ದ.ಆಫ್ರಿಕಾ ಸವಾಲು ಮೆಟ್ಟಿನಿಂತಲ್ಲಿ ಟೀಮ್ ಇಂಡಿಯಾ ಇತಿಹಾಸ: ಇತಿಹಾಸದಲ್ಲಿ ಹೀಗೇ ಆಗಿದ್ದು ಒಮ್ಮೆ ಮಾತ್ರ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ತೆಂಬು ಬವುಮಾ ಪಡೆ ಬಿಗಿ ಹಿಡಿತ ಸಾಧಿಸಿದೆ. ಎರಡನೇ ಟೆಸ್ಟ್ ಗೆಲ್ಲಲು ಬವುಮಾ ತಂಡ ಅಸಾಧ್ಯವಾದ ಗುರಿಯನ್ನು ಟೀಮ್ ಇಂಡಿಯಾಕ್ಕೆ ನೀಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸವನ್ನು ತಿರುವಿ ಹಾಕಿದಾಗ ಹಲವು ಅಂಕಿ ಅಂಶಗಳು ಕಾಣಿಸಿಕೊಳ್ಳಲಿವೆ. ಭಾರತ ದಕ್ಷಿಣ ಆಫ್ರಿಕಾ ನೀಡಿರುವ ಬೃಹತ್ ಮೊತ್ತವನ್ನು ಕೊನೆಯ ದಿನದಲ್ಲಿ ಚೇಸ್ ಮಾಡಿದಲ್ಲಿ ಇತಿಹಾಸ ನಿರ್ಮಾಣವಾಗಲಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡವು 400ಕ್ಕಿಂತ ಹೆಚ್ಚು ರನ್‌ಗಳನ್ನು ಒಂದು ಬಾರಿ ಮಾತ್ರ ಚೇಸ್ ಮಾಡಿದೆ. ಭಾರತ, ದಕ್ಷಿಣ ಆಫ್ರಿಕಾ ನೀಡಿರುವ ಕಠಿಣ ಗುರಿಯನ್ನು ಮೆಟ್ಟಿನಿಂತಲ್ಲಿ ನಿಶ್ಚಿತವಾಗಿ ಇತಿಹಾಸದ ಪುಟವನ್ನು ಸೇರಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ದಿನ 300 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆ ಹಾಕುವುದು ಸವಾಲಾಗಿರುತ್ತದೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಒಮ್ಮೆ ಮಾತ್ರ ತಂಡ 400ಕ್ಕೂ ಹೆಚ್ಚು ರನ್‌ಗಳನ್ನು ಕೊನೆಯ ದಿನ ಚೇಸ್ ಮಾಡಿದೆ.

1948 ರಲ್ಲಿ ಆಸ್ಟ್ರೇಲಿಯಾ ಈ ದಾಖಲೆಯನ್ನು ನಿರ್ಮಿಸಿತ್ತು. ಅಂದು ಇಂಗ್ಲೆಂಡ್, ಆಸ್ಟ್ರೇಲಿಯಾಕ್ಕೆ 404 ರನ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಆಸೀಸ್ 3 ವಿಕೆಟ್ ಕಳೆದುಕೊಂಡು ಮುಟ್ಟಿತ್ತು. ಅಂದಿನಿಂದ ಯಾವೊಂದು ತಂಡವೂ ಸಹ 400 ರನ್‌ಗಳ ಗುರಿಯನ್ನು ಬೆನ್ನಟ್ಟಿಲ್ಲ.
ಡ್ರಾ.. ಸೋಲು..
ಟೀಮ್ ಇಂಡಿಯಾಗೆ ಸದ್ಯಕ್ಕಂತೂ ಎರಡು ಆಯ್ಕೆಗಳು ಮಾತ್ರ ಎದ್ದು ಕಾಣುತ್ತಿವೆ. ನೆಲಕಚ್ಚಿ ನಿಂತು ಬ್ಯಾಟ್ ಮಾಡಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡುವುದು. ಹಾಗೂ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು. ಇಲ್ಲವೇ ಮತ್ತೆ ಹಳೆಯ ಚಾಳಿಯಲ್ಲೇ ಬ್ಯಾಟ್ ಮಾಡಿ ಪಟ ಪಟನೇ ವಿಕೆಟ್‌ಗಳನ್ನು ಕೈ ಚೆಲ್ಲಿ ಸೋಲನ್ನು ಕಾಣುವುದು. ಈ ಎರಡೇ ಆಯ್ಕೆಗಳು ಸದ್ಯ ಟೀಮ್ ಇಂಡಿಯಾದ ಮುಂದಿವೆ. ಗೆಲುವಿನ ಆಸೆ ಕ್ಷೀಣ. ಆದರೂ ಪವಾಡ ನಡೆದಲ್ಲಿ ಭಾರತ ಗೆಲುವು ಸಾಧಿಸಬಹುದಾಗಿದೆ. ಇನ್ನು ನಾಲ್ಕನೇ ದಿನದಾಟದ ಅಂತ್ಯಕ್ಕೆ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭಿಕರು ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಮೊದಲಾವಧಿಯಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ.

ಗೆಲುವಿಗೆ ಇನ್ನು ಬೇಕು 522 ರನ್
ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾಕ್ಕೆ 549 ರನ್‌ಗಳ ಗುರಿಯನ್ನು ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 260 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ದಕ್ಷಿಣ ಆಫ್ರಿಕಾ, ಭಾರತಕ್ಕೆ ಎರಡನೇ ಇನಿಂಗ್ಸ್ ಆರಂಭಿಸಲು ಆಹ್ವಾನ ನೀಡಿತು. ಭಾರತ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 27 ರನ್ ಸೇರಿಸಿದೆ. ಇನ್ನು ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇನ್ನು 522 ರನ್ ಕಲೆ ಹಾಕುವ ಅವಶ್ಯಕತೆ ಇದೆ. ಒಂದು ವೇಳೆ ಭಾರತ ಈ ಗುರಿಯನ್ನು ಬೆನ್ನಟ್ಟುವಲ್ಲಿ ಸಫಲವಾದಲ್ಲಿ ಇತಿಹಾಸ ನಿರ್ಮಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications