಗ್ಲೆಂಡ್ ತಂಡದ್ದಾದರೆ, ಇಂಡಿಯಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯನ್ನು ಹೊಂದಿದೆ. ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇನ್ನು 3 ಅಲ್ಲಾ 4 ವಿಕೆಟ್ ಅಗತ್ಯತೆ ಇದೆ.
ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯ ರೋಚಕತೆ ಹುಟ್ಟಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಎರಡನೇ ಇನಿಂಗ್ಸ್‌ನಲ್ಲಿ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕೊನೆಯ ಅವಧಿಯಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಸಹ ಅಮೋಘ ಬೌಲಿಂಗ್ ದಾಳಿ ನಡೆಸಿ ಪಂದ್ಯಕ್ಕೆ ಮರು ಜೀವ ತುಂಬಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಕನಸನ್ನು ಟೀಮ್ ಇಂಡಿಯಾ ಕಾಣುತ್ತಿದೆ. ಆದರೆ ಇದಕ್ಕಾಗಿ ಭಾರತ ತಂಡಕ್ಕೆ ಇನ್ನು 4 ವಿಕೆಟ್ ಕಬಳಿಸುವ ಅವಶ್ಯಕತೆ ಇದೆ.

ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ವೋಕ್ಸ್ ಬೌಂಡರಿ ತಡೆಯುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿರಲಿಲ್ಲ. ಆದರೆ ಇವರು ಎರಡನೇ ಇನಿಂಗ್ಸ್‌ನಲ್ಲಿ ಅಗತ್ಯ ಬಿದ್ದರೆ ಬ್ಯಾಟ್ ಮಾಡಬಲ್ಲರು ಎಂದು ತಿಳಿದು ಬಂದಿದೆ.
ಅಗತ್ಯ ಬಿದ್ದರೆ ಬ್ಯಾಟ್ ಮಾಡುತ್ತಾರೆ
ನಾಲ್ಕನೇ ದಿನದಾಟ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೋ ರೂಟ್ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಇದೇ ವೇಳೆ ಇಂಗ್ಲೆಂಡ್ ತಂಡಕ್ಕೆ ಅಗತ್ಯ ಬಿದ್ದರೆ, ಕ್ರಿಸ್ ವೋಕ್ಸ್ ನಾಲ್ಕನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಅವರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಬಿಳಿ ಬಟ್ಟೆಗಳಲ್ಲೂ ಸಹ ನೋಡಬಹುದಾಗಿದೆ ಎಂದು ತಿಳಿಸಿದರು. ಅವರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಒಂದು ವೇಳೆ ಅವರ ಸೇವೆ ತಂಡಕ್ಕೆ ಬೇಕಿದ್ದಲ್ಲಿ ನಿಶ್ಚಿತವಾಗಿ ಅವರು ಲಭ್ಯರಿರಲಿದ್ದಾರೆ. ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡಿ ಸರಣಿ ಗೆಲ್ಲಿಸಲು ಸಹಕರಿಸಬಹುದು ಎಂದು ರೂಟ್ ತಿಳಿಸಿದ್ದಾರೆ.
ಪಂದ್ಯದ ಚಿತ್ರಣ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮಳೆಯಿಂದ ನಿಂತಾಗ ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 339 ರನ್ ಸೇರಿಸಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯಲು ಓಲಿ ಪೋಪ್ ಪಡೆಗೆ ಇನ್ನು 35 ರನ್‌ಗಳ ಅವಶ್ಯಕತೆ ಇದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯನ್ನು ಗಿಲ್ ಪಡೆ ಹೊಂದಿದೆ. ಐದನೇ ದಿನದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications