Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ವೇಗಿ ಉಮೇಶ್ ಮನೆಯಲ್ಲಿ ಕಳ್ಳತನ

ನಾಗ್ಪುರ್, ಜುಲೈ 18: ಟೀಂ ಇಂಡಿಯಾದ ಪ್ರಮುಖ ವೇಗಿ ಉಮೇಶ್ ಯಾದವ್ ಅವರ ನಾಗ್ಪುರ್ ನ ಮನೆಯಲ್ಲಿ ಕಳ್ಳತನವಾಗಿದೆ.
ಸೋಮವಾರ(ಜುಲೈ 17) ರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ 40,000 ರು ನಗದು ಕದ್ದೊಯ್ದಿದ್ದಾರೆ. ಜತೆಗೆ ಎರಡು ಮೊಬೈಲ್ ಫೋನ್ ಗಳು ನಾಪತ್ತೆಯಾಗಿವೆ.

ಈ ಘಟನೆ ನಡೆದಾಗ ಉಮೇಶ್ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ಲಕ್ಷ್ಮಿ ನಗರ ಬಡಾವಣೆಯಲ್ಲಿರುವ ಉಮೇಶ್ ಅವರ ಮನೆ ಬಗ್ಗೆ ಚೆನ್ನಾಗಿ ತಿಳಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಕಂಡು ಬಂದಿದೆ.

India paceman Umesh Yadav's house burgled

ಸಮೀಪದ ಅಪಾರ್ಟ್ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು ಇತ್ತೀಚೆಗೆ ಉಮೇಶ್ ಮನೆಯಲ್ಲಿ ರಿಪೇರಿ ಕೆಲಸಕ್ಕಾಗಿ ಬಂದಿದ್ದರು. ಇವರಲ್ಲೇ ಯಾರಾದರೂ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಒಬ್ಬನನ್ನು ವಿಚಾರಣೆಗೊಳಪಡಿಸಲಾಗಿದೆ. ಕಳ್ಳರನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಬಿ. ಆರ್ ಖಂಡಾಲೆ ಹೇಳಿದ್ದಾರೆ.

ಜೋಗಿಂದರ್ ಶರ್ಮ್ ಅವರ ಅಂಗಡಿಯಲ್ಲಿದ್ದ ಅವರ ತಂದೆ ಮೇಲೆ ಹಲ್ಲೆ, ಮೊಹಮ್ಮದ್ ಶಮಿ ಮನೆಗೆ ನುಗ್ಗಲು ಯತ್ನ ಘಟನೆ ನಂತರ ಈಗ ವೇಗಿ ಉಮೇಶ್ ಯಾದವ್ ಅವರ ಮನೆಯಲ್ಲಿ ಕಳ್ಳತನದ ಸುದ್ದಿ ಬಂದಿದೆ.(ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
Read in English: Umesh Yadav's house burgled
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+