Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರ ಹೆಸರಿಸಿದ ಮೈಕಲ್ ವಾನ್

India or New Zealand? Michael Vaughan predicts winner of World Test Championship

ಲಂಡನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕಿನ್ನು ಒಂದು ತಿಂಗಳು ಬಾಕಿಯಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಜೂನ್ 18-22ರ ವರೆಗೆ ಫೈನಲ್‌ ಪಂದ್ಯ ನಡೆಯಲಿದೆ.

ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಮುನ್ನ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಅದಾಗಿ ಜೂನ್ 18ಕ್ಕೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಶುರುವಾಗಲಿದೆ. ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ.

ಐಸಿಸಿ ಹೊಸದಾಗಿ ಪರಿಚಯಿಸಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ಸ್ ಯಾರನ್ನಿಸಿಕೊಳ್ಳಲಿದ್ದಾರೆ ಎನ್ನೋದು ಕುತೂಹಲ ಮೂಡಿಸಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯ ಚಾಂಪಿಯನ್ಸ್ ಯಾರಾಗಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಹೇಳಿದ್ದಾರೆ.

'ಫೈನಲ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲಿದೆ. ಡ್ಯೂಕ್‌ ಬಾಲ್, ಇಂಗ್ಲೆಂಡ್ ಪರಿಸ್ಥಿತಿ, ಭಾರತದ ಬ್ಯುಸೀ ಶೆಡ್ಯೂಲ್ ಇವೆಲ್ಲ ನ್ಯೂಜಿಲೆಂಡ್‌ಗೆ ಅನುಕೂಲ ನೀಡಲಿದೆ. ಅಲ್ಲದೆ ನ್ಯೂಜಿಲೆಂಡ್‌ಗೆ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳಿವೆ. ನೀವು ವಾದಿಸಬಹುದು. ಆದರೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಕೂಡ ನ್ಯೂಜಿಲೆಂಡ್‌ ತಯಾರಿಗೆ ನೆರವಾಗಲಿದೆ,' ಎಂದು ಸ್ಪಾರ್ಕ್‌ ಸ್ಪೋರ್ಟ್ಸ್‌ ಜೊತೆ ವಾನ್ ಹೇಳಿದ್ದಾರೆ.

Story first published: Wednesday, May 19, 2021, 16:36 [IST]
Other articles published on May 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+