Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India: ಇಂಗ್ಲೆಂಡ್ ದಾಖಲೆ ಮುರಿಯುವ ತವಕದಲ್ಲಿ ಭಾರತ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಿತು. ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ. ಈಡನ್ ಗಾರ್ಡನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡ ಸತತ 7ನೇ ಬಾರಿಗೆ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಇದೀಗ ಸೂರ್ಯಕುಮಾರ್ ಯಾದವ್ ಪಡೆ ಇಂಗ್ಲೆಂಡ್ ದಾಖಲೆಯಿಂದ ಕೇವಲ 2 ಹೆಜ್ಜೆ ದೂರದಲ್ಲಿದೆ.

ಇಂಗ್ಲೆಂಡ್ ತಂಡ ಒಂದೇ ಮೈದಾನದಲ್ಲಿ ಸತತವಾಗಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಹೊಂದಿದೆ. ಇಂಗ್ಲೆಂಡ್ ಮಾಡಿರುವ ಈ ದಾಖಲೆಯನ್ನು ಬ್ರೇಕ್ ಮಾಡಲು ಭಾರತ ಕಣ್ಣಿಟ್ಟಿದೆ.

India ready to break England record for most consecutive T20I wins at same ground

ಕಾರ್ಡಿಫ್‌ ಮೈದಾನದಲ್ಲಿ ಇಂಗ್ಲೆಂಡ್ ತಂಡ 2010 ರಿಂದ 2021 ರವರೆಗೆ ಸತತ 8 ಟಿ20 ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ ಒಂದೇ ಮೈದಾನದಲ್ಲಿ ಸತತವಾಗಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಗೆದ್ದಿರುವ ದಾಖಲೆಯ ಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಕರಾಚಿ ಮೈದಾನದಲ್ಲಿ 2008 ರಿಂದ 2021 ರವರೆಗೆ ಸತತ 7 ಬಾರಿ ಟಿ20 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಎರಡನೇ ಸ್ಥಾನದಲ್ಲಿದೆ. ಇದೀಗ ಈಡನ್ ಗಾರ್ಡನ್‌ನಲ್ಲಿ ಸತತ 7 ಟಿ20 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನಗಳಲ್ಲಿ ಭಾರತ ಈಡನ್ ಗಾರ್ಡನ್‌ನಲ್ಲಿ ಕೇವಲ 2 ಟಿ20 ಪಂದ್ಯಗಳನ್ನು ಗೆದ್ದರೆ ಇಂಗ್ಲೆಂಡ್ ದಾಖಲೆ ಬ್ರೇಕ್ ಮಾಡಲಿಡೆ.

ಟೀಮ್ ಇಂಡಿಯಾ ಮುನ್ನಡೆ

ಇಂಗ್ಲೆಂಡ್ ವಿರುದ್ಧ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಅರ್ಷದೀಪ್ ಮೊದಲ 15 ನಿಮಿಷಗಳಲ್ಲಿ ಟೀಮ್ ಇಂಡಿಯಾಕ್ಕೆ 2 ವಿಕೆಟ್ ಉರುಳಿಸಿದರು. ಇದಾದ ಬಳಿಕ ವರುಣ್ ಚಕ್ರವರ್ತಿ ಸ್ಪಿನ್ ಬೌಲಿಂಗ್ ಮ್ಯಾಜಿಕ್ ಮಾಡುವ ಮೂಲಕ 3 ಬ್ಯಾಟರ್‌ಗಳನ್ನು ಬಲಿ ಪಡೆದರು. ಇದರ ಹೊರತಾಗಿಯೂ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ 132 ರನ್ ಗಳಿಸಿತು. ಈ ಗುರಿಯನ್ನು ಭಾರತ 12.5 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ತಲುಪಿತು.

ಒನ್ ಮ್ಯಾನ್ ಆರ್ಮಿ

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಗೆಲುವಿನ ಹೀರೋ ಎನಿಸಿಕೊಂಡರು. ಅವರು ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದೊಂದಿಗೆ 79 ರನ್‌ಗಳ ಭರ್ಜರಿ ಇನ್ನಿಂಗ್ಸ್‌ ಆಡಿದರು. ಸಂಜು ಸ್ಯಾಮ್ಸನ್ ಕೂಡ ಉತ್ತಮ ಆರಂಭವನ್ನು ನೀಡಿದರು. ಆದರೆ ಸಂಜು 26 ರನ್ ಗಳಿಸಿ ಔಟಾದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಜನವರಿ 25 ರಂದು ಚೆನ್ನೈನಲ್ಲಿ ನಡೆಯಲಿದೆ.

Story first published: Thursday, January 23, 2025, 16:40 [IST]
Other articles published on Jan 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+