For Quick Alerts
ALLOW NOTIFICATIONS  
For Daily Alerts
 

IND vs ENG Test: ಇತಿಹಾಸ ನಿರ್ಮಿಸಲು ಗಿಲ್‌ ಪಡೆಗೆ ಬೇಕು 7 ವಿಕೆಟ್‌

ಬರ್ಮಿಂಗ್‌ ಹ್ಯಾಮ್‌ನಲ್ಲಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸುವ ಕನಸಿನಿಂದ ಏಳು ಹೆಜ್ಜೆ ಹಿಂದೆ ನಿಂತಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಇನ್ನು ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವೇ ಆಗಿರಲಿಲ್ಲ. ಪ್ರಸಕ್ತ ಪ್ರವಾಸದಲ್ಲಿ ಭಾರತ ತಂಡ ಈ ಸಾಧನೆ ಮಾಡುವ ಕನಸು ಕಾಣುತ್ತಿದೆ. ಟೀಮ್ ಇಂಡಿಯಾ ಎರಡನೇ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ ತಂಡದ ಏಳು ವಿಕೆಟ್‌ ಪಡೆಯುವ ಅವಶ್ಯಕತೆ ಇದೆ. ನಾಲ್ಕನೇ ದಿನದಾಟದ ಕೊನೆಯ ಅವಧಿಯಲ್ಲಿ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟವನ್ನು ಭಾರತ ಒಂದು ವಿಕೆಟ್‌ಗೆ 64 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿತು. ಟೀಮ್ ಇಂಡಿಯಾದ ಪರ ನಾಯಕ ಶುಭಮನ್‌ ಗಿಲ್‌ (161 ರನ್) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಅಲ್ಲದೆ ಆಲ್‌ರೌಂಡರ್‌ ರವೀಂದ್ರ ಜಡೇಜಾ (ಅಜೇಯ 69 ರನ್) ಹಾಗೂ ವಿಕೆಟ್‌ ಕೀಪರ್ ಬ್ಯಾಟರ್‌ ರಿಷಭ್ ಪಂತ್ (65 ರನ್) ಬಾರಿಸಿ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ 6 ವಿಕೆಟ್‌ಗೆ 427 ರನ್‌ ಕಳೆದುಕೊಂಡಾಗ ಡಿಕ್ಲೇರ್ ಮಾಡಿಕೊಂಡಿತು.

India Needs 7 Wickets to Make History Against England in Birmingham Test

ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಸಾಧಿಸಿತ್ತು. ಇದರ ಫಲವಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ಗೆಲುವಿಗೆ 608 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 371 ರನ್‌ಗಳನ್ನು ಮೆಟ್ಟಿನಿಂತಿದ್ದರಿಂದ ಟೀಮ್ ಇಂಡಿಯಾ ಈ ಬಾರಿ ಇನ್ನು ಹೆಚ್ಚಿನ ಮೊತ್ತವನ್ನು ಚೇಸ್ ಮಾಡಲು ನೀಡಿತು.

ಗೆಲುವಿಗೆ 7 ವಿಕೆಟ್‌

608 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆರಂಭಿಕ ಆಟಗಾರ ಜಾಕ್ ಕ್ರಾಲಿ (0), ಬೆನ್ ಡಕೆಟ್ (25) ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್‌ ಜೋ ರೂಟ್‌ (6) ಟೀಮ್ ಇಂಡಿಯಾದ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಭಾರತದ ಪರ ಆಕಾಶ್ ದೀಪ್‌ 2, ಮೊಹಮ್ಮದ್‌ ಸಿರಾಜ್‌ 1 ವಿಕೆಟ್‌ ಪಡೆದರು.

ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಇತಿಹಾಸ ನಿರ್ಮಿಸಲು ಇನ್ನು ಜಸ್ಟ್‌ ಏಳು ಬೆಸ್ಟ್‌ ಎಸೆತಗಳು ಬೇಕಿವೆ. ಈ ಎಸೆತಗಳನ್ನು ಯಾರು ಡಿಲಿವರ್ ಮಾಡ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಕೊನೆಯ ದಿನದಾಟದ ಮೊದಲಾವಧಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಚೆಂಡು ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಈ ಪಂದ್ಯದಲ್ಲಿ ಡ್ರಾ ಸಾಧ್ಯತೆಯೂ ಇದೆ. ಇಂಗ್ಲೆಂಡ್‌ ಸೋಲಿನಿಂದ ಪಾರಾಗಲು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.

Story first published: Sunday, July 6, 2025, 0:38 [IST]
Other articles published on Jul 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+