ಬಾರ್ಡರ್ -ಗವಾಸ್ಕರ್ ಟ್ರೋಫಿ ಕಸಿದುಕೊಂಡ ಭಾರತಕ್ಕೆ ಬಹುಪರಾಕ್
ಧರ್ಮಶಾಲ, ಮಾರ್ಚ್ 28: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
| ಗ್ಯಾಲರಿ: ಆಸೀಸ್ ವಿರುದ್ಧ ಭಾರತಕ್ಕೆ ಸರಣಿ ಜಯ
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರ ಅಂತರದಿಂದ ಗೆದ್ದು, ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಮಂಗಳವಾರ(ಮಾರ್ಚ್ 28)ದಂದು ಭಾರತ ಮತ್ತೆ ಗಳಿಸಿದೆ. ಟೀಂ ಇಂಡಿಯಾದ ಸಾಧನೆಗೆ ಟ್ವಿಟ್ಟರ್ ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಪರ್ವತಗಳ ತಪ್ಪಲಿನಲ್ಲಿರುವ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ 106 ರನ್ ಚೇಸ್ ಮಾಡಿದ ಟೀಂ ಇಂಡಿಯಾ, ಚೇತೇಶ್ವರ್ ಪೂಜಾರ, ಮುರಳಿ ವಿಜಯ್ ವಿಕೆಟ್ ಕಳೆದುಕೊಂಡು 107ರನ್ ಗಳಿಸಿ ಪಂದ್ಯ ಹಾಗೂ ಸರಣಿಯನ್ನು ತನ್ನದಾಗಿಸಿಕೊಂಡಿತು.
ಕೆಎಲ್ ರಾಹುಲ್ ಅವರು ಅಜೇಯ 51ರನ್ (ಸರಣಿಯಲ್ಲಿ 6ನೇ ಅರ್ಧಶತಕ) ಗಳಿಸಿದರೆ, ನಾಯಕ ಅಜಿಂಕ್ಯ ರಾಹನೆ 38 ರನ್ ಗಳಿಸಿ ತಂಡದ ಗೆಲುವಿನ ಸಂಭ್ರಮವನ್ನು ಕಂಡರು. ಟೀಂ ಇಂಡಿಯಾಕ್ಕೆ ಬಂದಿರುವ ಅಭಿನಂದನೆ ಸಂದೇಶಗಳ ಸಂಗ್ರಹ ಇಲ್ಲಿದೆ...

ಸಂಘಟಿತ ಹೋರಾಟಕ್ಕೆ ಜಯ
ಧರ್ಮಶಾಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲ್ಲಲು ಸಂಘಟಿತ ಹೋರಾಟ ಕಾರಣವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ ನಾಲ್ಕು ವಿಕೆಟ್, ಉಮೇಶ್ ಯಾದವ್, ಅರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಮೂರು ವಿಕೆಟ್, ಎರಡು ಇನ್ನಿಂಗ್ಸ್ ಗಳಲ್ಲಿ ಕೆಎಲ್ ರಾಹುಲ್ ಅರ್ಧಶತಕ ಪಂದ್ಯದ ಮುಖ್ಯಾಂಶಗಳಾಗಿವೆ
ಗೆಲುವಿನ ಸಂಭ್ರಮ
ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾದ ಸಂಭ್ರಮವನ್ನು ವಿಡಿಯೋ ಮೂಲಕ ನೋಡಿ
ಸಚಿನ್ ರಿಂದ ಅಭಿನಂದನೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿ, ಇಂಡಿಯಾ, ಇಂಡಿಯಾ ಎಂದು ಚಿಯರ್ ಮಾಡಿದ್ದಾರೆ.
ಶಿಖರ್ ಧವನ್ ರಿಂದ ಟ್ವೀಟ್
ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟ್ವೀಟ್ ಮಾಡಿ, ಇದು ನಾಕೌಟ್ ಪಂಚ್ ಎಂದಿದ್ದಾರೆ.
ಶುಭ ಹಾರೈಸಿದ ಭಜ್ಜಿ
ಟೀಂ ಇಂಡಿಯಾದ ಯಶಸ್ವಿ ಬೌಲರ್ ಹರ್ಭಜನ್ ಸಿಂಗ್ ಅವರು ಟ್ವೀಟ್ ಮಾಡಿ, ಇದು ಶ್ರೇಷ್ಠ ಗೆಲುವು ಎಂದಿದ್ದಾರೆ.
ಸೆಹ್ವಾಗ್ ರಿಂದ ಆಟಗಾರರ ವಿವರಣೆ
ವೀರೇಂದ್ರ ಸೆಹ್ವಾಗ್ ರಿಂದ ಪ್ರತಿ ಆಟಗಾರರಿಗೆ ವಿಶಿಷ್ಟ ಹೆಸರುಗಳನ್ನು ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಶೇನ್ ವಾರ್ನ್ ಟ್ವೀಟ್
ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಟ್ವೀಟ್ ಮಾಡಿ ಯುವ ಆಟಗಾರರನ್ನು ಹೊಂದಿರುವ ಆಸ್ಟ್ರೇಲಿಯಾ ಕೂಡಾ ಉತ್ತಮ ಪ್ರದರ್ಶನ ನೀಡಿದರು ಎಂದಿದ್ದಾರೆ.
ನಿಜಕ್ಕೂ ನಾನು ಎಂಜಾಯ್ ಮಾಡಿದೆ
ನಾನು ತುಂಬಾ ಎಂಜಾಯ್ ಮಾಡಿದ ಸರಣಿ ಇದು, ಉಭಯ ತಂಡಗಳಿಂದ ಉತ್ತಮ ಪ್ರದರ್ಶನ ಕಂಡು ಬಂದಿತು ಎಂದ ಮಾಜಿ ನಾಯಕ, ಕಾಮೆಂಟೆಟರ್ ಮೈಕಲ್ ಕ್ಲಾರ್ಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications