Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!

India registered lowest Test score, exactly 4 years after posting their highest total

ಅಡಿಲೇಡ್: ಕಾಕತಾಳೀಯ ಸಂಗತಿಗಳು ಮುಖಕ್ಕೆ ಹೊಡೆದ ಹಾಗಿರತ್ತೆ ಅನ್ನೋದಕ್ಕೆ ಟೀಮ್ ಇಂಡಿಯಾವೇ ಸಾಕ್ಷಿ. ಶುಕ್ರವಾರ ಮುಕ್ತಾಗೊಂಡಿರುವ ಭಾರತ-ಆಸ್ಟ್ರೇಲಿಯಾ ಮೊದಲನೇ ಟೆಸ್ಟ್‌ನಲ್ಲಿ ಭಾರತ ತಂಡ 9 ವಿಕೆಟ್ ಹೀನಾಯಕ ಸೋಲು ಕಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಕಳಪೆ ಬ್ಯಾಟಿಂಗ್‌ನಿಂದಾಗಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಪಂದ್ಯವನ್ನು ಭಾರತ ಸೋತಿದೆ. ಅಷ್ಟೇ ಅಲ್ಲ, ಇನ್ನಿಂಗ್ಸ್‌ ಒಂದರಲ್ಲಿ ಭಾರತ ದಾಖಲಿಸಿರುವ ಅತೀ ಕಡಿಮೆ ಟೋಟಲ್ ಆಗಿ ದ್ವಿತೀಯ ಇನ್ನಿಂಗ್ಸ್‌ನ ರನ್ ಕೆಟ್ಟ ದಾಖಲೆಗೆ ಕಾರಣವಾಗಿದೆ.

ಆದರೆ ಇಲ್ಲೊಂದು ಕಾಕತಾಳೀಯ ಸಂಗತಿಯಿದೆ. ಭಾರತ ತಂಡ ಯಾವ ದಿನ ಟೆಸ್ಟ್‌ ಕ್ರಿಕೆಟ್‌ನ ಇನ್ನಿಂಗ್ಸ್‌ ಒಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿ ದಾಖಲೆ ನಿರ್ಮಿಸಿತ್ತೋ, ಅದೇ ದಿನ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಅತೀ ಕಡಿಮೆ ರನ್ ಬಾರಿಸಿದೆ!

ಕ್ರಿಕೆಟ್‌ ಜಗತ್ತಿನಲ್ಲಿ ಬಲು ಅಪರೂಪವೆನಿಸಿರುವ ಈ ಪಾಸಿಟಿವ್-ನೆಗೆಟಿವ್ ಕೋಇನ್ಸಿಡೆನ್ಸ್‌ನ ಕುತೂಹಲಕಾರಿ ಇಣುಕು ನೋಟ ಇಲ್ಲಿದೆ ನೋಡಿ.

ಭಾರತ ಅತೀ ಕಡಿಮೆ ರನ್

ಭಾರತ ಅತೀ ಕಡಿಮೆ ರನ್

ಆರಂಭಿಕ ಟೆಸ್ಟ್‌ ಪಂದ್ಯವಾಗಿ ನಡೆದಿದ್ದ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿತ್ತು. ಅಸ್ಟ್ರೇಲಿಯಾ ತಂಡ, 72.1 ಓವರ್‌ಗೆ 191 ರನ್ ಗಳಿಸಿ 53 ರನ್ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಅತೀ ಕೆಟ್ಟ ಬ್ಯಾಟಿಂಗ್‌ ಮಾಡಿತ್ತು. 21.2 ಓವರ್‌ಗೆ 9 ವಿಕೆಟ್ ಕಳೆದು 36 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 21 ಓವರ್‌ಗೆ 2 ವಿಕೆಟ್ ಕಳೆದು 93 ರನ್ ಬಾರಿಸಿ 9 ವಿಕೆಟ್ ಗೆಲುವನ್ನಾಚರಿಸಿತು.

ಭಾರತದ ಹೆಸರಲ್ಲಿ ಕೆಟ್ಟ ದಾಖಲೆ

ಭಾರತದ ಹೆಸರಲ್ಲಿ ಕೆಟ್ಟ ದಾಖಲೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದಿಷ್ಟು ತಂಡಗಳು ಅತೀ ಕಡಿಮೆ ರನ್ ಬಾರಿಸಿ ಕೆಟ್ಟ ದಾಖಲೆ ನಿರ್ಮಿಸಿವೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಗಳಿಸಿರುವ 36 ರನ್ ಟೋಟಲ್ ದಾಖಲೆ, ಕಳೆದ 65 ವರ್ಷಗಳಿಂದ ತಂಡವೊಂದು ಬಾರಿಸಿದ ಅತೀ ಕಡಿಮೆ ಟೋಟಲ್ ಆಗಿ ಗುರುತಿಸಿಕೊಂಡಿದೆ. 65 ವರ್ಷಗಳಿಂದ ಈಚೆ ಯಾವುದೇ ತಂಡ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಇಷ್ಟು ಕಡಿಮೆ ರನ್ ಬಾರಿಸಿಲ್ಲ. 1955ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಒಂದರಲ್ಲಿ 26 ರನ್ ಬಾರಿಸಿತ್ತು. ಅದಾಗಿ ಯಾವುದೇ ತಂಡ ಅತೀ ಕಡಿಮೆ ರನ್ ಬಾರಿಸಿರಲಿಲ್ಲ.

ಅತೀ ಹೆಚ್ಚು vs ಅತೀ ಕಡಿಮೆ ರನ್

ಅತೀ ಹೆಚ್ಚು vs ಅತೀ ಕಡಿಮೆ ರನ್

ವಿಚಿತ್ರವೆಂದರೆ ಭಾರತ ತಂಡ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಅದೇ ಡಿಸೆಂಬರ್ 19ರಂದು ಅತೀ ಕಡಿಮೆ ರನ್ ದಾಖಲಿಸಿದೆ. 2016ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಇಂಗ್ಲೆಂಡ್ ತಂಡ ಚೆನ್ನೈನಲ್ಲಿ 5ನೇ ಟೆಸ್ಟ್ ಪಂದ್ಯ ಆಡಿತ್ತು. ಆಗ ಒಂದೇ ಇನ್ನಿಂಗ್ಸ್‌ ಭಾರತ 190.4 ಓವರ್‌ಗೆ 7 ವಿಕೆಟ್ ಕಳೆದು 759 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 75 ರನ್‌ ಜಯ ಗಳಿಸಿತ್ತು. ಅಂದು ಸರಣಿಶ್ರೇಷ್ಠರೆನಿಸಿದ್ದ ಅದೇ ವಿರಾಟ್ ಕೊಹ್ಲಿ ಬಳಗ ಇಂದು ಅದೇ ದಿನ ಅತೀ ಕಡಿಮೆ ರನ್ ಬಾರಿಸಿ ಕೆಟ್ಟ ದಾಖಲೆ ನಿರ್ಮಿಸಿದೆ.

Story first published: Saturday, December 19, 2020, 17:39 [IST]
Other articles published on Dec 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+