Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಧವಾರದಿಂದ ಭಾರತೀಯ ಆಟಗಾರರಿಗೆ 2 ವಾರಗಳ ಕ್ವಾರಂಟೈನ್

https://kannada.mykhel.com/cricket/rashmika-mandanna-supports-rcb-in-the-ipl-but-is-not-a-fan-of-virat-kohli-017964.html
England ಪ್ರವಾಸಕ್ಕು ಮುನ್ನ ಟೀಮ್ ಇಂಡಿಯಾ ಲಾಕ್ | Oneindia Kannada

ನವದೆಹಲಿ: ಇಂಗ್ಲೆಂಡ್ ಪ್ರವಾಸ ಹೋಗಲಿರುವ ಟೀಮ್ ಇಂಡಿಯಾ ಆಟಗಾರರು ಮೇ 19ರ ಬುಧವಾರದಿಂದ ಮುಂಬೈಯಲ್ಲಿ 2 ವಾರಗಳ ಕ್ವಾರಂಟೈನ್ ಪಾಲಿಸಲಿದ್ದಾರೆ. ಭಾರತೀಯರ ಇಂಗ್ಲೆಂಡ್ ಪ್ರವಾಸ ಸರಣಿ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಮೂಲಕ ಜೂನ್ 18ರಿಂದ ಆರಂಭಗೊಳ್ಳಲಿದೆ.

ಮುಂಬೈ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿದ ಬಳಿಕ ತಂಡ ಜೂನ್ 2ಕ್ಕೆ ಇಂಗ್ಲೆಂಡ್‌ಗೆ ಹಾರಲಿದೆ. ಬಳಿಕ ಅಲ್ಲೂ ಭಾರತೀಯ ಆಟಗಾರರು ಸೌತಾಂಪ್ಟನ್‌ನಲ್ಲಿ 10 ದಿನಗಳ ಕ್ವಾರಂಟೈನ್ ಪಾಲಿಸಲಿದ್ದಾರೆ. ಈ ಐಸೊಲೇಶನ್ ಪ್ರಕ್ರಿಯೆ ತಂಡಕ್ಕೆ ಅನುಮತಿಸಲಾದ ಹೋಟೆಲ್‌ನಲ್ಲಿ ನಡೆಯಲಿದೆ.

ಸೌತಾಂಪ್ಟನ್ ಜೈವಿಕ ಪರದೆಯೊಳಗಿರುವ ಆಟಗಾರರಿಗೆ ಸಣ್ಣ ವಿಭಾಗಗಳಾಗಿ ವಿಂಗಡಣೆಯಾಗಿ ಅಭ್ಯಾಸ ನಡೆಸಲು ಅನುಮತಿ ನೀಡಲಾಗಿದೆ. ಜೂನ್ 2ರಿಂದ ಆರಂಭಗೊಳ್ಳುವ ಕ್ವಾರಂಟೈನ್, ಜೂನ್ 12ಕ್ಕೆ ಕೊನೆಗೊಳ್ಳಲಿದೆ. ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ಮಹಿಳಾ ಆಟಗಾರ್ತಿಯರೂ ಇದೇ ಕ್ವಾರಂಟೈನ್ ನಿಯಮ ಪಾಲಿಸಲಿದ್ದಾರೆ.

ಮುಂಬೈಯಲ್ಲಿ ವಾಸವಿರುವ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಟೆಸ್ಟ್‌ ಉಪನಾಯಕ ಅಜಿಂಕ್ಯ ರಹಾನೆ ಮುಖ್ಯ ಕೋಚ್ ರವಿ ಶಾಸ್ತ್ರಿ ಮೊದಲಾದವರು ಶೀಘ್ರ ಮುಂಬೈ ಹೋಟೆಲ್‌ಗೆ ಕ್ವಾರಂಟೈನ್‌ಗಾಗಿ ಸೇರಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಪ್ರವಾಸ ಆಂಗ್ಲರ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನೂ ಒಳಗೊಂಡಿರಲಿದೆ. ಆಗಸ್ಟ್ 4ರಿಂದ ಈ ಸರಣಿ ಆರಂಭಗೊಳ್ಳಲಿದೆ.

Story first published: Tuesday, May 18, 2021, 13:21 [IST]
Other articles published on May 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+