For Quick Alerts
ALLOW NOTIFICATIONS  
For Daily Alerts
 

IND vs NZ Test: ತವರಿನಲ್ಲಿ ಭಾರತದ ಕನಿಷ್ಠ ಮೊತ್ತ: ದಾಖಲೆಯ ಪುಟ ಸೇರಿದ ಬೆಂಗಳೂರು ಟೆಸ್ಟ್‌

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಮೊದಲ ಟೆಸ್ಟ್‌ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಇದು ತಪ್ಪು ನಿರ್ಧಾರ ಎಂದು ತಿಳಿಯಲು ರೋಹಿತ್‌ಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಡಿಯಲ್ಲಿ ಆಡಲಾಗುತ್ತಿರುವ ಟೆಸ್ಟ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪಂದ್ಯದ ಮೊದಲ ದಿನಕ್ಕೆ ಮಳೆ ಕಾಟ ನೀಡಿತ್ತು. ಆದರೆ ಎರಡನೇ ದಿನದಾಟದ ನಿಗದಿತ ಸಮಯಕ್ಕೂ ಮುಂಚಿತವಾಗಿ ಆರಂಭವಾಯಿತು. ಟಾಸ್‌ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಇನಿಂಗ್ಸ್‌ನ 10 ಓವರ್‌ ಇನ್ನು ಮುಗಿದಿರಲಿಲ್ಲ. ಅದಾಗಲೇ ಟೀಮ್ ಇಂಡಿಯಾದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಪೆವೆಲಿಯನ್‌ ಸೇರಿ ಆಗಿತ್ತು. ವಿರಾಟ್‌ ಕೊಹ್ಲಿ ರೋಹಿತ್‌ ಶರ್ಮಾ ಎಲ್ಲರೂ ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದ್ದರು.

India Records Lowest Total at Home in Bangalore Test Against New Zealand

ನ್ಯೂಜಿಲೆಂಡ್‌ ವಿರುದ್ಧ ದಾಖಲಿಸಿದ ಕನಿಷ್ಠ ಮೊತ್ತ

ಬೆಂಗಳೂರಿನಲ್ಲಿ ಟೀಮ್ ಇಂಡಿಯಾ 46 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹಲವು ದಾಖಲೆಗಳನ್ನು ಬರೆಯಿತು. ಎದುರಾಳಿ ನ್ಯೂಜಿಲೆಂಡ್‌ ತಂಡದ ವಿರುದ್ಧ ಕಲೆ ಹಾಕಿದ ಕನಿಷ್ಠ ಸ್ಕೋರ್‌ ಎಂಬ ಖ್ಯಾತಿಗೆ ಈ ಟೆಸ್ಟ್‌ ಪಾಲಾಯಿತು. ಇದಕ್ಕೂ ಮೊದಲು ಟೀಮ್ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ 1976 ರಲ್ಲಿ ವೆಲ್ಲಿಂಗ್ಟನ್‌ ನಲ್ಲಿ 81 ರನ್‌ ಕಲೆ ಹಾಕಿದ್ದು ಕನಿಷ್ಠ ಮೊತ್ತವಾಗಿತ್ತು. ಇನ್ನು ತವರಿನಲ್ಲಿ ಕಿವೀಸ್‌ ವಿರುದ್ಧ 1969ರಲ್ಲಿ ಹೈದರಾಬಾದ್‌ನಲ್ಲಿ ಟೀಮ್ ಇಂಡಿಯಾ 89 ರನ್‌ಗಳಿಗೆ ಆಲೌಟ್‌ ಆಗಿತ್ತು.

ತವರಿನಲ್ಲಿ ದಾಖಲಾದ ಕಡಿಮೆ ಸ್ಕೋರ್‌

ಅಂದಹಾಗೆ ಟೀಮ್ ಇಂಡಿಯಾ ತವರಿನಲ್ಲಿ ದಾಖಲಿಸಿದ ಕಡಿಮೆ ಸ್ಕೋರ್ ಇದಾಗಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ದೆಹಲಿಯ ಫಿರೋಜ್‌ ಶಾ ಕೋಟ್ಲಾ ಅಂಗಳದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 1987ರಲ್ಲಿ 75 ರನ್‌ ಕಲೆ ಹಾಕಿದ್ದೆ ಕನಿಷ್ಠ ಸ್ಕೋರ್ ಆಗಿತ್ತು.

ಬೆಂಗಳೂರಿನಲ್ಲಿ ದಾಖಲಾದ ಲೋ ಸ್ಕೋರ್‌

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಇದನ್ನು ಹಿಡಿದು 25 ಟೆಸ್ಟ್‌ ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ದಾಖಲಿಸಿದ ಲೋ ಸ್ಕೋರ್ ಇದಾಗಿದೆ. ಇದಕ್ಕೂ ಮೊದಲು ವೆಸ್ಟ್‌ ಇಂಡೀಸ್‌ ವಿರುದ್ಧ 1974ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 118 ರನ್‌ ದಾಖಲಿಸಿದ್ದು ಕಡಿಮೆ ಸ್ಕೋರ್ ಆಗಿತ್ತು. ಈಗ ಈ ಪಂದ್ಯ ಆ ದಾಖಲೆಯನ್ನು ಸಹ ಅಳಿಸಿ ಹಾಕಿದೆ.

ಭಾರತದ ಐದು ಕನಿಷ್ಠ ಸ್ಕೋರ್

ರನ್‌ ವಿರುದ್ಧ ವರ್ಷ
36 ಆಸ್ಟ್ರೇಲಿಯಾ ಡಿ.17, 2020
42 ಇಂಗ್ಲೆಂಡ್‌ ಜೂ20, 1974
46 ನ್ಯೂಜಿಲೆಂಡ್‌ ಅ.16, 2024
58 ಆಸ್ಟ್ರೇಲಿಯಾ ನ.28, 1947
58 ಇಂಗ್ಲೆಂಡ್ ಜು.17, 1952

Story first published: Thursday, October 17, 2024, 13:24 [IST]
Other articles published on Oct 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+