For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಅಭ್ಯಾಸ ಪಂದ್ಯ: ಅರ್ಧ ಶತಕ ಸಿಡಿಸಿ ಅಬ್ಬರಿಸಿದ ರೋಹಿತ್, ಯಶಸ್ವಿ

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ. ಜುಲೈ 12ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ಹಿನ್ನಡೆಯಲ್ಲಿ ಟೀಮ್ ಇಂಡಿಯಾ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಆರಂಬಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಯಶಸವು ಜೈಸ್ವಾಲ್ ಇಬ್ಬರು ಕೂಡ ಅರ್ಥ ಶತಕ ಸಿಡಿಸಿ ಮಿಂಚಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಅಗ್ಗಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದಾರೆ.

ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ 9 ದಿನಗಳ ಮುನ್ನವೇ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ತಲುಪಿದ್ದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಬೇಕಾದಷ್ಟು ಸಮಯಾವಕಾಶವನ್ನು ಹೊಂದಿದೆ. ಈ ಸಂದರ್ಭದಲ್ಲಿ ಭಾರತ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದು ಈ ಮೂಲಕ ಸರಣಿಗೆ ಸಿದ್ಧವಾಗುತ್ತಿದೆ.

India practice match: Rohit Sharma Yashasvi Jaiswal fifty: Virat Kohli dismissed cheaply

ಅಗ್ರ ಕ್ರಮಾಂಖದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಮತ್ತು ಅಗ್ರ ಬೌಲರ್‌ಗಳಾದ ಜಯ್‌ದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಆರ್ ಅಶ್ವಿನ್, ರವೀಂದ್ರ ಜಡೇಜಾ ಎರಡು ಭಿನ್ನ ತಂಡಗಳಲ್ಲಿ ಎದುರಾಳಿಗಳಾಗು ಕಣಕ್ಕಿಳಿಯುವ ಮೂಲಕ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾರೆ.

ಮೊದಲ ಸೆಷನ್‌ನಲ್ಲಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ಅಜೇಯವಾಗುಳಿದರೂ ಊಟದ ಈ ಜೋಡಿ ಕಣಕ್ಕಿಳಿಯಲಿಲ್ಲ. ಊಟದ ವಿರಾಮದ ಬಳಿಕ ಕೊಹ್ಲಿ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಆದರೆ ಜಯದೇವ್ ಉನದ್ಕತ್ ವಿರಾಟ್ ಕೊಹ್ಲಿಯನ್ನು ಶೀಘ್ರವಾಗಿ ಔಟ್ ಮಾಡಿದ ಕಾರಣ ಹೆಚ್ಚುಕಾಲ ಕ್ರೀಸ್‌ನಲ್ಲಿ ಕೊಹ್ಲಿ ನಿಲ್ಲಲಿಲ್ಲ.

ವಿರಾಟ್ ಕೊಹ್ಲಿ ನಾಲ್ಕು ಅಥವಾ ಐದನೇ ವಿಕೆಟ್‌ನತ್ತ ಬರುವ ಎಸೆತವನ್ನು ಕೆಣಕಿ ಔಟ್ ಆಗುವುದು ಇತ್ತೀಚೆಗೆ ಸಾಮಾನ್ಯವೆಂಬಂತಾಗಿದೆ. ಇಂದಿನ ಅಭ್ಯಾಸ ಪಂದ್ಯದಲ್ಲಿಯೂ ಕೊಹ್ಲಿ ಅದೇ ರೀತಿಯಾಗಿ ವಿಕೆಟ್ ಕಳೆದುಕೊಂಡರು. ಜಯ್‌ದೇವ್ ಉನಾದ್ಕಟ್ ಕೊಹ್ಲಿಯ ಈ ದೌರ್ಬಲ್ಯವನ್ನು ಗುರುತಿಸಿ ಮಾಡಿದ ಎಸೆತಕ್ಕೆ ವಿಕೆಟ್ ಕಳೆದುಕೊಳ್ಳಬೇಕಾಯಿತು.

ಕಳೆದ ಮೂರು ವರ್ಷಗಳಿಂದೀಚೆಗೆ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿಲ್ಲ. ಆದರೆ ಕಳೆದ ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಕೊಹ್ಲಿ ಒಂದು ಶತಕವನ್ನು ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮತ್ತೆ ಕೊಹ್ಲಿ ವಿಫಲವಾದರು. ಹೀಗಾಗಿ ವಿಂಡಿಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ.

Story first published: Thursday, July 6, 2023, 12:00 [IST]
Other articles published on Jul 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+