ದಕ್ಷಿಣ ಆಫ್ರಿಕಾದ 9 ವರ್ಷದ ದಾಖಲೆಗೆ ಟೀಂ ಇಂಡಿಯಾ ಅಡ್ಡಗಾಲು
ನಾಗ್ಪುರ, ನ.24: ವಿದೇಶದ ನೆಲಗಳಲ್ಲಿ ಸತತವಾಗಿ 10 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿರುವ ದಕ್ಷಿಣ ಆಫ್ರಿಕಾದ ಸಾಧನೆಗೆ ಅಡ್ಡಗಾಲು ಹಾಕಲು ಟೀಂ ಇಂಡಿಯಾ ಸಜ್ಜಾಗಿದೆ. ನ.25ರಿಂದ ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ಉಭಯ ದೇಶಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
14 ಟೆಸ್ಟ್ ಸರಣಿ ಪೈಕಿ 10 ಟೆಸ್ಟ್ ಸರಣಿ ಗೆದ್ದು ಹೊಸ ದಾಖಲೆ ಬರೆದ ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ವಿರಾಟ್ ಕೊಹ್ಲಿ ಪಡೆ ಸಿದ್ಧವಾಗುತ್ತಿದೆ. 2006ರಲ್ಲಿ ಶ್ರೀಲಂಕಾ ವಿರುದ್ಧ 0-2ರಲ್ಲಿ ಸರಣಿ ಗೆದ್ದ ದಕ್ಷಿಣ ಆಫ್ರಿಕಾ ಇಲ್ಲಿ ತನಕ ಯಾವುದೇ ಟೆಸ್ಟ್ ಸರಣಿಯನ್ನು ವಿದೇಶದಲ್ಲಿ ಸೋತಿಲ್ಲ.
2008-09 ಹಾಗೂ 2012-13ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದಿದ್ದು ದೊಡ್ಡ ಸಾಧನೆ. ಇಂಗ್ಲೆಂಡ್ ವಿರುದ್ಧ 2008ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ 2010ರಲ್ಲಿ, ನ್ಯೂಜಿಲೆಂಡ್ ನಲ್ಲಿ 2011-12ರಲ್ಲಿ, ಪಾಕಿಸ್ತಾನ ವಿರುದ್ಧ 2007-08ರಲ್ಲಿ, ಶ್ರೀಲಂಕಾ ವಿರುದ್ಧ 2014ರಲ್ಲಿ ಹಾಗೂ ಬಾಂಗ್ಲಾದೇಶ ವಿರುದ್ಧ 2007-08 ಮತ್ತು ಜಿಂಬಾಬ್ವೆ ವಿರುದ್ಧ 2007-08ರಲ್ಲಿ ಗೆಲುವು ಸಾಧಿಸಿದೆ.[ಅಂತಿಮ ಟೆಸ್ಟ್ ಪಂದ್ಯಕ್ಕೆ ಹೈಕೋರ್ಟ್ ಅನುಮತಿ]

ಭಾರತ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸದ್ಯಕ್ಕೆ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲದೆ, ಈ ಹಿಂದಿನ ಪ್ರವಾಸದಲ್ಲೂ ದಕ್ಷಿಣ ಆಫ್ರಿಕಾ ಹೆಚ್ಚಿನ ಸಾಧನೆ ತೋರಿರಲಿಲ್ಲ. 2007-08 (ಮೂರು ಟೆಸ್ಟ್ ಸರಣಿ) ಹಾಗೂ 2009-10 (2 ಟೆಸ್ಟ್ ಪಂದ್ಯಗಳ ಸರಣಿ) ಎರಡರಲ್ಲೂ ಭಾರತದೊಡನೆ 1-1ರಲ್ಲಿ ಸರಣಿ ಸಮವಾಗಿತ್ತು.[ಇನ್ನೆರಡು ಟೆಸ್ಟ್ ಪಂದ್ಯಗಳಿಗೆ ಬದಲಾವಣೆ ಬೇಕಿಲ್ಲ: ಕೊಹ್ಲಿ]
ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ 2010-11ರಲ್ಲಿ ಯುಎಇನಲ್ಲಿ ನಡೆದ ಸರಣಿಯಲ್ಲಿ 0-0 ಸಮಬಲ ಸಾಧಿಸಿತ್ತು. ಇಂಗ್ಲೆಂಡ್ ವಿರುದ್ಧ 2009-10ರಲ್ಲಿ 1-1ರಲ್ಲಿ ಸರಣಿ ಸಮ ಹಾಗೂ ಬಾಂಗ್ಲಾದೇಶದಲ್ಲಿ 2015ರಲ್ಲಿ 0-0 ರಂತೆ ಸರಣಿ ಸಮವಾಗಿತ್ತು.
1999-00ರಲ್ಲಿ ಹ್ಯಾನ್ಸಿ ಕ್ರೋನಿಯೇ ನಾಯಕತ್ವದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ತಂಡ ಮಾತ್ರ ಗೆಲುವು ಸಾಧಿಸಿದೆ. 1996-97(1-2 ಮೂರು ಟೆಸ್ಟ್ ಸರಣಿ), 2004-05ರಲ್ಲಿ (0-1 ಎರಡು ಟೆಸ್ಟ್ ಗಳ ಸರಣಿ) ಸೋಲು ಕಂಡಿದ್ದರೆ 2007-08 ಹಾಗೂ 2009-10ರಲ್ಲಿ ಡ್ರಾ ಸಾಧಿಸಿತ್ತು. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications