Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೌತಾಂಪ್ಟನ್‌ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌

India-New Zealand World Test Championship final in Southampton

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್‌ಬೌಲ್‌ನಲ್ಲಿ ಜೂನ್ 18ರಿಂದ 22ರ ವರೆಗೆ ನಡೆಯಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಈ ವಿಚಾರವನ್ನು ಖಾತರಿಪಡಿಸಿದ್ದಾರೆ.

ಆರಂಭದಲ್ಲಿ ಸೌತಾಂಪ್ಟನ್‌ನ ಬದಲು ಲಾರ್ಡ್ಸ್ ಸ್ಟೇಡಿಯಂನಲ್ಲಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡೆಸಲು ಐಸಿಸಿ ಯೋಚಿಸಿತ್ತು. ಆದರೆ ಈಗ ಸೌತಾಂಪ್ಟನ್ ಅನ್ನು ಅಂತಿಮಗೊಳಿಸಿದೆ. ಯಾಕೆಂದರೆ ಸೌತಾಂಪ್ಟನ್‌ನ ಸ್ಟೇಡಿಯಂ ಒಳಗೆ ಫೈವ್ ಸ್ಟಾರ್ ಹೋಟೆಲ್‌ನ ಸೌಲಭ್ಯವಿದೆ. ಹೀಗಾಗಿ ಐಸಿಸಿ ವರ್ಲ್ಡ್‌ ಟೆಸ್ಟ್‌ ಫೈನಲ್‌ನಲ್ಲಿ ಸ್ಪರ್ಧಿಸುವ ಭಾರತ, ಇಂಗ್ಲೆಂಡ್ ತಂಡಗಳಿಗೆ ಬಯೋಬಬಲ್ ಸೃಷ್ಠಿಸಲು ಸುಲಭವಾಗಲಿದೆ.

ಪಿಟಿಐ ಜೊತೆ ಮಾತನಾಡಿದ ಗಂಗೂಲಿ, 'ಹೌದು, ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಏಜಸ್ ಬೌಲ್‌ನಲ್ಲಿ ನಡೆಯಲಿದೆ. ನಾನಲ್ಲಿಗೆ ಹೋಗಲಿದ್ದೇನೆ. ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಲಿದೆ ಎಂಬ ಭರವಸೆ ನನಗಿದೆ,' ಎಂದು ಗಂಗೂಲಿ ಹೇಳಿದ್ದಾರೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 3-1ರ ಗೆಲುವು ಕಂಡಿತ್ತು. ಹೀಗಾಗಿ ಭಾರತ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಕೊನೇ ಟೆಸ್ಟ್‌ನಲ್ಲಿ ಭಾರತ ಸೋತಿದ್ದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡುತ್ತಿದ್ದವು.

Story first published: Monday, March 8, 2021, 19:39 [IST]
Other articles published on Mar 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+